-->
ಸರ್ಕಾರಿ ನೌಕರರ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯ: ಸಮಗ್ರ ಮಾಹಿತಿ

ಸರ್ಕಾರಿ ನೌಕರರ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯ: ಸಮಗ್ರ ಮಾಹಿತಿ

ಸರ್ಕಾರಿ ನೌಕರರ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯ: ಸಮಗ್ರ ಮಾಹಿತಿ






ಒಂದು ವರ್ಷ ಸೇವೆಯನ್ನು ಪೂರೈಸಿದ ಸರಕಾರಿ ನೌಕರರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನದಿಂದ ತಮ್ಮ ಸ್ವಂತ ಊರಿಗೆ ಪ್ರಯಾಣಿಸಲು ಎರಡು ವರ್ಷಗಳಿಗೊಮ್ಮೆ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತಾರೆ.


(KCSR ನಿಯಮ 549;550;551)


ಪ್ರಸ್ತುತ ಎರಡು ವರ್ಷಗಳ ಅವಧಿಯ ಬ್ಲಾಕ್ ಪಿರಿಯಡ್ 2021-2022 ಆಗಿರುತ್ತದೆ.



ಸರಕಾರಿ ನೌಕರ ಆತನ/ಆಕೆಯ ಪತಿ/ಪತ್ನಿ ಮತ್ತು ಮಕ್ಕಳು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.


ಈ ಸೌಲಭ್ಯವನ್ನು ಬಳಸಲು ಸರಕಾರಿ ನೌಕರರನು ಸಾರ್ವತ್ರಿಕ ರಜೆ; ಸಾಂದರ್ಭಿಕ ರಜೆ ಅಥವಾ ಬೇಸಿಗೆ ರಜೆಯ ಅವಧಿಯನ್ನು ಬಳಸಿಕೊಳ್ಳಬಹುದು.



ಈ ಸೌಲಭ್ಯವನ್ನು ಬಳಸಲು ಸ್ವಂತ ಕಾರು ಅಥವಾ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಾದ ರೈಲು; ಬಸ್ಸನ್ನು ಉಪಯೋಗಿಸಬಹುದು.



ಸ್ವಗ್ರಾಮ ಪ್ರಯಾಣ ಸೌಲಭ್ಯವನ್ನು ಬಳಸುವ ಮೊದಲು ನೌಕರರು ತಮ್ಮ ನಿಯಂತ್ರಣಾಧಿಕಾರಿ ಅವರಿಗೆ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಬಳಸುವ ಬಗ್ಗೆ ಹಾಗೂ ಪ್ರಯಾಣದ ಬಗ್ಗೆ ಮಾಹಿತಿಯನ್ನು ನೀಡಬೇಕು.



ನ್ಯಾಯಾಂಗ ಇಲಾಖೆಯ ನೌಕರರು ಮಾನ್ಯ ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ನ್ಯಾಯಾಂಗ ಅಧಿಕಾರಿಗಳು ಮಾನ್ಯ ಉಚ್ಛ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗಿದೆ. ನ್ಯಾಯಾಂಗ ಅಧಿಕಾರಿಗಳು ಮಾನ್ಯ ಉಚ್ಚ ನ್ಯಾಯಾಲಯವು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕಾಗಿದೆ.


ನೌಕರರು ತಮ್ಮ ಸೇವಾ ಪುಸ್ತಕದಲ್ಲಿ ಸ್ವಂತ ಊರು ಎಂದು ಕಾಣಿಸಿದ ಸ್ಥಳಕ್ಕೆ ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದು.


ಕೆ.ಸಿ.ಎಸ್.ಆರ್.ನಿಯಮ 553 ಹಾಗೂ ಕೆ.ಎಫ್.ಸಿ. ವಿಧಿ 238 AA (a) ಪ್ರಕಾರ ಅ೦ದಾಜು ಪ್ರಯಾಣ ವೆಚ್ಚದ 4/5 ರಷ್ಟು ಮುಂಗಡ ಪಡೆಯಲು ಅವಕಾಶವಿದೆ. ಈ ಮುಂಗಡವನ್ನು ಅಂತಿಮ ಪ್ರಯಾಣ ಬಿಲ್ಲಿನಲ್ಲಿ ಹೊಂದಾಣಿಕೆ ಮಾಡಬೇಕು.



ಪ್ರಯಾಣವನ್ನು ಪೂರ್ಣಗೊಳಿಸಿದ ಒಂದು ತಿಂಗಳ ಒಳಗೆ ಪ್ರಯಾಣ ದರ ಮರುಪಾವತಿ ಕೋರಿ ಅರ್ಜಿಯನ್ನು ಸಲ್ಲಿಸತಕ್ಕದ್ದು.


ಪತಿ ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ಒಬ್ಬರು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.


ಸರಕಾರಿ ನೌಕರನನ್ನು ಹೊರತುಪಡಿಸಿ ಆತನ ಕುಟುಂಬದ ಸದಸ್ಯರು ಮಾತ್ರ ಪ್ರತ್ಯೇಕವಾಗಿ ಪ್ರಯಾಣ ಮಾಡಿದ್ದಲ್ಲಿ ಅವರು ಕೂಡಾ ಸ್ವಗ್ರಾಮ ಪ್ರಯಾಣ ರಿಯಾಯಿತಿ ಭತ್ಯೆ ಪಡೆಯಲು ಅಹ೯ತೆ ಹೊಂದಿರುತ್ತಾರೆ.



KFC Article 137 (15)ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಟಿ.ಎ. ಬಿಲ್ ಜೊತೆ ಹಾಜರುಪಡಿಸತಕ್ಕದ್ದು. ಬಸ್ಸು ಮತ್ತು ರೈಲಿನಲ್ಲಿ ಪ್ರಯಾಣ ಮಾಡಿದ್ದಲ್ಲಿ ಟಿಕೆಟ್ಗಳನ್ನು ಹಾಜರುಪಡಿಸಬೇಕು.



ಸ್ವಗ್ರಾಮ ಪ್ರಯಾಣ ರಿಯಾಯಿತಿ ಭತ್ಯೆಯನ್ನು ಬಳಸಿಕೊಂಡ ಬಗ್ಗೆ ಸರಕಾರಿ ನೌಕರರ ಸೇವಾ ವಹಿಯಲ್ಲಿ ತಪ್ಪದೇ ನಮೂದನೆಗಳನ್ನು ದಾಖಲಿಸತಕ್ಕದ್ದು.


ಲೇಖನ: ಪ್ರಕಾಶ್ ನಾಯಕ್; ಶಿರಸ್ತೇದಾರರು; ನ್ಯಾಯಾಂಗ ಇಲಾಖೆ; ಮಂಗಳೂರು


Photo: Prakash Nayak, Mangaluru


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200