-->
Dual membership in bar Council?- ವಕೀಲರು ಏಕಕಾಲಕ್ಕೆ ಹಲವು ವಕೀಲರ ಸಂಘಗಳ ಸದಸ್ಯರಾಗಬಹುದೇ?

Dual membership in bar Council?- ವಕೀಲರು ಏಕಕಾಲಕ್ಕೆ ಹಲವು ವಕೀಲರ ಸಂಘಗಳ ಸದಸ್ಯರಾಗಬಹುದೇ?

ವಕೀಲರು ಏಕಕಾಲಕ್ಕೆ ಹಲವು ವಕೀಲರ ಸಂಘಗಳ ಸದಸ್ಯರಾಗಬಹುದೇ?





ಸಾಮಾನ್ಯವಾಗಿ ವಕೀಲರು ಏಕಕಾಲಕ್ಕೆ ಒಂದೇ ವಕೀಲರ ಸಂಘದ ಸದಸ್ಯರಾಗಬೇಕು. ಆದರೆ, ಕೆಲವೊಂದು ಸಂದರ್ಭಗಳಲ್ಲಿ ವಕೀಲರು ಒಂದಕ್ಕಿಂತ ಹೆಚ್ಚು ವಕೀಲರ ಸಂಘಗಳ ಸದಸ್ಯರಾಗಬಹುದು. ಆದರೆ, ಅದು ಷರತ್ತುಗಳಿಗೆ ಒಳಪಟ್ಟು.



ಅದಕ್ಕೂ ಮೊದಲು ವಕೀಲರ ಸಂಘಟನೆಗಳ ಬಗ್ಗೆ ವಿವರವನ್ನು ಪಡೆದುಕೊಳ್ಳೋಣ.



ಬಾರ್ ಕೌನ್ಸಿಲ್ ಆಫ್ ಇಂಡಿಯಾ:

ಬಾರ್ ಕೌನ್ಸಿಲ್ ಆಫ್ ಇಂಡಿಯಾ(BCI)ವು ಭಾರತದಲ್ಲಿ ಕಾನೂನು ಅಭ್ಯಾಸ ಮತ್ತು ಕಾನೂನು ಶಿಕ್ಷಣವನ್ನು ನಿಯಂತ್ರಿಸುವ ವಕೀಲರ ಕಾಯಿದೆ 1961ರ ಸೆಕ್ಷನ್ 4 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ. ಇದರ ಸದಸ್ಯರು ಭಾರತದಲ್ಲಿನ ವಕೀಲರಿಂದ ಚುನಾಯಿತರಾಗುತ್ತಾರೆ ಮತ್ತು ಈ ಸಂಸ್ಥೆ ಭಾರತೀಯ ವಕೀಲರನ್ನು ಪ್ರತಿನಿಧಿಸುತ್ತದೆ.


ರಾಜ್ಯ ಬಾರ್ ಕೌನ್ಸಿಲ್:

ಅದೇ ರೀತಿ, ರಾಜ್ಯ ಬಾರ್ ಕೌನ್ಸಿಲ್‌ಗಳು ವಕೀಲರ ಕಾಯಿದೆ, 1961 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಗಳಾಗಿವೆ. ಇದು ಆಯಾ ರಾಜ್ಯಗಳ ವಕೀಲರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಾನೂನು ವೃತ್ತಿ ಮತ್ತು ಶಿಕ್ಷಣದ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.


ಬಾರ್ ಅಸೋಸಿಯೇಷನ್(ವಕೀಲರ ಸಂಘಗಳು):

ವಕೀಲರ ಸಂಘಗಳು ನಿರ್ದಿಷ್ಟ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ವಕೀಲರ ಸಂಸ್ಥೆಗಳಾಗಿವೆ ಮತ್ತು ಅವರ ನೋಂದಾಯಿತ ಸದಸ್ಯರ ಕಲ್ಯಾಣಕ್ಕಾಗಿ ಅವು ಕೆಲಸ ಮಾಡಲು ಬದ್ಧತೆಯನ್ನು ಹೊಂದಿವೆ.


ಅಭ್ಯಾಸದ ಪ್ರಮಾಣಪತ್ರ (Certificate of Practicing - COP) ಪರಿಚಯಿಸಿದ ನಂತರ ವಕೀಲರು ತಾವು ಸದಸ್ಯತ್ವ ನೋಂದಾಯಿಸಿದ ವಕೀಲರ ಸಂಘದಲ್ಲಿ ಮಾತ್ರ ಮತದಾನದ ಹಕ್ಕನ್ನು ಚಲಾಯಿಸಬಹುದು ಎಂಬುದು ಗಮನಾರ್ಹ ಅಂಶ.





