-->
ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಮಾನನಷ್ಟ ಪ್ರಕರಣ ಪ್ರಜಾಸತ್ತೆಗೆ ಮಾರಕ: ಸುಪ್ರೀಂ ಕೋರ್ಟ್‌

ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಮಾನನಷ್ಟ ಪ್ರಕರಣ ಪ್ರಜಾಸತ್ತೆಗೆ ಮಾರಕ: ಸುಪ್ರೀಂ ಕೋರ್ಟ್‌

ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಮಾನನಷ್ಟ ಪ್ರಕರಣ ಪ್ರಜಾಸತ್ತೆಗೆ ಮಾರಕ: ಸುಪ್ರೀಂ ಕೋರ್ಟ್‌

ಪ್ರಚಲಿತ ಅಪರಾಧ ಘಟನೆಗಳು, ವ್ಯಕ್ತಿಯ ಬಂಧನ, FIR ಕುರಿತ ಮಾಹಿತಿ ಹಾಗೂ ಕೋರ್ಟ್‌ಗಳಲ್ಲಿ ದಾಖಲಾಗುವ ಪ್ರಕರಣಗಳು ಹಾಗೂ ಮಾನನಷ್ಟ ಪ್ರಕರಣಗಳ ಬಗ್ಗೆ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಮುಖ್ಯ ಚುನಾವಣಾ ಆಯುಕ್ತ Vs ಎಂ.ಆರ್. ವಿಜಯ ಭಾಸ್ಕರ್ ಮತ್ತಿತರರು

ಸುಪ್ರೀಂ ಕೋರ್ಟ್, CA-1767/2021 Dated 06-05-2021


ಜಸ್ಟಿಸ್ಟ್ ಧನಂಜಯ ವಿ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟಿಗೆ ಪ್ರಬಲ ಮಾಧ್ಯಮ ಭದ್ರಬುನಾದಿ ಎಂಬುದನ್ನು ಸ್ಪಷ್ಟಪಡಿಸಿತು. ಹಾಗೂ, ನ್ಯಾಯಾಂಗ ಪ್ರಕ್ರಿಯೆಯನ್ನು ಪ್ರಸಾರ ಮಾಡುವ ಹಕ್ಕು ಮಾಧ್ಯಮಕ್ಕೆ ಇದೆ. ಹಾಗೇ, ಜನರಿಗೆ ಅದನ್ನು ತಿಳಿದುಕೊಳ್ಳುವ ಹಕ್ಕೂ ಇದೆ ಎಂದು ಪ್ರತಿಪಾದಿಸಿತು.ಇಂಥದ್ದೇ ಇನ್ನೊಂದು ಪ್ರಕರಣವೊಂದರಲ್ಲಿ, ದೈನಿಕವೊಂದರ ಮಾಲಕರಾಗಿದ್ದ ವಿಜಯ್ ದಾದ್ರ ಅವರ ವಿರುದ್ದ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾಧ್ಯಮ ಒದಗಿಸುವ ಮಾಹಿತಿಯ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿತ್ತು.ಬಹುತೇಕ ಎಲ್ಲ ಮಾಧ್ಯಮಗಳೂ ದಿನನಿತ್ಯದ ಅಪರಾಧ ಸುದ್ದಿಗಳಿಗೆ ಒಂದಷ್ಟು ಸ್ಥಳವನ್ನು ಮೀಸಲಿಡುತ್ತದೆ. ನಾಗರಿಕರು ತಿಳಿಯಬೇಕಾದ ಸುದ್ದಿ, ವಿಷಯಗಳು ಇದು ಹೊಂದಿವೆ. ಮತ್ತು ಇದು ಸಾರ್ವಜನಿಕರ ತಿಳಿಯುವ ಹಕ್ಕಾಗಿದೆ ಎಂದು ಹೈಕೋರ್ಟ್ ಹೇಳಿದೆ.ನೈಜ, ವಿಶ್ವಾಸಾರ್ಹ ಸುದ್ದಿಗಳು ಮತ್ತು ವರದಿಗಳ ವಿರುದ್ದ ಮಾನನಷ್ಟ ಕೇಸು ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.ತಮ್ಮ ಹಾಗೂ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಲೋಕಮತ ಮೀಡಿಯಾ ಪ್ರೈ. ಲಿ. ಅಧ್ಯಕ್ಷ ವಿಜಯ್‌ ದಾದ್ರಾ ಮತ್ತು ಮುಖ್ಯ ಸಂಪಾದಕ ರಾಜೇಂದ್ರ ದಾದ್ರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.Judgement Copy:

ಮುಖ್ಯ ಚುನಾವಣಾ ಆಯುಕ್ತ Vs ಎಂ.ಆರ್. ವಿಜಯ ಭಾಸ್ಕರ್ ಮತ್ತಿತರರುAds on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200