-->
Guest Column (by Sri Prakash Nayak):   K-2 ಚಲನ್ ಮೂಲಕ ಕೋರ್ಟ್ ಫೀ ಮರು ಪಾವತಿ (Sec 66ಗೆ ತಿದ್ದುಪಡಿ): ವಕೀಲರಿಗೆ ಉಪಯುಕ್ತ ಮಾಹಿತಿ

Guest Column (by Sri Prakash Nayak): K-2 ಚಲನ್ ಮೂಲಕ ಕೋರ್ಟ್ ಫೀ ಮರು ಪಾವತಿ (Sec 66ಗೆ ತಿದ್ದುಪಡಿ): ವಕೀಲರಿಗೆ ಉಪಯುಕ್ತ ಮಾಹಿತಿ

K-2 ಚಲನ್ ಮೂಲಕ ಕೋರ್ಟ್ ಫೀ ಮರು ಪಾವತಿ (Sec 66ಗೆ ತಿದ್ದುಪಡಿ): ವಕೀಲರಿಗೆ ಉಪಯುಕ್ತ ಮಾಹಿತಿ

ಕರ್ನಾಟಕ ನ್ಯಾಯಾಲಯ ಶುಲ್ಕಗಳು ದಾವೆಗಳ ಮೌಲ್ಯ ಮಾಪನ ತಿದ್ದುಪಡಿ ಅಧ್ಯಾದೇಶಕ್ಕೆ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ದಿನಾಂಕ 31.7.2020 ರಂದು ಅಂಕಿತ ಹಾಕಿದ್ದು ನೂತನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ.


ಕಾಯಿದೆ ತಿದ್ದುಪಡಿಗಾಗಿ ಹೊರಡಿಸಲಾದ ಆಧ್ಯಾದೇಶದ ಮುಖ್ಯ ಉದ್ದೇಶಗಳೆಂದರೆ;


1) ರಾಜಿಯಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಪಾವತಿಸಲಾದ ಸಂಪೂರ್ಣ ನ್ಯಾಯಾಲಯ ಶುಲ್ಕವನ್ನು ವಾದಿಗೆ ಮರುಪಾವತಿಸುವುದು.


2) ನ್ಯಾಯಾಲಯ ಶುಲ್ಕ ಪಾವತಿ ಅಥವಾ ಮರುಪಾವತಿಗೆ ವಿದ್ಯುನ್ಮಾನ ಪದ್ಧತಿಯನ್ನು (Electronic Payment) ಅನುಸರಿಸುವುದುಸೆಕ್ಷನ್ 66 ಕ್ಕೆ ತಿದ್ದುಪಡಿ


1) ಹಿಂದಿನ ಕಾಯಿದೆಯಡಿ ಸಿವಿಲ್ ಪ್ರೊಸೀಜರ್ ಕೋಡ್ ನ ಕಲಂ 89 ರಡಿ ವಿವರಿಸಿದಂತೆ ಮಧ್ಯಸ್ಥಿಕೆ; ರಾಜಿ ಸಂಧಾನ ಲೋಕ ಅದಾಲತ್ ಹಾಗೂ ನ್ಯಾಯಾಲಯದ ಹೊರಗಡೆ ರಾಜಿ ಮೂಲಕ ಇತ್ಯರ್ಥ ಪ್ರಕರಣಗಳಲ್ಲಿ ಪಾವತಿಸಲಾದ ನ್ಯಾಯಾಲಯ ಶುಲ್ಕದ ಪೈಕಿ ಶೇಕಡಾ 75 ರಷ್ಟು ನ್ಯಾಯಾಲಯ ಶುಲ್ಕವನ್ನು ಮರಳಿ ಪಡೆಯಲು ಅವಕಾಶವಿತ್ತು.

ಆದರೆ, ಪ್ರಸಕ್ತ ತಿದ್ದುಪಡಿ ಬಳಿಕ 100%ರಷ್ಟು ಕೋರ್ಟ್ ಫೀ (ನ್ಯಾಯಾಲಯ ಶುಲ್ಕ) ಮರಳಿ ಪಡೆಯಬಹುದಾಗಿದೆ.2) ತಿದ್ದುಪಡಿ ಆಧ್ಯಾದೇಶ ಪ್ರಕಾರ ಹೊಸತಾಗಿ ಕಲಂ 68A ಸೇರ್ಪಡೆ ಮಾಡಲಾಗಿದ್ದು ನ್ಯಾಯಾಲಯ ಶುಲ್ಕ ಮರುಪಾವತಿಗೆ ಆದೇಶವಾದಲ್ಲಿ ವಿದ್ಯುನ್ಮಾನ ಪದ್ಧತಿ ಮೂಲಕ ಮರಳಿಸತಕ್ಕದ್ದಾಗಿದೆ.3) ನ್ಯಾಯಾಲಯ ಶುಲ್ಕ ಪಾವತಿ ಬಗ್ಗೆ- ಸೆಕ್ಷನ್ 71 (ನ್ಯಾಯಾಲಯ ಶುಲ್ಕ ಸಂಗ್ರಹಣೆ)


ಈ ಹಿಂದಿನ ಪದ್ಧತಿ ಪ್ರಕಾರ ಎರಡು ವಿಧಗಳಲ್ಲಿ ನ್ಯಾಯಾಲಯ ಶುಲ್ಕವನ್ನು ಪಾವತಿ ಮಾಡಲು ಅವಕಾಶವಿತ್ತು.1) ನ್ಯಾಯಾಲಯ ಶುಲ್ಕ ₹500/- ರ ಒಳಗೆ ಇದ್ದಲ್ಲಿ ನಗದಾಗಿ ನ್ಯಾಯಾಲಯದ ಕಚೇರಿಯಲ್ಲಿ ಪಾವತಿಸುವುದು2) ₹500/-ಕ್ಕಿಂತ ಹೆಚ್ಚಿನ ಮೊತ್ತವನ್ನು ಸರಕಾರಿ ಖಜಾನೆಯಲ್ಲಿ ಅಥವಾ ಡಿಮಾಂಡ್ ಡ್ರಾಫ್ಟ್ ಮುಖಾಂತರ ಪಾವತಿಸಬಹುದಾಗಿತ್ತು.ನೂತನ ಅಧ್ಯಾದೇಶದ ಮೂಲಕ ಸೆಕ್ಷನ್ 71 ಕ್ಕೆ ತಿದ್ದುಪಡಿ ತರಲಾಗಿದ್ದು ಯಾವುದೇ ಮೊತ್ತದ ನ್ಯಾಯಾಲಯ ಶುಲ್ಕವನ್ನು ವಿದ್ಯುನ್ಮಾನ ಎಂದರೆ K2 ಚಲನ್ ಮೂಲಕ ಪಾವತಿಸಿತಕ್ಕದ್ದಾಗಿದೆ.
ಪ್ರಸ್ತುತ ₹500/- ರ ಒಳಗಿನ ಮೊತ್ತದ ಶುಲ್ಕವನ್ನು ನಗದಾಗಿ ನ್ಯಾಯಾಲಯದ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ.ನೂತನ ತಿದ್ದುಪಡಿ ಅಧ್ಯಾದೇಶದ ಬೆಳಕಿನಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ಪಾವತಿಸ ಬೇಕಾದ ನ್ಯಾಯಾಲಯ ಶುಲ್ಕವನ್ನು ವಿದ್ಯುನ್ಮಾನ ಪಾವತಿ ಅಂದರೆ K 2 ಚಲನ್ ಮೂಲಕ ಸ್ವೀಕರಿಸುವಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗಿದೆ.


Writer: Sri Prakash Nayak, Shirasthedar, Judicial Centre, Mangaluru Court Complex

Ads on article

Advertise in articles 1

advertising articles 2

Advertise under the article