-->
Hyundai Motors Vs Shailendra Bhatnagar - ಕಾರಿನಲ್ಲಿ ಏರ್‌ಬ್ಯಾಗ್‌ ಅಳವಡಿಸದ ಹ್ಯೂಂಡೈ: ಕಂಪೆನಿಗೆ ದಂಡ ವಿಧಿಸಿದ ತೀರ್ಪು ಎತ್ತಿಹಿಡಿದ ಸುಪ್ರೀಂ ಆದೇಶ

Hyundai Motors Vs Shailendra Bhatnagar - ಕಾರಿನಲ್ಲಿ ಏರ್‌ಬ್ಯಾಗ್‌ ಅಳವಡಿಸದ ಹ್ಯೂಂಡೈ: ಕಂಪೆನಿಗೆ ದಂಡ ವಿಧಿಸಿದ ತೀರ್ಪು ಎತ್ತಿಹಿಡಿದ ಸುಪ್ರೀಂ ಆದೇಶ

ಕಾರಿನಲ್ಲಿ ಏರ್‌ಬ್ಯಾಗ್‌ ಅಳವಡಿಸದ ಹ್ಯೂಂಡೈ: ಕಂಪೆನಿಗೆ ದಂಡ ವಿಧಿಸಿದ ತೀರ್ಪು ಎತ್ತಿಹಿಡಿದ ಸುಪ್ರೀಂ ಆದೇಶ

ಏರ್‌ಬ್ಯಾಗ್ ಅಳವಡಿಸದೆ ಕಾರು ಡೆಲಿವರಿ ನೀಡಿದ ಪ್ರತಿಷ್ಠಿತ ವಾಹನ ತಯಾರಕಾ ಸಂಸ್ಥೆ ಹ್ಯೂಂಡೈಗೆ ಗ್ರಾಹಕರ ನ್ಯಾಯಾಲಯ ದಂಡ, ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಭರಿಸುವಂತೆ ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.


ಪ್ರಕರಣ: Hyundai Motor India Limited v. Shailendra Bhatnagar

Supreme Court of India, Dated 20-04-2022


ಪ್ರಕರಣದ ವಿವರ:


ಹ್ಯೂಂಡೈ 2015ರಲ್ಲಿ ಡೆಲಿವರಿ ನೀಡಿದ್ದ ಕ್ರೆಟಾ ಕಾರ್‌ಗೆ ಏರ್‌ ಬ್ಯಾಗ್‌ ಅಳವಡಿಸಿರಲಿಲ್ಲ. ಈ ಕಾರು 2017ರ ನವೆಂಬರ್‌ನಲ್ಲಿ ದೆಹಲಿಯಲ್ಲಿ ಅಪಘಾತಕ್ಕೀಡಾಯಿತು. ಪರಿಣಾಮ, ಆ ಸಂದರ್ಭದಲ್ಲಿ ಚಾಲಕರೂ ಆಗಿದ್ದ ಕಾರಿನ ಮಾಲೀಕರಿಗೆ ತಲೆ, ಎದೆ ಹಾಗೂ ಹಲ್ಲುಗಳಿಗೆ ಹಾನಿಯಾಗಿತ್ತು.


ಗ್ರಾಹಕರು ತಮಗೆ ಪರಿಹಾರ ನೀಡಬೇಕು ಎಂದು ಹ್ಯೂಂಡೈ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.ತಾನು ಈ ಕಾರನ್ನೇ ಖರೀದಿಸಲು ಆಯ್ಕೆ ಮಾಡಿದ್ದು ಏಕೆಂದರೆ, ಈ ಕಾರಿನಲ್ಲಿ ಏರ್‌ಬ್ಯಾಗ್‌ಗಳು ಸೇರಿದಂತೆ ಅದರ ಸುರಕ್ಷತೆಯ ವೈಶಿಷ್ಟ್ಯಗಳು. ಆದರೆ, ಕಂಪೆನಿಯು ಈ ಕಾರಿಗೆ ಏರ್‌ಬ್ಯಾಗ್‌ಗಳನ್ನು ಅಳವಡಿಸದ ಕಾರಣ ಅಪಘಾತದಲ್ಲಿ ಗಾಯಗೊಂಡಿದ್ದೇನೆ ಎಂದು ಗ್ರಾಹಕರು ವಾದಿಸಿದ್ದರು.ದೂರುದಾರ ಗ್ರಾಹಕರಿಗೆ ₹ 3 ಲಕ್ಷ ಪರಿಹಾರ ನೀಡುವಂತೆ ದೆಹಲಿ ರಾಜ್ಯ ಗ್ರಾಹಕ ಪರಿಹಾರ ಆಯೋಗ ನೀಡಿದ್ದ ತೀರ್ಪುನ್ನು ಪ್ರಶ್ನಿಸಿ ಹ್ಯೂಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್‌ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಅಲ್ಲೂ ಹ್ಯೂಂಡೈ ಕಂಪೆನಿಗೆ ಸೋಲು ಉಂಟಾಗಿ ಗ್ರಾಹಕರ ಪರ ತೀರ್ಪನ್ನು ರಾಷ್ಟ್ರೀಯ ಆಯೋಗ ಎತ್ತಿ ಹಿಡಿದಿತ್ತು.ಇದನ್ನು ಪ್ರಶ್ನಿಸಿ ಕಂಪೆನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕಂಪೆನಿಯ ಅರ್ಜಿಯನ್ನು ಸುಪ್ರೀಂ ನ್ಯಾಯಪೀಠ ವಜಾ ಮಾಡಿತ್ತು. ಸರಕಿನ ಸುರಕ್ಷತಾ ಗುಣಮಟ್ಟದ ಮೌಲ್ಯವು ಅದರ ಅಗತ್ಯಕ್ಕಿಂತ ಕಡಿಮೆಯಾಗಿದೆ. ಈ ಕಾರಣಕ್ಕೆ ಗ್ರಾಹಕರಿಗೆ ಕಂಪೆನಿ ಪರಿಹಾರ ನೀಡಲು ಬಾಧ್ಯತೆ ಹೊಂದಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.


ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಬಹುದು;


ಪ್ರಕರಣ: Hyundai Motor India Limited v. Shailendra Bhatnagar


Ads on article

Advertise in articles 1

advertising articles 2

Advertise under the article