-->
Provident Fund ಹೊಸ ನಿಯಮ- ಪಿಎಫ್‌ ಇದ್ದವರು ಈ ಸುದ್ದಿ ಓದಲೇಬೇಕು....

Provident Fund ಹೊಸ ನಿಯಮ- ಪಿಎಫ್‌ ಇದ್ದವರು ಈ ಸುದ್ದಿ ಓದಲೇಬೇಕು....

Provident Fund ಹೊಸ ನಿಯಮ- ಪಿಎಫ್‌ ಇದ್ದವರು ಈ ಸುದ್ದಿ ಓದಲೇಬೇಕು....



ಕಾರ್ಮಿಕರ ಭವಿಷ್ಯ ನಿಧಿ (EPF) ಒಂದು ಸುರಕ್ಷಿತ ಹೂಡಿಕೆ.. ಇಪಿಎಫ್ ನಲ್ಲಿ ಕೋಟ್ಯಂತರ ಉದ್ಯೋಗಿಗಳು ಸದಸ್ಯತ್ವ ನೋಂದಣಿ ಹೊಂದಿದ್ದಾರೆ. ಅವರಿಗೆ ಇದು ನಿವೃತ್ತಿ ಸಂದರ್ಭದಲ್ಲಿ ಸಿಗುವ ಬಹುದೊಡ್ಡ ಹಣಕಾಸು ವ್ಯವಸ್ಥೆ.



ನಿವೃತ್ತ ಜೀವನದ ಸಂತೃಪ್ತ ಖಚಿತ ಆದಾಯ ಮತ್ತು ತೆರಿಗೆ ಪ್ರಯೋಜನ ಇರುವ ಇಪಿಎಫ್ ಕಾರ್ಮಿಕ ಕಲ್ಯಾಣಕ್ಕಾಗಿ ಜಾರಿಯಲ್ಲಿ ಇರುವ ಒಂದು ಅತ್ಯುತ್ತಮ ಯೋಜನೆ. ಕಾರ್ಮಿಕರ ಭವಿಷ್ಯ ನಿಧಿ ಠೇವಣಿಯನ್ನು ಯಾವುದೇ ತುರ್ತು ಸಂದರ್ಭದಲ್ಲಿ ಭಾಗಶಃ ಪಡೆಯಲು ಅವಕಾಶ ಇದೆ.



ಏಪ್ರಿಲ್ 1, 2022ರಿಂದ EPF‌ಗೆ ನೀಡುವ Contributionಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳಿಗೆ ಸರ್ಕಾರ ತಿದ್ದುಪಡಿ ತಂದಿದೆ. ