-->
Sec 65-B(4) of Evidence Act - ಮುಂದುವರಿದ ತನಿಖೆಗಾಗಿ ಧ್ವನಿ ಮಾದರಿ ಪಡೆಯಲು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ

Sec 65-B(4) of Evidence Act - ಮುಂದುವರಿದ ತನಿಖೆಗಾಗಿ ಧ್ವನಿ ಮಾದರಿ ಪಡೆಯಲು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ

Sec 65-B(4) of Evidence Act - ಮುಂದುವರಿದ ತನಿಖೆಗಾಗಿ ಧ್ವನಿ ಮಾದರಿ ಪಡೆಯಲು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ




ಸಾಕ್ಷ್ಯ ಅಧಿನಿಯಮದ ಕಲಂ 65-B (4)ದಡಿ ದಾಖಲೆಯನ್ನು ನಿಶಾನೆಯಾಗಿ ಗುರುತಿಸಲು ಪ್ರಮಾಣಪತ್ರವನ್ನು ಒದಗಿಸುವ ಹಂತವನ್ನು ನಿರ್ದಿಷ್ಟವಾಗಿ ನಿಗದಿಪಡಿಸಿಲ್ಲ: ಪಂಜಾಬ್ ಆಂಡ್ ಹರ್ಯಾಣ ಹೈಕೋರ್ಟ್




ಮುಂದುವರಿದ ತನಿಖೆಗಾಗಿ ಆರೋಪಿಗಳ ಧ್ವನಿ ಮಾದರಿಯನ್ನು ಪಡೆಯಲು ಸಾಕ್ಷ್ಯ ಅಧಿನಿಯಮದ ಕಲಂ 65-B (4)ದಡಿ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ: : ಪಂಜಾಬ್ ಆಂಡ್ ಹರ್ಯಾಣ ಹೈಕೋರ್ಟ್



ಪ್ರಕರಣ: Sunil Kumar Gulati Vs State of Punjab, CRM-M-11141-2022, Punjab and Haryana High Court, decided on 29-03-2022



ಮುಂದುವರಿದ ವಿಚಾರಣೆಗೆ ಧ್ವನಿ ಮಾದರಿ ಪಡೆಯಲು ಅಭಿಯೋಜಕರು ಅರ್ಜಿ ಹಾಕುವ ಸಂದರ್ಭದಲ್ಲಿ 65-B (4) ಅಡಿ ಪ್ರಮಾಣ ಪತ್ರ ಹಾಕುವ ಅವಶ್ಯಕತೆ ಇಲ್ಲ. ಈ ಧ್ವನಿ ಮಾದರಿಯನ್ನು ಈಗಾಗಲೇ ಮುದ್ರಿಸಲಾಗಿರುವ ಮತ್ತು ನ್ಯಾಯಾಲಯದ ಕಡತದಲ್ಲಿ ಇರುವ ಧ್ವನಿ ಮಾದರಿಯ ತಾಳೆ ನೋಡಲು ಸಂಗ್ರಹಿಸಲಾಗುತ್ತಿದೆ ಎಂದು ನ್ಯಾಯಪೀಠ ಗಮನಿಸಿತು.



ರಿತೇಶ್ ಸಿನ್ಹ VS ಉತ್ತರ ಪ್ರದೇಶ ಸರ್ಕಾರ (2019 8 SCC 1) ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ಧ್ವನಿ ಮಾದರಿಯನ್ನು ಪಡೆದುಕೊಳ್ಳುವುದು ಸಂವಿಧಾನದ ಪರಿಚ್ಛೇದ 20(3)ರಡಿ (ವ್ಯಕ್ತಿಯ ಸ್ವಯಂ ದೋಷಾರೋಪಣೆಯಾಗುವುದಿಲ್ಲ) ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ. ಮತ್ತು ಧ್ವನಿ ಮಾದರಿಯ ಸಂಗ್ರಹ ಕೇವಲ ಈಗಾಗಲೇ ಕಡತದಲ್ಲಿ ಇರುವ ಮಾದರಿಯ ತಾಳೆ ನೋಡಲು ಸೀಮಿತ ಮತ್ತು ಅದೊಂದು ಪ್ರತ್ಯೇಕ ಸಾಕ್ಷ್ಯವಲ್ಲ ಎಂದು ಸ್ಪಷ್ಟಪಡಿಸಿತು.



ಅರ್ಜುನ್ ಪಂಡಿತ್ ರಾವ್ ಖೋಟ್ಕರ್ Vs ಕೈಲಾಶ್ ಕುಶಾನ್‌ರಾವ್ ಗೊರಂಟ್ಯಾಲ್ ಮತ್ತಿತರರು (2020 7 SCC 1) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಕ್ಷ್ಯ ಅಧಿನಿಯಮದ ಕಲಂ 65-B (4)ದಡಿ ದಾಖಲೆಯನ್ನು ನಿಶಾನೆಯಾಗಿ ಗುರುತಿಸಲು ಪ್ರಮಾಣಪತ್ರವನ್ನು ಒದಗಿಸುವ ಹಂತವನ್ನು ನಿರ್ದಿಷ್ಟವಾಗಿ ನಿಗದಿಪಡಿಸಿಲ್ಲ ಎಂಬುದು ನಿರೂಪಿತವಾಗಿದೆ ಎಂದು ಹೇಳಿತು.



ಅದೇ ರೀತಿ, ಕರ್ನಾಟಕ ಸರ್ಕಾರ Vs ಎಂ.ಆರ್. ಹಿರೇಮಠ ಪ್ರಕರಣದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಕ್ಷ್ಯ ಅಧಿನಿಯಮದ ಕಲಂ 65-B (4)ದಡಿ ದಾಖಲೆಯನ್ನು ನಿಶಾನೆಯಾಗಿ ಗುರುತಿಸಲು ಪ್ರಮಾಣಪತ್ರವನ್ನು ನೀಡದೆ ಇರುವುದು ಪ್ರಕರಣದ ಇತ್ಯರ್ಥಕ್ಕೆ ಮಾರಕವಾಗಿ ಪರಿಣಮಿಸದು ಎಂದು ಹೇಳಿತು.



ಈಗಾಗಲೇ ಕಂಪ್ಯೂಟರ್‌ನಿಂದ ಸೃಜಿಸಲಾದ ಎಲೆಕ್ಟ್ರಾನಿಕ್ ದಾಖಲೆಯನ್ನು ಸೆಕೆಂಡರಿ ಎವಿಡೆನ್ಸ್‌ ಆಗಿ ನ್ಯಾಯಾಲಯ ಮುಂದೆ ನಿವೇದಿಸಲ್ಪಟ್ಟಾಗ, ಅದನ್ನು ದೃಢಿಕರಿಸಲು ಸಾಕ್ಷ್ಯ ಅಧಿನಿಯಮದ ಕಲಂ 65-B (4)ದಡಿ ಪ್ರಮಾಣಪತ್ರವನ್ನು ನ್ಯಾಯಪೀಠದ ಮುಂದಿಡಲಾಗುತ್ತದೆ ಎಂಬುದನ್ನು ಗಮನಿಸಬಹುದು.



Sunil Kumar Gulati Vs State of Punjab, CRM-M-11141-2022








Ads on article

Advertise in articles 1

advertising articles 2

Advertise under the article