ವೈದ್ಯರು, ಆರೋಗ್ಯ ಕಾರ್ಯಕರ್ತರ ಸೇವೆಗೆ ಅಡ್ಡಿ ಮಾಡುವುದು ಜಾಮೀನು ರಹಿತ ಘೋರ ಅಪರಾಧ: ಕೇರಳ ಹೈಕೋರ್ಟ್
ವೈದ್ಯರು, ಆರೋಗ್ಯ ಕಾರ್ಯಕರ್ತರ ಸೇವೆಗೆ ಅಡ್ಡಿ ಮಾಡುವುದು ಜಾಮೀನು ರಹಿತ ಘೋರ ಅಪರಾಧ: ಕೇರಳ ಹೈಕೋರ್ಟ್
ಆಶಾ ಕಾರ್ಯಕರ್ತರು, ಆರೋಗ್ಯ ನೌಕರರ ಸೇವೆಗೆ ಅಡ್ಡಿ ಮಾಡಿದರೆ, ಅದು ಜಾಮೀನು ರಹಿತ ಘೋರ ಅಪರಾಧ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಇದನ್ನು ಯಾವುದೇ ರೀತಿಯ ದೈಹಿಕ ಹಲ್ಲೆ ನಡೆಸದಿದ್ದರೂ, ಅವರ ಕರ್ತವ್ಯಕ್ಕೆ ಅಡ್ಡಿ ಮಾಡಿದರೂ ಅದು ರಾಜ್ಯದ ಕಾನೂನು ಪ್ರಕಾರ ಗಂಭೀರ ಜಾಮೀನು ರಹಿತ ಅಪರಾಧ ಎಂದು ಕೇರಳ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಪ್ರಕರಣ: ಅರುಣ್ ಪಿ Vs ಕೇರಳ ಸರ್ಕಾರ (ಕೇರಳ ಹೈಕೋರ್ಟ್)
ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆಯ ಪ್ರಮುಖ ಉದ್ದೇಶವೇ ಆರೋಗ್ಯ ಸೇವೆ ಒದಗಿಸುವ ಎಲ್ಲ ನೌಕರರ ವಿರುದ್ಧ ನಡೆಯುವ ಹಿಂಸಾಚಾರ ತಡೆಯುವುದಾಗಿದೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿಳಿಸಿದರು.
ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿರುವ ಹಿಂಸೆ ಪದಕ್ಕೆ ವಿಶಾಲ ಅರ್ಥವಿದೆ. ಕಾಯ್ದೆ ಜಾರಿಗೆ ತಂದಿರುವ ಶಾಸಕಾಂಗದ ಉದ್ದೇಶವೂ ಅದೇ ಆಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಡಾಕ್ಟರ್ ಒಬ್ಬರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ನಿರೀಕ್ಷಣಾ ಜಾಮೀನು ತಿರಸ್ಕರಿಸಿತು.