-->
Chattisgarh HC Judgement - ಅನುಕಂಪದ ನೇಮಕಾತಿ: ಅಕ್ರಮ ಸಂತಾನದ ಅರ್ಜಿಗಳನ್ನು ಹೇಗೆ ಪರಿಶೀಲಿಸಬೇಕು..? ಛತ್ತೀಸ್‌ಗಢ ಹೈಕೋರ್ಟ್

Chattisgarh HC Judgement - ಅನುಕಂಪದ ನೇಮಕಾತಿ: ಅಕ್ರಮ ಸಂತಾನದ ಅರ್ಜಿಗಳನ್ನು ಹೇಗೆ ಪರಿಶೀಲಿಸಬೇಕು..? ಛತ್ತೀಸ್‌ಗಢ ಹೈಕೋರ್ಟ್

ಅನುಕಂಪದ ನೇಮಕಾತಿ: ಅಕ್ರಮ ಸಂತಾನದ ಅರ್ಜಿಗಳನ್ನು ಹೇಗೆ ಪರಿಶೀಲಿಸಬೇಕು..? ಛತ್ತೀಸ್‌ಗಢ ಹೈಕೋರ್ಟ್

ಅನುಕಂಪದ ನೇಮಕಾತಿಗೆ ಸಂಬಂಧಿಸಿದಂತೆ ಛತ್ತೀಸ್ ಗಢ ಮತ್ತೊಂದು ಐತಿಹಾಸಿಕ ತೀರ್ಪು ನೀಡಿದೆ. ತಂದೆಯ ಮರಣಾನಂತರ ಅಕ್ರಮ ಸಂಬಂಧದಿಂದ ಹುಟ್ಟಿದ ಮಕ್ಕಳೂ ಅನುಕಂಪ ಆಧಾರಿತ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ


ಪ್ರಕರಣ ಪಿಯೂಷ್ ಕುಮಾರ್ ಆಂಚಲ್ Vs ಛತ್ತೀಸ್‌ಗಢ ಸರ್ಕಾರ


'ಉತ್ತರಾಧಿಕಾರ ಪ್ರಮಾಣ ಪತ್ರ' ಅಮಾನ್ಯ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಛತ್ತೀಸ್‌ಗಢ ಹೈಕೋರ್ಟ್ ಈ ತೀರ್ಪು ನೀಡಿದೆ.


'ಅಕ್ರಮ ಸಂತಾನದ ವ್ಯಕ್ತಿ ಕೂಡ ಅನುಕಂಪ ಆಧಾರಿತ ನೇಮಕಾತಿಗೆ ಅರ್ಹರಾಗಿದ್ದಾರೆ. ಈ ಕುರಿತ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಈ ಮೊದಲೇ ಪರಿಶೀಲಿಸಿ ನಿರ್ಧರಿಸಿದೆ” ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿತು. ಅರ್ಜಿದಾರರ ತಾಯಿ ಮೃತರ ಮೊದಲ ಪತ್ನಿಯೇ ಎಂಬುದು ವ್ಯಾಜ್ಯ ನಿರ್ಣಯದ ವಿಚಾರವಾಗಿತ್ತು.


2ನೇ ವಿವಾಹದಿಂದ ಜನಿಸಿದ ಮಕ್ಕಳಿಗೆ ಅನುಕಂಪದ ನೇಮಕಾತಿಗೆ ನೀಡುವುದರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ಏಕ ಸದಸ್ಯ ಪೀಠ, ತಮ್ಮ ಹಕ್ಕು ಮತ್ತು ಅರ್ಹತೆಯನ್ನು ಪ್ರತಿನಿಧಿಸಲು ಅನುವಾಗುವಂತೆ ಇಬ್ಬರೂ ಮಕ್ಕಳ ಅರ್ಜಿಗಳನ್ನು ಪರಿಗಣಿಸಬೇಕು. ಆ ಬಳಿಕ, ಅರ್ಹತೆಯ ಆಧಾರದಲ್ಲಿ 45 ದಿನಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನೇಮಕಾತಿ ಅಧಿಕಾರಿಗಳಿಗೆ ಸೂಚನೆ ನೀಡಿತು.

Ads on article

Advertise in articles 1

advertising articles 2

Advertise under the article