-->
NI Act- ಖಾತೆ ಸ್ತಂಬನವಾದರೆ, ಖಾತೆಯ ಅಸ್ತಿತ್ವವನ್ನೇ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

NI Act- ಖಾತೆ ಸ್ತಂಬನವಾದರೆ, ಖಾತೆಯ ಅಸ್ತಿತ್ವವನ್ನೇ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಖಾತೆ ಸ್ತಂಬನವಾದರೆ, ಖಾತೆಯ ಅಸ್ತಿತ್ವವನ್ನೇ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಗ್ರಾಹಕರ ಬ್ಯಾಂಕ್‌ ಖಾತೆಯನ್ನು ಸ್ತಂಬನ (ಫ್ರೀಜ್) ಮಾಡಲಾಗಿದೆ ಎಂಬ ಕಾರಣಕ್ಕೆ ಆ ಖಾತೆಯ ಚೆಕ್‌ ಅಮಾನ್ಯ ಮಾಡಿದರೆ, ಆ ಬ್ಯಾಂಕ್ ಸಂಬಂಧಪಟ್ಟ ಖಾತೆಯ ಅಸ್ತಿತ್ವವನ್ನೇ ನಿರಾಕರಣೆ ಮಾಡವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಚೆಕ್ ಅಮಾನ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ವಿಕ್ರಂ ಸಿಂಗ್ Vs ಶ್ಯೋಜಿ ರಾಮ್

Crimanal Appeal 289/2022 Dated: Feb 18, 2022



ಯಾವುದೇ ಗ್ರಾಹಕರ ಚೆಕ್ ಪಾವತಿಸದೆ ಬೌನ್ಸ್ ಮಾಡಿದರೆ, ಆ ಖಾತೆ ಸ್ತಂಬನ ಮಾಡಲಾಗಿದೆ ಎಂಬ ಕಾರಣ ನೀಡಿದರೆ, ಅಂತಹ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ಗಳು ಹೊಂದಿವೆ ಎಂದು ಭಾವಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಹಾಗೂ, ಮೇಲ್ಮನವಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತು.



ವಿವರ:

ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ, ಬ್ಯಾಂಕೊಂದರ ನಿರ್ವಾಹಕರು ಒಂದು ಬ್ಯಾಂಕ್ ಖಾತೆಯು ಸ್ತಂಬನವಾಗಿದೆ (ಫ್ರೀಜ್‌ ಆಗಿದೆ) ಎಂಬ ಕಾರಣಕ್ಕೆ ಆ ಖಾತೆಚೆಕ್‌ ಅಮಾನ್ಯ ಮಾಡಿದ್ದರು. ಮತ್ತೊಂದೆಡೆ ಅಂತಹ ಯಾವುದೇ ಖಾತೆಯನ್ನು ತಮ್ಮ ಬ್ಯಾಂಕಿನಲ್ಲಿ ಆರಂಭಿಸಲಾಗಿಲ್ಲ, ನಿರ್ವಹಣೆಯನ್ನೂ ಮಾಡಲಾಗಿಲ್ಲ ಎಂದು ಸಾಕ್ಷ್ಯ ನುಡಿದಿದ್ದರು.



ಪ್ರಕರಣದಲ್ಲಿ DW-2, 3 ಹಾಗೆ ಸಾಕ್ಷ್ಯ ನುಡಿದರು ಎಂಬ ಕಾರಣಕ್ಕೆ ಪ್ರಕರಣವನ್ನು ರದ್ದುಪಡಿಸುವ ಹಾಗಿಲ್ಲ. ವಿಚಾರಣಾ ನ್ಯಾಯಾಲಯ ಈ ಬಗ್ಗೆ ಗಂಭೀರವಾದ ಮತ್ತು ಆಳವಾದ ಗಮನ ನೀಡಿ ಮರುವಿಚಾರಣೆ ನಡೆಸಬೇಕು ಎಂದು ಹೇಳಿ ರಾಜಸ್ತಾನ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿತು.


ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೆಕ್‌ ಮರಳಿಸಿದ್ದರೆ ಅದರ ಅರ್ಥ ಖಾತೆಯನ್ನು ಅಲ್ಲಿ ಆರಂಭಿಸಿ, ನಿರ್ವಹಣೆ ಮಾಡಲಾಗಿತ್ತು ಎನ್ನುವುದಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.





Ads on article

Advertise in articles 1

advertising articles 2

Advertise under the article