-->
Facebook account deleted :  ಅವಹೇಳನ ಪೋಸ್ಟ್‌: ವಕೀಲ ಜಗದೀಶ್ ಫೇಸ್‌ಬುಕ್ ಖಾತೆ ಅಳಿಸಲು ಕೋರ್ಟ್ ಆದೇಶ

Facebook account deleted : ಅವಹೇಳನ ಪೋಸ್ಟ್‌: ವಕೀಲ ಜಗದೀಶ್ ಫೇಸ್‌ಬುಕ್ ಖಾತೆ ಅಳಿಸಲು ಕೋರ್ಟ್ ಆದೇಶ

ಅವಹೇಳನ ಪೋಸ್ಟ್‌: ವಕೀಲ ಜಗದೀಶ್ ಫೇಸ್‌ಬುಕ್ ಖಾತೆ ಅಳಿಸಲು ಕೋರ್ಟ್ ಆದೇಶ







ಫೇಸ್ ಬುಕ್ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ವಕೀಲ ಜಗದೀಶ್ ಮಹದೇವ್ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳನ್ನು ಸ್ಥಗಿತಗೊಳಿಸುವಂತೆ ನಗರದ 1ನೇ ಎಸಿಎಂಎಂ ಕೋರ್ಟ್ ಫೇಸ್ ಬುಕ್ ಕಂಪೆನಿಗೆ ಆದೇಶಿಸಿದೆ.



ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ಸೇರಿದಂತೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಗೌರವಾನ್ವಿತ ವ್ಯಕ್ತಿಗಳ ವಿರುದ್ಧ ವಕೀಲ ಜಗದೀಶ್ ಫೇಸ್ ಬುಕ್ ನಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. ಇದೇ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮಗಳು ಸೇರಿದಂತೆ ಹಲವರ ವಿರುದ್ಧ ಕ್ಷುಲ್ಲಕ ಹಾಗೂ ತೇಜೋವಧೆ ಹೇಳಿಕೆಗಳನ್ನು ಲೈವ್ ಮೂಲಕ ಪೋಸ್ಟ್ ಮಾಡಿದ್ದರು.



ಫೇಸ್ ಬುಕ್ ಲೀಗಲ್ ಮ್ಯಾನೇಜರ್ ಗೆ ನಿರ್ದೇಶನ ನೀಡಿರುವ ಬೆಂಗಳೂರು 1ನೇ ಎಸಿಎಂಎಂ ಕೋರ್ಟ್ ಈ ಎಲ್ಲ ಹೇಳಿಕೆಗಳನ್ನು ತೆರವು ಮಾಡುವಂತೆ ಸೂಚಿಸಿದೆ. ಕಳೆದ ಫೆ. 12ರಂದು ಕೋರ್ಟ್ ಆದೇಶ ಹೊರಡಿದ್ದು, ಅದರಂತೆ ಜಗದೀಶ್ ಖಾತೆ ಸ್ಥಗಿತಗೊಳಿಸಲಾಗಿದೆ.



ವಕೀಲ ಜಗದೀಶ್ ಫೇಸ್ ಬುಕ್ ಖಾತೆ ಡಿಲಿಟ್ ಆದ ಬಳಿಕ ಅವರ ಕೆಲ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಜಗದೀಶ್ ಖಾತೆ ಡಿಲೀಟ್ ಮಾಡಿದ್ದು ಯಾರು? ಯಾಕೆ ಡಿಲೀಟ್ ಮಾಡಿದರು ಎಂಬ ಪ್ರಶ್ನೆಗಳನ್ನು ಎತ್ತಿದ್ದರು.


ಇದೇ ವೇಳೆ ಜಗದೀಶ್ ಬಾಯಿ ಮುಚ್ಚಿಸಲು ಹಾಗೂ ಭ್ರಷ್ಟರನ್ನ ರಕ್ಷಿಸಲು ಪೊಲೀಸ್ ಅಧಿಕಾರಿಗಳೇ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200