-->
Delay in FIR(Karnataka High court) : FIR ವಿಳಂಬ ಎಂದಾಕ್ಷಣ ತನಿಖಾ ಪ್ರಕ್ರಿಯೆ ಅಮಾನ್ಯವಲ್ಲ: ಹೈಕೋರ್ಟ್

Delay in FIR(Karnataka High court) : FIR ವಿಳಂಬ ಎಂದಾಕ್ಷಣ ತನಿಖಾ ಪ್ರಕ್ರಿಯೆ ಅಮಾನ್ಯವಲ್ಲ: ಹೈಕೋರ್ಟ್

FIR ವಿಳಂಬ ಎಂದಾಕ್ಷಣ ತನಿಖಾ ಪ್ರಕ್ರಿಯೆ ಅಮಾನ್ಯವಲ್ಲ: ಹೈಕೋರ್ಟ್






ಸಂಭವನೀಯ ಅಪರಾಧ ಕೃತ್ಯದ ಮಾಹಿತಿ ಪಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತಕ್ಷಣವೇ FIR ದಾಖಲಿಸುವುದು ಕಡ್ಡಾಯವಲ್ಲ. ಈ ಸಂದರ್ಭಗಳಲ್ಲಿ ವಿಳಂಬವಾಗಿ ದಾಖಲಿಸಿದ FIR ಕೂಡ ಮಾನ್ಯವಾಗುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.




'ಮಾನವ ಕಳ್ಳಸಾಗಣೆ'ಗಾಗಿ ನಕಲಿ ಪಾಸ್‌ಪೋರ್ಟ್ ಸಿದ್ಧಪಡಿಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಇಕ್ಬಾಲ್ ಅಹ್ಮದ್ ಎಂಬಾತ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.



ಪ್ರಕರಣ: ಇಕ್ಬಾಲ್ ಅಹ್ಮದ್ Vs ಸಿಬಿಐ ಎಸ್‌ಸಿಬಿ, ಚೆನ್ನೈ

ಕರ್ನಾಟಕ ಹೈಕೋರ್ಟ್- CRL.RP 538/2014 Dated 22-03-2022


ಸಂಭಾವ್ಯ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ದೂರವಾಣಿ ಮೂಲಕ ಮಾಹಿತಿ ಪಡೆದ ಸಂದರ್ಭದಲ್ಲಿ ಆ ಕುರಿತು ತಕ್ಷಣವೇ FIR ದಾಖಲಿಸುವುದು ಕಡ್ಡಾಯವಲ್ಲ. ಮಾಹಿತಿ ಪಡೆದ ಕೂಡಲೇ ಅಪರಾಧ ಕೃತ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಪೊಲೀಸ್ ಅಧಿಕಾರಿಯ ಮೊದಲ ಕರ್ತವ್ಯವಾಗಿರುತ್ತದೆ. 



ಒಂದೊಮ್ಮೆ ಅವರ ಸಮ್ಮುಖದಲ್ಲಿ ಅಪರಾಧ ಕೃತ್ಯ ನಡೆದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 41 ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ನಂತರ ಕಾಗ್ನಿಸೆಬಲ್ ಅಪರಾಧ ಕೃತ್ಯ ನಡೆದಿರುವ ಸನ್ನಿವೇಶದಲ್ಲಿ CrPC ಸೆಕ್ಷನ್ 154ರ ಪ್ರಕಾರ FIR ದಾಖಲಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Ads on article

Advertise in articles 1

advertising articles 2

Advertise under the article