-->
Ktk HC issue Guidelines for Non Cognizable Cases- ನಾನ್ ಕಾಗ್ನಿಸಿಬಲ್ ಪ್ರಕರಣ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಮಾರ್ಗಸೂಚಿ

Ktk HC issue Guidelines for Non Cognizable Cases- ನಾನ್ ಕಾಗ್ನಿಸಿಬಲ್ ಪ್ರಕರಣ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಮಾರ್ಗಸೂಚಿ

ನಾನ್ ಕಾಗ್ನಿಸಿಬಲ್ ಪ್ರಕರಣ: ಪೊಲೀಸರಿಗೆ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್‌





'ನಾನ್ ಕಾಗ್ನಿಸಬಲ್' ಅಪರಾಧ ಪ್ರಕರಣಗಳಲ್ಲಿ ನ್ಯಾಯಾಧೀಶರ ಆದೇಶವಿಲ್ಲದೆ ಪೊಲೀಸರು FIR ದಾಖಲಿಸಿ ತನಿಖೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಪ್ರಕಟಿಸಿದೆ.



ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ 'ಅನುಮತಿ' ತನಿಖೆಗೆ 'ಆದೇಶ' ಎನ್ನಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.



ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಲು ಕೋರ್ಟ್ ಅನುಮತಿಗೆ ಪೊಲೀಸರು ಕೋರಿಕೆ ಸಲ್ಲಿಸಿದಾಗ "ಮ್ಯಾಜಿಸ್ಟ್ರೇಟ್ ಕೋರ್ಟ್" ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಹೈಕೋರ್ಟ್ ರೂಪಿಸಿದೆ.



ರಾಜಧಾನಿ ಬೆಂಗಳೂರು ನಿವಾಸಿ ಹರಿರಾಜ್ ಶೆಟ್ಟಿ ಎಂಬುವರು ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ FIR ಹಾಗೂ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.



ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಮಹತ್ವದ ಮಾರ್ಗಸೂಚಿ ರೂಪಿಸಿ ಈ ಮಹತ್ವದ ತೀರ್ಪು ನೀಡಿದೆ.



ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ತನಿಖೆಗೆ 'ಆದೇಶ' ಪಡೆದಿಲ್ಲ. ಬದಲಿಗೆ ‘ಅನುಮತಿ’ ಪಡೆದಿದ್ದಾರೆ. ಮ್ಯಾಜಿಸ್ಟ್ರೇಟ್ ‘ತನಿಖೆಗೆ ಅನುಮತಿಸಲಾಗಿದೆ’ ಎಂದಿದ್ದಾರೆ. ‘ತನಿಖೆಗೆ ಅನುಮತಿಸಲಾಗಿದೆ’ ಎಂಬುದು CrPC ಸೆಕ್ಷನ್ 155(1) ಹಾಗೂ 155(2)ರ ಅವಶ್ಯಕತೆಗಳನ್ನು ಪೂರೈಸಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.



ಹಾಗೂ, ಅರ್ಜಿದಾರರ ರಿಟ್ ಅರ್ಜಿಯನ್ನು ಪುರಸ್ಕರಿಸಿ ಅವರ ವಿರುದ್ಧ ದಾಖಲಿಸಿದ್ದ FIR ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಪ್ರಕ್ರಿಯೆಯನ್ನು ರದ್ದುಪಡಿಸಿದೆ.


ಪ್ರಕರಣ: ಹರಿರಾಜ್ ಶೆಟ್ಟಿ VS ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್ (WP 14076/2021) ದಿ. 8-03-2022


JUDGEMENT LINK : 

ಪ್ರಕರಣ: ಹರಿರಾಜ್ ಶೆಟ್ಟಿ VS ಕರ್ನಾಟಕ ಸರ್ಕಾರ








Ads on article

Advertise in articles 1

advertising articles 2

Advertise under the article