-->
Registration And Stamp Fee- ಆಸ್ತಿ ಖರೀದಿ/ಮಾರಾಟ ಮಾಡುತ್ತಿದ್ದೀರಾ..? ಶೇಕಡಾ 10ರ ರಿಯಾಯಿತಿ ಅವಧಿ ವಿಸ್ತರಣೆ

Registration And Stamp Fee- ಆಸ್ತಿ ಖರೀದಿ/ಮಾರಾಟ ಮಾಡುತ್ತಿದ್ದೀರಾ..? ಶೇಕಡಾ 10ರ ರಿಯಾಯಿತಿ ಅವಧಿ ವಿಸ್ತರಣೆ

ಆಸ್ತಿ ಖರೀದಿ/ಮಾರಾಟ ಮಾಡುತ್ತಿದ್ದೀರಾ..? ಶೇಕಡಾ 10ರ ರಿಯಾಯಿತಿ ಅವಧಿ ವಿಸ್ತರಣೆ






ನೀವು ಆಸ್ತಿ ಖರೀದಿ ಯಾ ಮಾರಾಟ ಮಾಡುತ್ತಿದ್ದೀರಾ... ? ಹೌದು ಎಂದಾಗಿದ್ದರೆ ನಿಮಗಿದು ಸಿಹಿ ಸುದ್ದಿ.



ರಾಜ್ಯದ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಘೋಷಿಸಲಾಗಿದ್ದ ಶೇಕಡ ಹತ್ತರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ರಿಯಾಯಿತಿಯನ್ನು ವಿಸ್ತರಿಸಿದೆ. ಸರ್ಕಾರದ ಗೈಡ್‌ಲೈನ್ಸ್ ಮೌಲ್ಯಕ್ಕೂ ಇದು ಅನ್ವಯವಾಗಲಿದೆ.



2022ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಈ ರಿಯಾಯಿತಿಯನ್ನು ಘೋಷಣೆ ಮಾಡಲಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ಭಾರಿ ಸಂಖ್ಯೆಯ ಭೂ ವ್ಯವಹಾರಗಳು ದಾಖಲಾಗಿದ್ದು ಸರಕಾರದ ರಾಜ್ಯಕ್ಕೆ ದೊಡ್ಡ ಮೊತ್ತದ ಹಣ ಶುಲ್ಕದ ರೂಪದಲ್ಲಿ ಶೇಖರಣೆಯಾಗಿತ್ತು.



ಈ ಸೌಲಭ್ಯವನ್ನು ಇನ್ನೂ ಮುಂದುವರಿಸಬೇಕು ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೂರು ತಿಂಗಳ ಕಾಲ ಮುಂದುವರಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.



ಈ ನಿರ್ಧಾರದ ಪ್ರಕಾರ, ಏಪ್ರಿಲ್ ನಿಂದ ಜುಲೈವರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇಕಡ ಹತ್ತರ ರಿಯಾಯಿತಿ ಮುಂದುವರಿಯಲಿದೆ. ಮಾರ್ಗಸೂಚಿ ದರಕ್ಕೂ ಇದು ಅನ್ವಯವಾಗಲಿದೆ. ಇದು ಸ್ಥಿರ ಆಸ್ತಿಗಳ ಮಾರಾಟ ಮತ್ತು ಖರೀದಿ ಗೆ ಮಾತ್ರ ಅನ್ವಯಿಸುತ್ತದೆ.




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200