-->
MP HC on Live in Relationshipಸ್ವಚ್ಚಂದ ಲೈಂಗಿಕತೆಗೆ ಲಿವ್ ಇನ್ ರಿಲೇಷನ್ ದಾರಿ ಮಾಡಿಕೊಡುತ್ತಿದೆ: ಮಧ್ಯಪ್ರದೇಶ ಹೈಕೋರ್ಟ್ ಆತಂಕ

MP HC on Live in Relationshipಸ್ವಚ್ಚಂದ ಲೈಂಗಿಕತೆಗೆ ಲಿವ್ ಇನ್ ರಿಲೇಷನ್ ದಾರಿ ಮಾಡಿಕೊಡುತ್ತಿದೆ: ಮಧ್ಯಪ್ರದೇಶ ಹೈಕೋರ್ಟ್ ಆತಂಕ

ಸ್ವಚ್ಚಂದ ಲೈಂಗಿಕತೆಗೆ ಲಿವ್ ಇನ್ ರಿಲೇಷನ್ ದಾರಿ ಮಾಡಿಕೊಡುತ್ತಿದೆ: ಮಧ್ಯಪ್ರದೇಶ ಹೈಕೋರ್ಟ್ ಆತಂಕ





ಒಂದಾಗಿ ಬಾಳು ಮಾಡುವುದು (Live in relationship) ಸಂವಿಧಾನದ 21ನೇ ವಿಧಿಯ ಮುಂದುವರಿದ ಭಾಗ. ಆದರೆ, ಇದು ಸ್ವಚ್ಚಂದ ಲೈಂಗಿಕತೆಗೆ ಉತ್ತೇಜನ ನೀಡುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


ಅಭಿಷೇಕ್ Vs ಮಧ್ಯಪ್ರದೇಶ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಪೀಠ, ಲಿವ್-ಇನ್ ಸಂಬಂಧಗಳಿಂದಾಗಿ ಅಶ್ಲೀಲತೆ, ಕಾಮಪ್ರಚೋದಕ ನಡವಳಿಕೆಗೆ ಉತ್ತೇಜನ ಸಿಗುತ್ತಿದ್ದು, ಈ ಮೂಲಕ ಲೈಂಗಿಕ ಅಪರಾಧಗಳಿಗೆ ಇವು ಕಾರಣವಾಗುತ್ತಿದೆ ಎಂದು ಹೇಳಿದೆ.


ಪ್ರಕರಣ: ಅಭಿಷೇಕ್ Vs ಮಧ್ಯಪ್ರದೇಶ ಸರ್ಕಾರ


Live in relationshipನಿಂದಾಗಿ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಸಂಬಂಧ ಸಂವಿಧಾನದ 21ನೇ ವಿಧಿಯ ಒಂದು ಭಾಗ ಎಂದು ನ್ಯಾಯಾಲಯ ಹೇಳುವ ಅನಿವಾರ್ಯತೆ ಉದ್ಭವಿಸಿದೆ. ನಮ್ಮ ಸಮಾಜದ ನೈತಿಕತೆಯನ್ನು ಇದು ಆವರಿಸಿಕೊಳ್ಳುತ್ತಿದೆ ಹಾಗೂ ಅಶ್ಲೀಲತೆ ಹಾಗೂ ಕಾಮುಕ ಕೃತ್ಯಗಳನ್ನು ಉತ್ತೇಜಿಸಿ ಇನ್ನಷ್ಟು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.


ಅರ್ಜಿದಾರರಾದ ಅತ್ಯಾಚಾರ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ತೀರ್ಪು ನೀಡಿದ್ದು, ಸಂತ್ರಸ್ತೆ ಹಾಗೂ ಆರೋಪಿಯು ಕೆಲ ವರ್ಷಗಳ ಕಾಲ ಒಂದಾಗಿ ಬಾಳುವ ಸಂಬಂಧದಲ್ಲಿ ಇದ್ದರು ಎಂಬುದನ್ನು ಗಮನಿಸಿತು.


ಸಂತ್ರಸ್ತೆಯ ದೂರನ್ನು ಪರಿಗಣಿಸಿದ ನ್ಯಾಯಪೀಠ, "ಈ ಪ್ರಕರಣ, ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ನಡೆಸಿದ ಅತ್ಯಾಚಾರವಲ್ಲ. ಮತಿ ತಪ್ಪಿಸುವ ಪೇಯ ನೀಡಿ ಆಕೆಯನ್ನು ಲೈಂಗಿಕವಾಗಿ ಪೀಡಿಸಿದ ಪ್ರಕರಣ" ಎಂದು ಅಭಿಪ್ರಾಯಪಟ್ಟಿತು.


ಘಟನೆಯ ವಿವರ:

ಅತ್ಯಾಚಾರ ಸಂತ್ರಸ್ತೆಗೆ ಅವರ ಮನೆಯವರು ಬೇರೊಬ್ಬ ವ್ಯಕ್ತಿ ಜೊತೆ ಮದುವೆ ನಿಶ್ಚಯಿಸಿದ್ದರು. ಆಕೆಯ ಜೊತೆ ಕೆಲ ಸಮಯ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದ ಆರೋಪಿ ಇದರಿಂದ ಭಗ್ನಪ್ರೇಮಿಯಾದ. ಮತಿ ತಪ್ಪಿಸುವ ಪಾನೀಯ ನೀಡಿ ಸಂತ್ರಸ್ತೆಯೊಂದಿಗಿನ ಏಕಾಂತದ ವೈಯಕ್ತಿಕ ಕ್ಷಣಗಳ ವಿಡಿಯೋ ತುಣುಕುಗಳನ್ನು ಮಾಡಿದ್ದ. ಇದನ್ನು ಸಂತ್ರಸ್ತೆಯ ಪೋಷಕರು ಹಾಗು ಭಾವಿ ಪತಿಯ ಕುಟುಂಬಸ್ಥರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದ.


ಈ ಸರಣಿ ಘಟನೆಗಳನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತು. ಮಾತ್ರವಲ್ಲ, ಅರ್ಜಿದಾರನನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತೀರ್ಪು ನೀಡಿತು.

Ads on article

Advertise in articles 1

advertising articles 2

Advertise under the article