-->
ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ: ಕಾರ್ಮಿಕರ ಕಲ್ಯಾಣವೇ..? ಶೋಷಣೆಯೇ..?

ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ: ಕಾರ್ಮಿಕರ ಕಲ್ಯಾಣವೇ..? ಶೋಷಣೆಯೇ..?

ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ: ಕಾರ್ಮಿಕರ ಕಲ್ಯಾಣವೇ..? ಶೋಷಣೆಯೇ..?





2022ರ ಜುಲೈ 1ರಿಂದ ದೇಶದಲ್ಲಿ ಹೊಸ ಕಾರ್ಮಿಕ ಕಾಯ್ದೆ ಜಾರಿಗೆ ಬರಲಿದೆ. ಈ ಹೊಸ ಕಾನೂನು ಪ್ರಕಾರ, ಕಾರ್ಮಿಕರು ಪಡೆಯುವ ವೇತನ, ಭವಿಷ್ಯ ನಿಧಿಗಾಗಿ ಕಡಿತವಾಗುವ ಹಣ ಹಾಗೂ ಕರ್ತವ್ಯದ ಅವಧಿಯಲ್ಲಿ ಭಾರೀ ಬದಲಾವಣೆ ಆಗಲಿದೆ.



ಈಗಾಗಲೇ 4 ನೂತನ ಕಾರ್ಮಿಕ ಸಂಹಿತೆಗಳು ಅನುಮೋದನೆಗೊಂಡಿದ್ದು, ಜುಲೈ 1 ರಂದು ಜಾರಿಗೆ ಬರಲಿದೆ. ಈ ಕಾರ್ಮಿಕ ಸಂಹಿತೆಗಳು ಹೀಗಿವೆ-

1) ವೇತನ ಸಂಹಿತೆ

2) ಸಾಮಾಜಿಕ ಭದ್ರತಾ ಸಂಹಿತೆ

3) ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ಥಿತಿಗತಿ ಸಂಹಿತೆ

4) ಕೈಗಾರಿಕಾ ಸಂಬಂಧಗಳ ಸಂಹಿತೆ


ನೂತನ ಪ್ರಸ್ತಾಪಿತ ವೇತನ ಸಂಹಿತೆಯಲ್ಲಿ ನೌಕರರ ಟೇಕ್ ಹೋಂ ಸ್ಯಾಲರಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಜೊತೆಗೆ ಪ್ರತಿದಿನದ ಕೆಲಸದ ಅವಧಿಯಲ್ಲಿ ಹೆಚ್ಚಳ, ಭವಿಷ್ಯ ನಿಧಿಗೆ (PF) ಜಮೆ ಆಗುವ ಮೊತ್ತದಲ್ಲಿ ಏರಿಕೆಯಾಗಲಿದೆ.



ಆಯಾ ರಾಜ್ಯ ಸರ್ಕಾರಗಳು ಕೂಡ ಪೂರಕ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕಿದೆ. 'ವೇತನ ಸಂಹಿತೆ'ಯ ಅಡಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರಡು ನಿಯಮಗಳನ್ನು ಘೋಷಿಸಿವೆ. ಅದರಂತೆ, ಹೊಸ ನಿಯಮಗಳ ಪ್ರಕಾರ, ಕಾರ್ಮಿಕರ ಕೆಲಸದ ಅವಧಿಯನ್ನು 8–9 ಗಂಟೆಗಳಿಂದ 12 ಗಂಟೆಗಳಿಗೆ ವಿಸ್ತರಿಸಲು ಅವಕಾಶವಿದೆ.



ಹಾಗೆಯೇ, ಒಂದು ದಿನಕ್ಕೆ 12 ಗಂಟೆ ಕೆಲಸ ಮಾಡುವ ಸಿಬ್ಬಂದಿ ವಾರದಲ್ಲಿ ಮೂರು ದಿನ ರಜೆ ಪಡೆಯಲು ಹಕ್ಕುಳ್ಳವರಾಗಿದ್ದಾರೆ. ಕಾರ್ಮಿಕರ ವಾರದ ಒಟ್ಟು ಕೆಲಸದ ಅವಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಾರದಲ್ಲಿ ಕೆಲಸ ಮಾಡುವ ದಿನಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಲಿದೆ.




ವೇತನ ನೀತಿ ಪ್ರಕಾರ, ವಾರದ ಒಟ್ಟು ಕೆಲಸದ ಅವಧಿ 48 ಗಂಟೆಗಳು. ಹೊಸ ನೀತಿ ಪ್ರಕಾರ, ನೌಕರರ ಒಟ್ಟು ತಿಂಗಳ ಸಂಬಳದಲ್ಲಿ ಮೂಲ ವೇತನದ (Basic) ಪ್ರಮಾಣವು ಕನಿಷ್ಠ ಶೇಕಡ 50ರಷ್ಟು ಇರಬೇಕು. ಆದರೆ, ನೌಕರರ ವೇತನದಲ್ಲಿ ಭತ್ಯೆಗಳ ಪ್ರಮಾಣವು ಶೇಕಡ 50ನ್ನು ಮೀರುವಂತಿಲ್ಲ. ಆದ್ದರಿಂದ, ವೇತನದಲ್ಲಿ PF ಕಡಿತದಿಂದ ಉಳಿತಾಯದ ಪ್ರಮಾಣವು ಹೆಚ್ಚಲಿದೆ. ಸಹಜವಾಗಿಯೇ, ಕಾರ್ಮಿಕರು ನಿವೃತ್ತಿ ವೇಳೆ ಪಡೆಯುವ ಮೊತ್ತ ಹಾಗೂ ಗ್ಯಾಚ್ಯುಟಿ ಮೊತ್ತದಲ್ಲಿ ಹೆಚ್ಚಳವಾಗಲಿದೆ. ಆದರೆ, ಈಗಿನಂತೆ ನೌಕರರ ಕೈಗೆ ಸಿಗುವ ಸಂಬಳದಲ್ಲಿ ಕಡಿತವಾಗಲಿದೆ.




ಕೈಗಾರಿಕಾ ಕಾಯ್ದೆ 1948 ಪ್ರಕಾರ, ಕೈಗಾರಿಕೆಗಳು ಹಾಗೂ ಅಂತಹ ಸ್ಥಳಗಳಲ್ಲಿ ಕೆಲಸದ ಸಮಯವನ್ನು ಫಿಕ್ಸ್ ಮಾಡಲಾಗಿದೆ. ಉಳಿದಂತೆ, ಕಚೇರಿಯಲ್ಲಿ ದುಡಿಯುವ ನೌಕರರು ಹಾಗೂ ಇತರೆ ಉದ್ಯೋಗಿಗಳ ಕರ್ತವ್ಯದ ಸಮಯವನ್ನು 'ಅಂಗಡಿ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಕಾಯ್ದೆ' ಅಡಿಯಲ್ಲಿ ಆಯಾ ರಾಜ್ಯ ಸರ್ಕಾರಗಳೇ ನಿಯಮ ರೂಪಿಸಲಿವೆ. 

Ads on article

Advertise in articles 1

advertising articles 2

Advertise under the article