-->
Anticipatory Bail - ಹೈಕೋರ್ಟ್ ಗಮನ ಸೆಳೆದಿದ್ದ ವಕೀಲರ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

Anticipatory Bail - ಹೈಕೋರ್ಟ್ ಗಮನ ಸೆಳೆದಿದ್ದ ವಕೀಲರ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

ಹೈಕೋರ್ಟ್ ಗಮನ ಸೆಳೆದಿದ್ದ ವಕೀಲರ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು





ರಾಜ್ಯದ ಗಮನ ಸೆಳೆದಿದ್ದ ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ವಕೀಲರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.



ಕೃತ್ಯವನ್ನು ದೃಢಪಡಿಸುವಂತಹ ಆಧಾರಗಳು ದೊರೆಯದೇ ಇರುವುದರ ಬಗ್ಗೆ ಆರೋಪಿ ಪರ ವಕೀಲರು ಹೆಚ್ಚಿನ ಒತ್ತು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಶಾಹಿದ್ ಮಂಚಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ ಎನ್‌ ಸುಬ್ರಮಣ್ಯ ಆದೇಶ ನೀಡಿದರು.



ಒಂದು ವೇಳೆ ಆರೋಪಿಯನ್ನು ಬಂಧಿಸಿದ್ದರೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.


ಕಳೆದ ಮಾರ್ಚ್‌ 5ರಂದು ಸಾಕ್ಷ್ಯ ನೀಡಲು ಕೋರ್ಟ್ ಕಲಾಪಕ್ಕೆ ಆಗಮಿಸಿದ್ದ ಮಂಚಿ ಗ್ರಾಮದ ಶಾಹೀದ್ ಎಂಬವರು ನ್ಯಾಯಾಲಯ ವಾಯ್ದೆ ನೀಡಿದ ಕಾರಣಕ್ಕೆ ವಕೀಲ ಗುರುರಾಜ್‌ ಜಿ ಎಸ್‌ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.



ಮೋಟಾರು ವಾಹನ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳಲು ಬಂದಿದ್ದ ಶಾಹೀದ್‌ ಮತ್ತು ವಕೀಲ ಗುರುರಾಜ್‌ ಅವರ ನಡುವೆ ಘರ್ಷಣೆ ಉಂಟಾಗಿತ್ತು.



ವಕೀಲ ಗುರುರಾಜ್‌ ಅವರಿಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್‌ 341, 323, 504, 506 ಹಾಗೂ ಎಸ್‌ಸಿ ಎಸ್‌ಟಿ ಕಾಯಿದೆಯ ಸೆಕ್ಷನ್‌ 3(1)(r), 3(1)(s) ಅಡಿ FIR ದಾಖಲಿಸಲಾಗಿತ್ತು.



ಘಟನೆ ಬಗ್ಗೆ ಆಕ್ರೋಶಿತ ವಕೀಲರ ಸಮುದಾಯ, ಒಂದು ವಾರ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ವ್ಯಕ್ತಪಡಿಸಿತ್ತು. ಇದು ಹೈಕೋರ್ಟ್ ಗಮನಕ್ಕೂ ಬಂದಿತ್ತು. 


ಶಾಹೀದ್ ಪರವಾಗಿ ಪರವಾಗಿ ಮಂಗಳೂರಿನ ವಕೀಲರಾದ ಕಿರಣ್‌ ರಾವ್‌ ಎಂ ಹಾಗೂ ಕೃಷ್ಣಪ್ರಸಾದ್‌ ಕೆ ವಿ ವಾದ ಮಂಡಿಸಿದ್ದರು.


“ಆರೋಪಿ ಮುಗ್ಧರಾಗಿದ್ದಾರೆ. SC/ST ದೌರ್ಜನ್ಯ ತಡೆ ಕಾಯಿದೆ ಅಡಿ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುವಂತಹ ಕೃತ್ಯ ಆರೋಪಿ ಎಸಗಿಲ್ಲ. ವಿಳಂಬವಾಗಿ ದೂರು ದಾಖಲಿಸಿರುವುದನ್ನು ನೋಡಿದರೆ ಆರೋಪಿಯನ್ನು ಉದ್ದೇಶಪೂರ್ವಕವಾಗಿ ಅಪರಾಧದಲ್ಲಿ ಸಿಲುಕಿಸಲೆಂದು ದೂರು ನೀಡಲಾಗಿದೆ" ವಕೀಲರು ಎಂದು ವಾದಿಸಿದ್ದರು.



ಪ್ರಕರಣ: ಶಾಹೀದ್ Vs ಸರ್ಕಾರ (ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ)

Ads on article

Advertise in articles 1

advertising articles 2

Advertise under the article