-->
ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಹಾಕಿದರೆ ಶಿಕ್ಷೆ ಕಾದಿದೆ..!- ಸುಪ್ರೀಂ ಕೋರ್ಟ್

ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಹಾಕಿದರೆ ಶಿಕ್ಷೆ ಕಾದಿದೆ..!- ಸುಪ್ರೀಂ ಕೋರ್ಟ್

ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಹಾಕಿದರೆ ಶಿಕ್ಷೆ ಕಾದಿದೆ..!- ಸುಪ್ರೀಂ ಕೋರ್ಟ್ 

ಕಕ್ಷಿದಾರರು ಸುಳ್ಳು ಪ್ರಮಾಣಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಈ ಅಪರಾಧಕ್ಕೆ ಅವರಿಗೆ ಖಂಡಿತವಾಗಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಪೆರ್ರಿ ಕನ್ಸಾಗ್ರ, ಸುಪ್ರೀಂ ಕೋರ್ಟ್

SUO-MOTU CONTEMPT PETITION (CIVIL) NO.3 OF 2021


ಭಾರತೀಯ ಮೂಲದ ಕೀನ್ಯಾ ಪ್ರಜೆಯೊಬ್ಬರು ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು ಲಲಿತ್ ಹಾಗೂ ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ.ಕೋರ್ಟ್‌ಗೆ ಸುಳ್ಳು ಹೇಳಿಕೆ ನೀಡುವುದು, ಸುಳ್ಳು ಅಫಿಡವಿಟ್ ಸಲ್ಲಿಸುವುದು ಕೋರ್ಟನ್ನು ವಂಚಿಸುವ ಪ್ರಯತ್ನವಾಗುತ್ತವೆ. ಇಂತಹ ಕೃತ್ಯಗಳು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಘಟನೆಯ ವಿವರ:

ಭಾರತೀಯ ಸಂಜಾತ ಕೀನ್ಯಾ ಪ್ರಜೆ ಪೆರ್ರಿ ಎಂಬಾತ ಸತ್ಯ ಮುಚ್ಚಿಟ್ಟು, ಸುಳ್ಳು ಅಫಿಡವಿಟ್ ಸಲ್ಲಿಸಿ ಮಗುವನ್ನು ಪಾಲನೆಗಾಗಿ ಪಡೆದುಕೊಂಡಿದ್ದರು. ಈ ವಿಚಾರ ಗೊತ್ತಾದ ಕೂಡಲೇ ಕೋರ್ಟ್ ಆ ಆದೇಶವನ್ನು ವಾಪಸ್ ಪಡೆಯಿತು. ಜೊತೆಗೆ ಸುಳ್ಳು ಅಫಿಡವಿಟ್ ನೀಡಿದ್ದ ಪೆರ್ರಿ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.ಈ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಇದೀಗ ಪೆರ್ರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲು ಮುಂದಾಗಿದೆ.ಈ ಕುರಿತಂತೆ ಸೂಚನೆ ನೀಡಿರುವ ನ್ಯಾಯಾಲಯ ಇದೇ ಜುಲೈ 22ರ ಮಧ್ಯಾಹ್ನ 3ಗಂಟೆಗೆ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಅವರು ಹಾಜರಾಗದಿದ್ದರೂ ಶಿಕ್ಷೆ ಪ್ರಮಾಣ ಪ್ರಕಟಿಸಬಹುದು ಎಂದು ತಿಳಿಸಿದೆ.

ಕೋರ್ಟ್ ತೀರ್ಪಿನ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ..


ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಹಾಕಿದರೆ ಶಿಕ್ಷೆ ಕಾದಿದೆ..!- ಸುಪ್ರೀಂ ಕೋರ್ಟ್ 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200