-->
ಡಿಜಿಟಲ್ ಮಾಧ್ಯಮಕ್ಕೆ ನಿಯಂತ್ರಣ ಅಗತ್ಯ: ನ್ಯಾಯಾಧೀಶರ ವಿರುದ್ದ ವೈಯಕ್ತಿಕ ದಾಳಿಗೆ ಬೇಸರ

ಡಿಜಿಟಲ್ ಮಾಧ್ಯಮಕ್ಕೆ ನಿಯಂತ್ರಣ ಅಗತ್ಯ: ನ್ಯಾಯಾಧೀಶರ ವಿರುದ್ದ ವೈಯಕ್ತಿಕ ದಾಳಿಗೆ ಬೇಸರ

ಡಿಜಿಟಲ್ ಮಾಧ್ಯಮಕ್ಕೆ ನಿಯಂತ್ರಣ ಅಗತ್ಯ: ನ್ಯಾಯಾಧೀಶರ ವಿರುದ್ದ ವೈಯಕ್ತಿಕ ದಾಳಿಗೆ ಬೇಸರ

ಹಾದಿ ತಪ್ಪುತ್ತಿರುವ ಡಿಜಿಟಲ್ ಮಾಧ್ಯಮದ ಮೇಲೆ ನಿಯಂತ್ರಣದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅಭಿಪ್ರಾಯಪಟ್ಟಿದ್ದಾರೆ.


ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ "ಫೋಕ್ಸ್‌ ಪಾಪುಲಿ Vs ರೂಲ್ ಆಫ್ ಲಾ: ಸುಪ್ರೀಂ ಕೋರ್ಟ್ ಆಫ್ ಇಂಡಿಯಾ" ವಿಷಯದ ಕುರಿತು ಮಾತನಾಡಿದ ಅವರು, ನ್ಯಾಯಾಧೀಶರ ಮೇಲೆ ಸಾಮಾಜಿಕ ಮಾಧ್ಯಮದ ದಾಳಿ ಮತ್ತು ಮಾಧ್ಯಮ ವಿಚಾರಣೆಯ ಋಣಾತ್ಮಕ ಪರಿಣಾಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದರು.


ದೇಶದಲ್ಲಿ ಶುದ್ಧ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು 'ರಾಜಕೀಯಕರಣ'ಗೊಳಿಸಲು ಸೋಷಿಯಲ್ ಮೀಡಿಯಾವನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.


ಮಾಧ್ಯಮಗಳನ್ನು ಮುಂದಿಟ್ಟು ನ್ಯಾಯಾಧೀಶರ ಮೇಲೆ 'ಅನಿಯಂತ್ರಿತ' ವೈಯಕ್ತಿಕ ದಾಳಿಗಳು ನಡೆಯುತ್ತಿವೆ. ಇದು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತದೆ. ಹಾಗಾಗಿ, ಡಿಜಿಟಲ್ ಮೀಡಿಯಾ ನಿಯಂತ್ರಿಸಲು ಸ್ಪಷ್ಟ ನಿಯಮಾವಳಿಗಳನ್ನು ಜಾರಿಗೆ ತರಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.


"ತಾವು ನೀಡಿದ ತೀರ್ಪುಗಳ ಪರಿಣಾಮ ನ್ಯಾಯಾಧೀಶರು ದಾಳಿ ಎದುರಿಸುವ ಅಪಾಯಕಾರಿ ಸನ್ನಿವೇಶ ಎದುರಾಗುತ್ತಾರೆ. ಆಗ, ಕಾನೂನು ಏನು ಹೇಳುತ್ತದೆ ಎಂಬುದರ ಬದಲು ಮಾಧ್ಯಮಗಳು ಏನು ಯೋಚಿಸುತ್ತವೆ ಎಂದು ನ್ಯಾಯಾಧೀಶರು ಆಲೋಚಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿ ನ್ಯಾಯಾಲಯಗಳ ಗೌರವದ ಪಾವಿತ್ರ್ಯವನ್ನು ಹಾಳು ಮಾಡುತ್ತದೆ. ದೇಶದ ಸಂವಿಧಾನದ ಅಡಿಯಲ್ಲಿ ನ್ಯಾಯಿಕ ಆಡಳಿತವನ್ನು ಕಾಪಾಡಲು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮವನ್ನು ದೇಶದಾದ್ಯಂತ ನಿಯಂತ್ರಿಸುವ ಅಗತ್ಯವಿದೆ ”ಎಂದು ಅವರು ಹೇಳಿದರು.


"ನ್ಯಾಯಾಂಗದ ತೀರ್ಪುಗಳು ಸಾರ್ವಜನಿಕ ಅಭಿಪ್ರಾಯ ಬೀರುವ ಪ್ರಭಾವದ ಪ್ರತಿಬಿಂಬವಾಗಲಾರವು. ದೇಶದ ಅತ್ಯುನ್ನತ ನ್ಯಾಯಾಲಯ ಒಂದು ವಿಷಯವನ್ನು ಮಾತ್ರ ಧ್ಯಾನಿಸಿ ಯಾವುದೇ ಪ್ರಕರಣವನ್ನು ನಿರ್ಧರಿಸುತ್ತದೆ. ಅದುವೇ ನ್ಯಾಯಿಕ ಆಡಳಿತ ಎಂಬುದು ನನ್ನ ದೃಢ ನಂಬಿಕೆ" ಎಂದು ಅವರು ಹೇಳಿದರು.


ಐತಿಹಾಸಿಕ ತೀರ್ಪುಗಳಾದ ಶಬರಿಮಲೆ ಪ್ರವೇಶ, ಸಲಿಂಗ ಕಾಮ ಅಪರಾಧವಲ್ಲ, ದೇಶದಲ್ಲಿ ಜ್ಯೂರಿ ವ್ಯವಸ್ಥೆ ರದ್ದು ಮೊದಲಾದ ತೀರ್ಪುಗಳ ಕುರಿತಂತೆಯೂ ಅವರು ವಿಸ್ತೃತವಾಗಿ ಮಾತನಾಡಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200