Dist Judge Exam List announced- ಜಿಲ್ಲಾ ನ್ಯಾಯಾಧೀಶರ ಪೂರ್ವಭಾವಿ ಪರೀಕ್ಷೆ: 308 ಅಭ್ಯರ್ಥಿಗಳು ಪಾಸ್!
Thursday, March 3, 2022
ಜಿಲ್ಲಾ ನ್ಯಾಯಾಧೀಶರ ಪೂರ್ವಭಾವಿ ಪರೀಕ್ಷೆ: 308 ಅಭ್ಯರ್ಥಿಗಳು ಪಾಸ್!
ಕಳೆದ ಫೆಬ್ರವರಿ 5, 2022ರಂದು ಬೆಂಗಳೂರಿನಲ್ಲಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ 308 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಯಶಸ್ವೀ ಪರೀಕ್ಷಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಪಾಸಾಗಿರುವ ಅಭ್ಯರ್ಥಿಗಳ ವಿವರವನ್ನು ಪ್ರಕಟಿಸಿದೆ.
ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು ಪಾಸಾಗಿರುವ ಅಭ್ಯರ್ಥಿಗಳು ಮುಂದಿನ ಮುಖ್ಯ ಪರೀಕ್ಷೆಗೆ ಪರೀಕ್ಷಾ ಶುಲ್ಕವನ್ನು ಮಾರ್ಚ್ 18 2022ರ ಕಟ್ಟುವಂತೆ ಹೈಕೋರ್ಟ್ ಸೂಚನೆಯಲ್ಲಿ ತಿಳಿಸಲಾಗಿದೆ.
ಮುಖ್ಯ ಪರೀಕ್ಷೆಗಳು ಬೆಂಗಳೂರಿನಲ್ಲಿ ನಿಗದಿಯಾಗಿವೆ. ಮುಂದಿನ ಏಪ್ರಿಲ್ 9 ಮತ್ತು 10 ರಂದು ಬೆಂಗಳೂರಿನಲ್ಲಿ ಈ ಪರೀಕ್ಷೆಗಳು ನಡೆಯಲಿದೆ ಎಂದು ಹೈಕೋರ್ಟ್ ಹೊರಡಿಸಿರುವ ಸೂಚನ ಪತ್ರದಲ್ಲಿ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಹೈಕೋರ್ಟ್ ವೆಬ್ ಸೈಟ್ ಲಿಂಕನ್ನು ಕ್ಲಿಕ್ ಮಾಡಬಹುದು.
website: