Prostitution customer arrest- ವೇಶ್ಯಾವಾಟಿಕೆ ದಾಳಿ ವೇಳೆ ಸಿಕ್ಕಿಬಿದ್ದ ಗ್ರಾಹಕರನ್ನು ಬಂಧಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಆದೇಶ
ವೇಶ್ಯಾವಾಟಿಕೆ ದಾಳಿ ವೇಳೆ ಸಿಕ್ಕಿಬಿದ್ದ ಗ್ರಾಹಕರನ್ನು ಬಂಧಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಆದೇಶ
ವೇಶ್ಯಾವಾಟಿಕೆ ಅಡ್ಡೆ ಅಥವಾ ವೇಶ್ಯಾಗೃಹದ ಮೇಲೆ ನಡೆಯುವ ದಾಳಿ ಸಂದರ್ಭದಲ್ಲಿ ಪತ್ತೆಯಾದ ಗ್ರಾಹಕರನ್ನು ಬಂಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ವೇಶ್ಯಾಗೃಹ ದಾಳಿ ವೇಳೆ ವೇಶ್ಯಾಗೃಹದಲ್ಲಿರುವ ಗ್ರಾಹಕರನ್ನು ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸಲು ಸಾಧ್ಯವಿಲ್ಲ ಅವರ ವಿರುದ್ಧ ಅನೈತಿಕ ಕಳ್ಳಸಾಗಣೆಯ ಅಪರಾಧಗಳಿಗಾಗಿ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಎಂದು ನ್ಯಾಯಪೀಠ ಹೇಳಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ವೇಶ್ಯಾಗೃಹದ ದಾಳಿ ವೇಳೆ ಗ್ರಾಹಕ ರಾಗಿದ್ದ ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದರು. ತಮ್ಮ ಬಂಧನದ ವಿರುದ್ಧ ಅರ್ಜಿದಾರರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು
ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಅವರು ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠವನ್ನು ಕೋರಿದ್ದರು.
ವೇಶ್ಯಾವಾಟಿಕೆ ನಡೆಯುವ ಸ್ಥಳದಲ್ಲಿ ಇರುವ ಗ್ರಾಹಕರು ವೇಶ್ಯಾಗೃಹವನ್ನು ಇಟ್ಟುಕೊಳ್ಳುವುದಿಲ್ಲ ಅಥವಾ ಆವರಣವನ್ನು ವೇಶ್ಯಾವಾಟಿಕೆಯ ಬಳಸಲು ಅನುಮತಿಸುವುದಿಲ್ಲ ವೇಶ್ಯಾವಾಟಿಕೆಗೆ ಪ್ರೇರೇಪಿಸುವುದೂ ಇಲ್ಲ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿತು.
ಅರ್ಜಿದಾರ ವಿರುದ್ಧ ಸೆಕ್ಷನ್ 3 ವೇಶ್ಯಾಗೃಹ ಇರಿಸುವ ಶಿಕ್ಷೆ ಅಥವಾ ಆವರಣವನ್ನು ವೇಶ್ಯಾವಾಟಿಕೆಗಾಗಿ ಬಳಸಲು ಅನುಮತಿ, ಐಪಿಸಿ ಸೆಕ್ಷನ್ 4 ವೇಶ್ಯಾವಾಟಿಕೆಯ ಗಳಿಕೆಯ ಮೇಲೆ ಜೀವನ, ಸೆಕ್ಷನ್ 5 ವೇಶ್ಯಾವಾಟಿಕೆಗಾಗಿ ವ್ಯಕ್ತಿಯನ್ನು ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದು ಮತ್ತು ಅನೈತಿಕ ಸಂಚಾರ ತಡೆ ಕಾಯ್ದೆ(ITPA) ಮತ್ತು ಐಪಿಸಿ ಸೆಕ್ಷನ್ 370 ವ್ಯಕ್ತಿಗಳ ಕಳ್ಳಸಾಗಣೆ, ಸೆಕ್ಷನ್ 6 ವೇಶ್ಯಾವಾಟಿಕೆ ನಡೆಸುವ ಆವರಣದಲ್ಲಿ ವ್ಯಕ್ತಿಯನ್ನು ಬಂಧಿಸುವುದು ಮೊದಲಾದ ಅಪರಾಧಗಳಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು