-->
Justice Arali Nagaraj Donates Body- ದೇಹದಾನ ಮಾಡಿದ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶರು: ಮೌಢ್ಯಾಧಾರಿತ ಸಂಸ್ಕಾರಕ್ಕೆ ಅರಳಿ ನಾಗರಾಜ್ ವಿರೋಧ

Justice Arali Nagaraj Donates Body- ದೇಹದಾನ ಮಾಡಿದ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶರು: ಮೌಢ್ಯಾಧಾರಿತ ಸಂಸ್ಕಾರಕ್ಕೆ ಅರಳಿ ನಾಗರಾಜ್ ವಿರೋಧ

ದೇಹದಾನ ಮಾಡಿದ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶರು: ಮೌಢ್ಯಾಧಾರಿತ ಸಂಸ್ಕಾರಕ್ಕೆ ಅರಳಿ ನಾಗರಾಜ್ ವಿರೋಧ

ನ್ಯಾಯಾಧೀಶರು ಸಮಾಜಮುಖಿ ಚಿಂತನೆ ಹೊಂದಿದ್ದಾರೆ ಎಂಬುದನ್ನು ಕರ್ನಾಟಕ ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಗಂಗಾವತಿಯ ಅರಳಿ ನಾಗರಾಜ್ ಸಾಬೀತುಪಡಿಸಿದ್ದಾರೆ.


71ರ ಹರೆಯದ ಅರಳಿ ನಾಗರಾಜ್ ತಮ್ಮ ಸಾವಿನ ನಂತರ ದೇಹವನ್ನು ಗದಗದ ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾನ ಮಾಡುವಂತೆ 'ಮೃತ್ಯುಪತ್ರ' ಬರೆದು ಮಾದರಿಯಾಗಿದ್ದಾರೆ. ಈ ಮೃತ್ಯುಪತ್ರಕ್ಕೆ ಮಗಳ ಸಹಿಯನ್ನೂ ಹಾಕಿಸಿದ್ದಾರೆ.


ಈ ಬಗ್ಗೆ ವೈಯಕ್ತಿಕವಾಗಿಯೂ ಬಂಧು-ಮಿತ್ರರಿಗೆ ಪತ್ರ ಬರೆದಿರುವ ನ್ಯಾ. ಅರಳಿ ನಾಗರಾಜ್, "ನನ್ನ ಪತ್ನಿ ಪುತ್ರ ಪುತ್ರಿಯರನ್ನು ಒಳನ್ನೊಳಗೊಂಡಂತೆ ಎಲ್ಲ ಬಂಧುಗಳಲ್ಲಿ, ಸ್ನೇಹಿತರಲ್ಲಿ ನನ್ನ ವಿನಂತಿ. ನನ್ನ ಸಾವು ಎಂದಾದರೂ, ಯಾವ ಕಾರಣದಿಂದಾದರೂ, ಹೇಗಾದರೂ, ಎಲ್ಲಿಯಾದರೂ ಸಂಭವಿಸಲಿ ನನ್ನ ಮೃತದೇಹ ವೈದ್ಯಕೀಯ ಸಂಶೋಧನೆಗೆ ಉಪಯುಕ್ತವಾಗಿ ಸಾರ್ಥಕ ರೀತಿಯಲ್ಲಿ ಸದ್ಬಳಕೆಯಾಗಲಿ. ಇದು ನನ್ನ ಅಂತಿಮ ಇಚ್ಚೆ" ಎಂದು ಪತ್ರದಲ್ಲಿ ಹೇಳಿದ್ದಾರೆ.


ನನ್ನ ಮರಣಾನಂತರ ಗದಗ್‌ನ ಮೆಡಿಕಲ್ ಆಸ್ಪತ್ರೆಗೆ ಸ್ವ ಇಚ್ಚೆಯಿಂದ ನನ್ನ ದೇಹದಾನ ಮಾಡಿರುವೆ. ಈ ಸಂಬಂಧವಾಗಿ ಕಾಲೇಜಿನ ಪ್ರಾಂಶುಪಾಲರಿಗೆ 28-05-2022ಶನಿವಾರದಂದು ಮನವಿ ಸಲ್ಲಿಸಿದ್ದೇನೆ ಎಂದು ಹೇಳಿರುವ ಅವರು, ನನ್ನ ಸಾವಿನ ವಿಷಯ ಗೊತ್ತಾದ ತಕ್ಷಣ ಅದನ್ನು ಆ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿ ನನ್ನ ಮೃತ ದೇಹ ಸಮಯಕ್ಕೆ ಸರಿಯಾಗಿ ಅವರ ಕಾಲೇಜಿಗೆ ತಲುಪುವಂತೆ ನೋಡಿಕೊಳ್ಳುವ ಮೂಲಕ ನನ್ನ ಈ ಅಂತಿಮ ಇಚ್ಛೆಯನ್ನು ಪೂರೈಸಬೇಕಾಗಿ ತಮ್ಮೆಲ್ಲರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವೆ ಎಂದಿದ್ದಾರೆ.


"ತಮ್ಮ ಸಾವಿನಲ್ಲಿ ಯಾವುದೇ ಮೌಢ್ಯಾಧಾರಿತ ವಿಧಿ ವಿಧಾನಗಳನ್ನು ಅಚರಿಸಬಾರದು ಎಂದು ನನ್ನ ಕುಟುಂಬದ ಎಲ್ಲರನ್ನೂ ಬೇಡಿಕೊಳ್ಳುವೆ. ಎಲ್ಲರಿಗೂ ಶರಣು ಶರಣಾರ್ಥಿಗಳು.. ಇಂತಿ ತಮ್ಮ ನಾಗರಾಜ್ ಅರಳಿ" ಎಂದು ಪತ್ರ ಬರೆದಿದ್ದಾರೆ.


ಸಾವಿನ ನಂತರ ದೇಹ ಮಣ್ಣಿನಲ್ಲಿ ನಾಶವಾಗದೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಉಪಯುಕ್ತವಾಗಿ ಬಳಕೆಯಾಗಲಿ ಎಂಬ ಸದುದ್ದೇಶದಿಂದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಅವರು ಮಾಡಿರುವ ದಿಟ್ಟ ನಿರ್ಧಾರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

Ads on article

Advertise in articles 1

advertising articles 2

Advertise under the article