-->
Anti Conversion Oridinance- ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಗವರ್ನರ್ ಅಂಕಿತ; ಅಪರಾಧ ಎಸಗಿದರೆ ಗರಿಷ್ಠ 10 ವರ್ಷ ಜೈಲು

Anti Conversion Oridinance- ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಗವರ್ನರ್ ಅಂಕಿತ; ಅಪರಾಧ ಎಸಗಿದರೆ ಗರಿಷ್ಠ 10 ವರ್ಷ ಜೈಲು

ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಗವರ್ನರ್ ಅಂಕಿತ; ಅಪರಾಧ ಎಸಗಿದರೆ ಗರಿಷ್ಠ 10 ವರ್ಷ ಜೈಲು


ಮತಾಂತರ ನಿಷೇಧಿಸುವ 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಸುಗ್ರೀವಾಜ್ಞೆ - 2022'ಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಂಕಿತ ಹಾಕಿದ್ದು, ಸುಗ್ರೀವಾಜ್ಞೆ ತಕ್ಷಣದಿಂದಲೇ ಜಾರಿಗೆ ಬಂದಿದೆ.ರಾಜ್ಯ ವಿಧಾನ ಮಂಡಲ ಅಧಿವೇಶನ ಇಲ್ಲದ ಕಾರಣ ತಕ್ಷಣ ಅಂಕಿತ ಹಾಕುವುದು ಜರೂರು ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಂವಿಧಾನದ 213ನೇ ವಿಧಿಯ 1ನೇ ಕಲಂ ಪ್ರದತ್ತ ಅಧಿಕಾರ ಬಳಸಿ ರಾಜ್ಯಪಾಲರು ಈ ಸುಗ್ರೀವಾಜ್ಞೆ ಹೊರಡಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.ನಾಗರಿಕರ 'ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆ'ಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡಿ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರ ಮಾಡುವುದು ಅಪರಾಧವಾಗಿದೆ.ಒಬ್ಬ ವ್ಯಕ್ತಿ ತನ್ನ ಧರ್ಮ ತ್ಯಜಿಸಿ ಇತರ ಧರ್ಮಕ್ಕೆ ಮತಾಂತರವಾಗಲು ಇಚ್ಚಿಸಿದರೆ, ಕನಿಷ್ಠ 30 ದಿನ ಮುಂಚಿತವಾಗಿ ತಾನು ವಾಸಿಸುವ ಜಿಲ್ಲೆಯ ಜಿಲ್ಲಾಧಿಕಾರಿ ಯಾ ಜನ್ಮ ಸ್ಥಳದ ಜಿಲ್ಲಾ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿಗೆ ಮಾಹಿತಿ ನೀಡಬೇಕು. ಇದನ್ನು ಆಧರಿಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರು ಎಂದು ಅಧಿಸೂಚನೆ ವಿವರಿಸಿದೆ.ಈ ಸುಗ್ರೀವಾಜ್ಞೆ ಪ್ರಕಾರ ನಿಯಮ ಉಲ್ಲಂಘಿಸಿದ ಪಕ್ಷದಲ್ಲಿ ಪ್ರತಿಯೊಂದು ಅಪರಾಧವು ಸಂಜ್ಞೇಯವಾಗಿದ್ದು, ಜಾಮೀನುರಹಿತ ಅಪರಾಧವಾಗಿರುತ್ತದೆ. ಇದೇ ರೀತಿ, ಮತಾಂತರಕ್ಕೆ ಪ್ರಚೋದನೆ ನೀಡುವವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.2021ರ ಡಿಸೆಂಬರ್‌ನಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಕಾಂಗ್ರೆಸ್‌, ಜೆಡಿಎಸ್ ಸಹಿತ ಪ್ರತಿಪಕ್ಷಗಳ ಪ್ರಬಲ ವಿರೋಧದ ನಡುವೆ ಮಸೂದೆಗೆ ಧ್ವನಿ ಮತದ ಅಂಗೀಕಾರ ಸಿಕ್ಕಿತ್ತು. ಆದರೆ, ಮೇಲ್ಮನೆಯಲ್ಲಿ ಮಸೂದೆ ಮಂಡನೆಗೆ ಅವಕಾಶ ಸಿಕ್ಕಿರಲಿಲ್ಲ.ಕೆಳಮನೆಯಲ್ಲಿ ಪಾಸ್ ಆಗಿರುವ ಸ್ವರೂಪದಲ್ಲೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಮೇ 12, 2022ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆ ಪ್ರಕಾಋ ರಾಜಭವನಕ್ಕೆ ರವಾನಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

Ads on article

Advertise in articles 1

advertising articles 2

Advertise under the article