-->
termination of employment in Probationary period-ಪ್ರೊಬೆಷನರಿ ಅವಧಿಯಲ್ಲಿ ಸಿಬ್ಬಂದಿಯ ಏಕಾಏಕಿ ವಜಾ ಸಲ್ಲದು: ಕರ್ನಾಟಕ ಹೈಕೋರ್ಟ್

termination of employment in Probationary period-ಪ್ರೊಬೆಷನರಿ ಅವಧಿಯಲ್ಲಿ ಸಿಬ್ಬಂದಿಯ ಏಕಾಏಕಿ ವಜಾ ಸಲ್ಲದು: ಕರ್ನಾಟಕ ಹೈಕೋರ್ಟ್

ಪ್ರೊಬೆಷನರಿ ಅವಧಿಯಲ್ಲಿ ಸಿಬ್ಬಂದಿಯ ಏಕಾಏಕಿ ವಜಾ ಸಲ್ಲದು: ಕರ್ನಾಟಕ ಹೈಕೋರ್ಟ್





ಪ್ರೊಬೆಷನರಿ ಅವಧಿಯಲ್ಲಿ ಇರುವ ಯಾವುದೇ ಸಿಬ್ಬಂದಿಯನ್ನು ಏಕಾಏಕಿ ವಜಾ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.



ಪ್ರೊಬೇಷನರಿ ಪೊಲೀಸ್‌ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ, ಅವರ ವಿರುದ್ಧ ಸೂಕ್ತ ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.



ನಿಯಮದ ಪ್ರಕಾರ ಪ್ರೊಬೆಷನರಿ ಅವಧಿಯಲ್ಲಿ ಸಿಬ್ಬಂದಿಯನ್ನು ವಜಾಗೊಳಿಸುವ ಅಧಿಕಾರ ಇಲಾಖೆಗೆ ಇದೆ. ಆದರೆ, ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್‌ ಸರ್ವೀಸ್ (ಪ್ರೊಬೇಷನ್) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ನಡೆಸಬೇಕು. ಹಾಗೆ, ತನಿಖೆ ನಡೆಸದೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಪ್ರಕರಣದ ವಿವರ

ರಮೇಶ್‌ ಮಲ್ಲಿ ಎಂಬವರು 2017 ರಲ್ಲಿ ವೈರ್‌ ಲೆಸ್‌ ವಿಭಾಗದಲ್ಲಿ ಪೊಲೀಸ್‌ ಕಾನ್ಸಟೇಬಲ್ ಆಗಿ ನೇಮಕಗೊಂಡಿದ್ದರು. ಪ್ರೊಬೇಷನರಿ ಅವಧಿಯಲ್ಲೇ ಅವರು 2018ರ ಸಿವಿಲ್‌ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದರು.



ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಯ ಆರೊಪದಲ್ಲಿ ಪೊಲೀಸರು ಅರ್ಜಿದಾರ ರಮೇಶ್‌ ಮಲ್ಲಿ ಸಹಿತ ಕೆಲವು ವ್ಯಕ್ತಿಗಳನ್ನು ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. ಅಷ್ಟರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಕೆಎಟಿ ವಜಾಗೊಳಿಸಿತ್ತು. ಹೀಗಾಗಿ, ರಮೇಶ್ ಹೈಕೋರ್ಟ್‌ ಮೊರೆ ಹೋಗಿದ್ದರು.



ಅರ್ಜಿದಾರ ರಮೇಶ್ ಮಲ್ಲಿ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ವಜಾ ಆದೇಶವನ್ನು ಎತ್ತಿಹಿಡಿದಿದ್ದ ಬೆಳಗಾವಿಯ ಕರ್ನಾಟಕ ಆಡಳಿತ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ.


'ಅರ್ಜಿದಾರರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸದೆ ವಜಾಗೊಳಿಸಲಾಗಿದೆ. ಅವರ ಅಹವಾಲು ಆಲಿಸಿಲ್ಲ' ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. 'ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಆರೋಪ ಅರ್ಜಿದಾರನ ಮೇಲಿತ್ತು. ಅದನ್ನು ಆಧರಿಸಿಯೇ ವರದಿ ತರಿಸಿಕೊಂಡು ನಿಯಮದಂತೆಯೇ ವಜಾಗೊಳಿಸಲಾಗಿದೆ’ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

Ads on article

Advertise in articles 1

advertising articles 2

Advertise under the article