ಸೋಮವಾರ ಸಾರ್ವತ್ರಿಕ ರಜೆ: ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟ; ಹೈಕೋರ್ಟ್‌ನಿಂದಲೂ ಪ್ರಕಟಣೆ ನಿರೀಕ್ಷೆ
Saturday, April 30, 2022
ಸೋಮವಾರ ಸಾರ್ವತ್ರಿಕ ರಜೆ: ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟ; ಹೈಕೋರ್ಟ್‌ನಿಂದಲೂ ಪ್ರಕಟಣೆ ನಿರೀಕ್ಷೆ
ರಂಜಾನ್ ಹಬ್ಬವನ್ನು ಮಂಗಳವಾರದ ಬದಲಿಗೆ ಸೋಮವಾರ ಆಚರಿಸಲು ಮೂನ್ ಕಮಿಟಿಯು ನಿರ್ಧರಿಸಿರುವುದರಿಂದ ಮಂಗಳವಾರ ರಂಜಾನ್ ಪ್ರಯುಕ್ತ ಘೋಷಿಸಲಾದ ರಜೆಯನ್ನು ಸೋಮವಾರ ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಪ್ರಕಟಿಸಿದೆ.
ಶನಿವಾರ ಅಪರಾಹ್ನ ತಡವಾಗಿ ಈ ಅಧಿಸೂಚನೆಯನ್ನು ಪ್ರಕಟಿಸಿದೆ. ನೆಗೋಷಿಯೆಬಲ್ ಇನ್ಸ್‌ಸ್ಟ್ರುಮೆಂಟ್ ಆಕ್ಟ್ 1881 ಪ್ರಕಾರ ಈ ರಜೆ ಘೋಷಿಸಲಾಗಿದೆ.
ಇದೇ ವೇಳೆ, ಮಂಗಳವಾರ ಬಸವ ಜಯಂತಿ ಹಿನ್ನೆಲೆಯಲ್ಲಿ ಆ ದಿನವೂ ಪೂರ್ವನಿಗದಿಯಂತೆ ರಜೆಯಾಗಲಿದೆ.
ಇದರಿಂದಾಗಿ ಸತತ ಮೂರು ದಿನಗಳ ಕಾಲ ಬ್ಯಾಂಕ್, ಸರ್ಕಾರಿ ಕಚೇರಿಗಳು ಮುಚ್ಚಲಿದೆ.
ನೆಗೋಷಿಯೆಬಲ್ ಇನ್ಸ್‌ಸ್ಟ್ರುಮೆಂಟ್ ಆಕ್ಟ್ 1881 ಪ್ರಕಾರ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಕೂಡ ಕೋರ್ಟ್ ಕಲಾಪಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ.