ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲಗಳ ಖಾತೆ ನಿರ್ವಹಣೆ ಸರ್ಕಾರ ಮಾಡುತ್ತಿಲ್ಲ: ಕೇಂದ್ರ ಸ್ಪಷ್ಟನೆ
Thursday, June 23, 2022
ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲಗಳ ಖಾತೆ ನಿರ್ವಹಣೆ ಸರ್ಕಾರ ಮಾಡುತ್ತಿಲ್ಲ: ಕೇಂದ್ರ ಸ್ಪಷ್ಟನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳ ವಿವಿಧ ಖಾತೆಗಳನ್ನು ಕೇಂದ್ರ ಸರ್ಕಾರವಾಗಲೀ, ಪ್ರಧಾನ ಮಂತ್ರಿ ಕಚೇರಿ(PMO) ಆಗಲೀ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬೆಳಗಾವಿಯ ವಕೀಲರಾದ ಸುರೇಂದ್ರ ಉಗಾರೆ ಅವರ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ್ದು, ಹಾಗಾಗಿ, ಅದರ ಖರ್ಚು ವೆಚ್ಚಗಳನ್ನು ನೀಡುವ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು PMO ಸಚಿವಾಲಯ ಅಧಿಕೃತವಾಗಿ ಮಾಹಿತಿ ಹಕ್ಕಿನ ಅರ್ಜಿಗೆ ಉತ್ತರ ನೀಡಿದೆ.
ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದಾರೆ. ಅದರ ಖರ್ಚು ವೆಚ್ಚಗಳ ವಿವರ ನೀಡುವಂತೆ ಅರ್ಜಿದಾರರು ಮಾಹಿತಿ ಹಕ್ಕಿನಲ್ಲಿ ಕೇಳಿದ್ದರು. ಆದರೆ, ಈ ಮಾಹಿತಿ ತಮ್ಮ ಕಚೇರಿಯ ದಾಖಲೆಗಳ ಭಾಗವಾಗಿಲ್ಲ ಎಂದು PMO ಸಚಿವಾಲಯ ಹೇಳಿದೆ.