CrPC Sec 125- ಅಪರೂಪದ ವ್ಯಭಿಚಾರ ಮಹಿಳೆಯ ಜೀವನಾಂಶದ ಹಕ್ಕಿನಿಂದ ಅನರ್ಹವಾಗಿಸದು: ದೆಹಲಿ ಹೈಕೋರ್ಟ್
ಅಪರೂಪದ ವ್ಯಭಿಚಾರ ಮಹಿಳೆಯ ಜೀವನಾಂಶದ ಹಕ್ಕಿನಿಂದ ಅನರ್ಹವಾಗಿಸದು: ದೆಹಲಿ ಹೈಕೋರ್ಟ್
ನಿರಂತರವಾಗಿ ಪದೇಪದೇ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿ ಒಟ್ಟಾಗಿ ಜೀವಿಸುವುದಕ್ಕೆ ಕಠಿಣವಾದ ಸಿಆರ್‌ಪಿಸಿ ಸೆಕ್ಷನ್ 125 (4) ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಪರೂಪಕ್ಕೊಮ್ಮೆ ಏಕಾಂತದಲ್ಲಿ ನಡೆಸುವ ವ್ಯಭಿಚಾರವು ವ್ಯಭಿಚಾರಕ್ಕಾಗಿಯೇ ಒಟ್ಟಿಗೆ ಜೀವಿಸುವುದು (Living in Adultry) ಎಂದು ಪರಿಗಣಿಸಲ್ಪಡುವುದಿಲ್ಲ. ಮತ್ತು ಈ ಕಾರಣಕ್ಕಾಗಿ ಮಹಿಳೆ ತನ್ನ ವಿಚ್ಛೇದನದ ಬಳಿಕ ಜೀವನಾಂಶದ ಹಕ್ಕಿನಿಂದ ಅನರ್ಹವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ
ಪ್ರಕರಣ: ಪ್ರದೀಪ್ ಕುಮಾರ್ ಶರ್ಮಾ Vs ದೀಪಿಕಾ ಶರ್ಮಾ
Delhi High Court, Dated 13-04-2022
ಡೈವರ್ಸ್ ಬಳಿಕ CrPC ಸೆಕ್ಷನ್ 125ರ ಅಡಿ ಪತ್ನಿಗೆ 'ಜೀವನಾಂಶ' ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ರದ್ದುಗೊಳಿಸುವಂತೆ ಕೋರಿ ಅರ್ಜಿದಾರ ಪತಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾ. ಚಂದ್ರಧಾರಿ ಸಿಂಗ್ ಅವರ ನ್ಯಾಯಪೀಠ ಇತ್ಯರ್ಥಗೊಳಿಸಿತು.
"ಈಗಾಗಲೇ ಹಲವು ಹೈಕೋರ್ಟ್‌ಗಳ ತೀರ್ಪುಗಳ ಪ್ರಕಾರ, ನಿರಂತರವಾಗಿ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿಯೇ ಒಟ್ಟಾಗಿ ಇರುವುದಕ್ಕೆ ಕಠಿಣ CrPC ಸೆಕ್ಷನ್ 125 (4) ಅನ್ವಯಿಸುತ್ತದೆ" ಎಂದು ನ್ಯಾಯಪೀಠ ಹೇಳಿದೆ.
"ವಿವಿಧ ಹೈಕೋರ್ಟ್‌ಗಳು ತೀರ್ಪುಗಳು, ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಗೆ ಜೀವನಾಂಶ ನೀಡುವುದರ ಕುರಿತು ಸ್ಪಷ್ಟತೆಯನ್ನು ನೀಡಿವೆ. CrPC ಸೆಕ್ಷನ್ 125(4) ಅನ್ನು ಅನ್ವಯಿಸಲು ಪತಿಯು ಪತ್ನಿಯ ವ್ಯಭಿಚಾರಕ್ಕಾಗಿ ಒಟ್ಟಾಗಿ ಜೀವಿಸುವ ಲಿವಿಂಗ್ ಇನ್ ವ್ಯಭಿಚಾರದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಖಚಿತ ಸಾಕ್ಷಿ ಮೂಲಕ ಸಾಬೀತುಪಡಿಸಬೇಕು. ಅಪರೂಪಕ್ಕೊಮ್ಮೆ ಏಕಾಂತದಲ್ಲಿ ನಡೆಸಿದ ವ್ಯಭಿಚಾರವು ಲಿವಿಂಗ್ ಇನ್ ವ್ಯಭಿಚಾರವಲ್ಲ" ಎಂದು ನ್ಯಾಯಾಲಯ ಹೇಳಿದೆ.
CrPC ಸೆಕ್ಷನ್ 125 ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅದಾಗ್ಯೂ, ಪತ್ನಿಯು ಲಿವಿಂಗ್ ಇನ್ ವ್ಯಭಿಚಾರದಲ್ಲಿದ್ದರೆ, ಪ್ರತ್ಯೇಕವಾಗಿದ್ದರೆ ಅಥವಾ ಸಕಾರಣವಿಲ್ಲದೇ ತನ್ನ ಪತಿಯ ಜೊತೆ ನೆಲೆಸಲು ಪತ್ನಿ ನಿರಾಕರಿಸಿದರೆ ಆಗ ಆಕೆ ಪತಿಯಿಂದ ಜೀವನಾಂಶ ಕೋರಲು ಅರ್ಹವಾಗಿರುವುದಿಲ್ಲ.
ಪ್ರಕರಣ: ಪ್ರದೀಪ್ ಕುಮಾರ್ ಶರ್ಮಾ Vs ದೀಪಿಕಾ ಶರ್ಮಾ