ಸಬ್ ಇನ್ಸ್‌ಪೆಕ್ಟರ್‌ಗೆ ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಇದೆ: ಕರ್ನಾಟಕ ಹೈಕೋರ್ಟ್
ಸಬ್ ಇನ್ಸ್‌ಪೆಕ್ಟರ್‌ಗೆ ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಇದೆ: ಕರ್ನಾಟಕ ಹೈಕೋರ್ಟ್
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಾರ್ಜ್‌ಶೀಟ್ ಸಲ್ಲಿಸುವ ಅಧಿಕಾರ ವ್ಯಾಪ್ತಿ ಕುರಿತಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ಇ.ಎಸ್.ಪ್ರಸನ್ನ ಕುಮಾರ್ ಮತ್ತಿತರರು Vs ಕರ್ನಾಟಕ
ಕರ್ನಾಟಕ ಹೈಕೋರ್ಟ್, CrP No: 2807/2022 Date: 19-05-2022
ಪೊಲೀಸ್ ಮಾನ್ಯುವಲ್ ಪ್ರಕಾರ, ಯಾವುದೇ ಅಪರಾಧಿಕ ಕೃತ್ಯ ನಡೆದ ಬಗ್ಗೆ ಮಾಹಿತಿ ದೊರೆತಲ್ಲಿ, ಅದನ್ನು ಅಕ್ಷರ ರೂಪದಲ್ಲಿ ದಾಖಲಿಸಿಕರಿಸಿ ಪ್ರಕರಣದ ತನಿಖೆಯನ್ನು ನಡೆಸಬೇಕು. ಅಲ್ಲದೆ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವೂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ (ಪಿಎಸ್‌ಐ) ಇದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮನುಕುಲವೇ ಕಲುಕುವಂತೆ ಮಾಢಿದ ಹಾಗೂ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕ ಹಲ್ಲಗೆರೆ ಶಂಕರ್ ಹಾಗೂ ಅವರ ಇಬ್ಬರು ಅಳಿಯಂದಿರು ಆರೋಪಿಗಳಾಗಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ
"ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆರೋಪ ಪಟ್ಟಿ ಸಲ್ಲಿಸಲು ಕಾನೂನು ಪ್ರಕಾರ ಸಮರ್ಥರಲ್ಲ" ಎಂದು ಅರ್ಜಿದಾರರು ವಾದ ಮಂಡಿಸಿದ್ದರು. ಈ ವಾದಕ್ಕೆ 'ಕಾನೂನಿನ ಯಾವುದೇ ಮಾನ್ಯತೆ ಇಲ್ಲ. ಅಲ್ಲದೇ, ಪಿಎಸ್‌ಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಯಾವುದೇ ಲೋಪವಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಕ್ರಿಮಿನಲ್ ಪ್ರಕ್ರಿಯೆಯನ್ನು ವಜಾ ಮಾಡಲಾಗದು. ಹಾಗೂ, ಆ ಕಾರಣದಿಂದ ಆರೋಪಿಗಳಿಗೆ ಜಾಮೀನು ನೀಡಲಾಗದು' ಎಂದು ನ್ಯಾಯಪೀಠ ತಿಳಿಸಿದೆ.
ಪೊಲೀಸ್ ಮಾರ್ಗಸೂಚಿ ಪ್ರಕಾರ, PSI ಕೂಡ ಠಾಣೆಯ ಉಸ್ತುವಾರಿಯಾಗಿದ್ದಾರೆ. ಹಾಗೂ ಅವರಿಗೆ ಆರೋಪ ಪಟ್ಟಿ ಸಲ್ಲಿಸಲು ಅಧಿಕಾರವಿದೆ. ಸದ್ರಿ ಪ್ರಕರಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅವರೇ ದೂರು ದಾಖಲಿಸಿದ್ದು, PSI ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಂದು ಉಲ್ಲೇಖಿಸಲಾಗಿದೆ. FIR ದಾಖಲಿಸಿರುವ PSI ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪ ಪಟ್ಟಿ ಸಲ್ಲಿಸಲು PSIಗೆ ಅಧಿಕಾರವಿಲ್ಲ ಅಥವಾ ಅದು ಕಾನೂನುಬಾಹಿರ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಠಾಣಾಧಿಕಾರಿ (ಪೊಲೀಸ್ ಇನ್‌ಸ್ಪೆಕ್ಟರ್) ಅವರ ಸಹೋದ್ಯೋಗಿಯಾದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಈ ಅಧಿಕಾರವಿಲ್ಲ. PSI ಕೇವಲ ಪ್ರಕರಣದ ತನಿಖೆ ನಡೆಸಬಹುದು. ಆದರೆ, ಆರೋಪ ಪಟ್ಟಿಯನ್ನು ಠಾಣೆಯ ಅಧಿಕಾರಿ ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ವಾದಿಸಿದರು.
ಆದರೆ, ಈ ವಾದವನ್ನು ಅಲ್ಲಗಳೆದ ಸರ್ಕಾರ ಪರ ವಕೀಲರು, ಪಿಎಸ್‌ಐ ಅಥವಾ ಇನ್‌ಸ್ಪೆಕ್ಟರ್ ಇಬ್ಬರೂ ಪೊಲೀಸ್ ಠಾಣೆಯ ಉಸ್ತುವಾರಿಗಳೇ ಆಗಿದ್ದಾರೆ. ಠಾಣಾಧಿಕಾರಿ ಮತ್ತು ಠಾಣೆಯ ಉಸ್ತುವಾರಿ ಈ ಎರಡೂ ಒಂದೇ ಅಥವಾ ಅನ್ವರ್ಥವಾಗಿರಬಹುದು. IPC Sec 306 ಅಪರಾಧದಲ್ಲಿ ಇದು ಬೇರೆಯಾಗಬಹುದು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಹೊಂದಿದ್ದಾರೆ ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಇದೊಂದು ಸಾಮಾನ್ಯ ಅತ್ಮಹತ್ಯೆ ಎನ್ನಲಾಗದು. ಪ್ರಜ್ಞಾವಂತರೂ ವಿದ್ಯಾವಂತರು ಅಗಿರುವ ಮೂವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ವಿಶೇಷ ಪ್ರಕರಣ. ಸಂತ್ರಸ್ತರು ಮರಣಪತ್ರದಲ್ಲಿ ತಮ್ಮ ಸಾವಿಗೆ ನ್ಯಾಯ ಕೋರಿರುವ ಗಂಭೀರ ಸ್ವರೂಪದ ಸಾರ್ವಜನಿಕ ಗಮನ ಸೆಳೆಯುವ ಪ್ರಕರಣವಿದು. ಆರೋಪಿಗಳು ಅತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿ ನ್ಯಾಯಾಲಯವು ಜಾಮೀನು ಮನವಿಗಳನ್ನು ತಿರಸ್ಕರಿಸಿದೆ.
For Judgement Click here;