Income limit raised to get BPL Card - ಬಿಪಿಎಲ್ ಕಾರ್ಡಿಗೆ ಆದಾಯ ಮಿತಿ ಹೆಚ್ಚಳ
Income limit raised to get BPL Card - ಬಿಪಿಎಲ್ ಕಾರ್ಡಿಗೆ ಆದಾಯ ಮಿತಿ ಹೆಚ್ಚಳ
ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಈಗ ಇರುವ ಆರ್ಥಿಕ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಈ ಹಿಂದೆ ವಾರ್ಷಿಕ 32 ಸಾವಿರ ರೂಪಾಯಿಗಳಿಗೆ ಮೇಲ್ಪಟ್ಟ ಆದಾಯ ಇರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನಿರಾಕರಿಸಲಾಗುತ್ತಿತ್ತು. ಈ ಮಿತಿಯನ್ನು ಇದೀಗ 1.20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅದೇ ರೀತಿ, ನಗರ ಪ್ರದೇಶದಲ್ಲಿ ಈ ಹಿಂದೆ 87000 ರೂ.ಗಳ ಆದಾಯ ಮಿತಿ ಇತ್ತು. ಇದನ್ನು ಮೂರು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯ ಒಬ್ಬರು ಮಾಡಿರುವ ತಪ್ಪಿನಿಂದ ಬಡವರಿಗೆ ಆದಾಯ ಪ್ರಮಾಣ ಪತ್ರ ಪಡೆಯಲು ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಸರಕಾರ ಇದುವರೆಗೂ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆರ್ಥಿಕ ಮಾನದಂಡವನ್ನು ಪರಿಷ್ಕರಿಸಿದೆ ಎಂದು ಅವರು ಹೇಳಿದ್ದಾರೆ.