-->
SC/ST ಮೀಸಲು ಹುದ್ದೆ ಒಬಿಸಿಗೆ ಬದಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕಿಲ್ಲ: ಸುಪ್ರೀಂ ಕೋರ್ಟ್

SC/ST ಮೀಸಲು ಹುದ್ದೆ ಒಬಿಸಿಗೆ ಬದಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕಿಲ್ಲ: ಸುಪ್ರೀಂ ಕೋರ್ಟ್

SC/ST ಮೀಸಲು ಹುದ್ದೆ ಒಬಿಸಿಗೆ ಬದಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕಿಲ್ಲ: ಸುಪ್ರೀಂ ಕೋರ್ಟ್





ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹುದ್ದೆಗಳನ್ನು ಇತರೆ ಹಿಂದುಳಿದ ವರ್ಗಗಳಿಗೆ ಬದಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ


ಪ್ರಕರಣ: ಮನ್‌ದೀಪ್ ಕುಮಾರ್ ಮತ್ತಿತರರು Vs ಚಂಡೀಗಢ ಸರ್ಕಾರ ಮತ್ತಿರರು


ಅದೇ ರೀತಿ, ಹುದ್ದೆಗಳ ಅಂತರ್ ಬದಲಾವಣೆ ಮಾಡುವ ಅಧಿಕಾರ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಮಾತ್ರವಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.


ಖಾಲಿ ಇರುವ ಹುದ್ದೆಗಳಲ್ಲಿ ಎಸ್‌ಸಿ ವರ್ಗದ ಅರ್ಹ ಅಭ್ಯರ್ಥಿಗಳು ಇಲ್ಲದಿರುವ ಕಾರಣಕ್ಕೆ ಪರಸ್ಪರ ವಿನಿಮಯವನ್ನು ಸಂಬಂಧಿತ ಇಲಾಖೆ ಮುಖಾಂತರ ಮಾಡಬಹುದೇ ವಿನಾ ಅಧಿಕಾರಿಗಳನ್ನು ನೇಮಿಸುವ ಪ್ರಾಧಿಕಾರದ ಮೂಲಕ ಅಲ್ಲ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಜೆ ಕೆ ಮಹೇಶ್ವರಿ ಅವರಿದ್ದ ನ್ಯಾಯಪೀಠ ಹೇಳಿದೆ.


ತರಬೇತಿ ಪಡೆದ ಪ್ರಾಥಮಿಕ ಶಿಕ್ಷಕರ (ETT) ಹುದ್ದೆಗಳನ್ನು ಭರ್ತಿ ಮಾಡಲು ಪಂಜಾಬ್‌ ಸರ್ಕಾರ ನಿಷ್ಕ್ರಿಯವಾಗಿರುವ ಸಂಬಂಧ ಸಲ್ಲಿಸಲಾಗಿದ್ದ ಮನವಿಯ ಕುರಿತಂತೆ ನ್ಯಾಯಾಲಯ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಎರಡು ಪ್ರತ್ಯೇಕ ಜಾಹೀರಾತು ಪ್ರಕಟಣೆ ಮೂಲಕ ಖಾಲಿ ಹುದ್ದೆಗಳ ಬಗ್ಗೆ ತಿಳಿಸಿದರೂ ಎಸ್‌ಸಿ/ಎಸ್‌ಟಿ ವರ್ಗದಲ್ಲಿ 595 ETT ಹುದ್ದೆಗಳು ಭರ್ತಿಯಾಗದೆ ಉಳಿದಿದ್ದವು.


"ಪರಸ್ಪರ ವಿನಿಮಯ"ದ ಮೂಲಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮೇಲ್ಮನವಿದಾರರ ಇಂಗಿತವಾಗಿತ್ತು. ಆದರೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದ 6 ವರ್ಷಗಳ ನಂತರ SC/STಯಿಂದ OBC ವರ್ಗಕ್ಕೆ ಮೀಸಲಾತಿಯನ್ನು ಪರಸ್ಪರ ಬದಲಿಸುವುದು "ನಿಜವಾಗಿಯೂ ನ್ಯಾಯಸಮ್ಮತವಲ್ಲ" ಎಂದು ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200