ವಕೀಲರ ಕಾಯಿದೆ, 1961 ರ ಸೆಕ್ಷನ್ 17 ರ ಪ್ರಕಾರ


ಸೆಕ್ಷನ್ 17: ವಕೀಲರ ಪಟ್ಟಿಯನ್ನು ನಿರ್ವಹಿಸಲು ರಾಜ್ಯ ಬಾರ್ ಕೌನ್ಸಿಲ್‌ಗಳು.—


(1) ಪ್ರತಿ ರಾಜ್ಯ ಬಾರ್ ಕೌನ್ಸಿಲ್‌ ತನ್ನಲ್ಲಿ ನೋಂದಣಿಯಾದ ವಕೀಲರುಗಳ ಹೆಸರುಗಳು ಮತ್ತು ವಿಳಾಸಗಳನ್ನು ಪಟ್ಟಿ ಮಾಡಿಡಬೇಕು ಮತ್ತು ಅದನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕು


ಸೆಕ್ಷನ್ 17 (4) ಪ್ರಕಾರ, ಒಂದಕ್ಕಿಂತ ಹೆಚ್ಚು ರಾಜ್ಯ ಬಾರ್ ಕೌನ್ಸಿಲ್‌ಗಳ ರೋಲ್‌ನಲ್ಲಿ ಯಾವುದೇ ವ್ಯಕ್ತಿಯನ್ನು ವಕೀಲರಾಗಿ ದಾಖಲಿಸಬಾರದು.


ಅಂದರೆ, ವಕೀಲರ ಕಾಯಿದೆ, 1961 ರ ಸೆಕ್ಷನ್ 17 ಉಪವಿಭಾಗ 4 ಪ್ರಕಾರ, "ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ರಾಜ್ಯ ಬಾರ್ ಕೌನ್ಸಿಲ್‌ಗಳು ತಮ್ಮ ಸದಸ್ಯತ್ವ ಯಾದಿಯಲ್ಲಿ ವಕೀಲರಾಗಿ ದಾಖಲಾಗಬಾರದು" ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದ, ವಕೀಲರು ಆ ರಾಜ್ಯ ವಕೀಲರ ಸಂಘದ ಅಡಿಯಲ್ಲಿ ಬಹು ವಕೀಲರ ಸಂಘದ ಸದಸ್ಯರಾಗಬಹುದು ಎಂದು ಅರ್ಥೈಸಬಹುದು.


ಉದಾಹರಣೆ: ದೆಹಲಿಯು ಏಳು (07) ಜಿಲ್ಲಾ ನ್ಯಾಯಾಲಯಗಳನ್ನು ಹೊಂದಿದೆ


ಅಂದರೆ ತಿಸ್ ಹಜಾರಿ ಕೋರ್ಟ್, ಪಟಿಯಾಲ ಹೌಸ್ ಕೋರ್ಟ್, ರೂಸ್ ಅವೆನ್ಯೂ ಕೋರ್ಟ್, ಕಾರ್ಕರ್ಡೂಮಾ ಕೋರ್ಟ್, ದ್ವಾರಕಾ ಕೋರ್ಟ್, ರೋಹಿಣಿ ಕೋರ್ಟ್, ಸಾಕೇತ್ ಕೋರ್ಟ್ ಮತ್ತು ದೆಹಲಿಯ ಗೌರವಾನ್ವಿತ ಹೈಕೋರ್ಟ್ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ಅನ್ನು ಸಹ ಹೊಂದಿದೆ.


ಬಾರ್ ಕೌನ್ಸಿಲ್ ಆಫ್ ದಿಲ್ಲಿ (ಬಿಸಿಡಿ) ಯೊಂದಿಗೆ ದಾಖಲಾದ ಯಾವುದೇ ವಕೀಲರು ಮೇಲಿನ ಎಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸದಸ್ಯರಾಗಬಹುದು.

ಮಾಹಿತಿ; ಅಜಯ್ ಕಾಮತ್, ವಕೀಲರು ದೆಹಲಿ ವಕೀಲರ ಸಂಘ

Ads on article

Advertise in articles 1

advertising articles 2

Advertise under the article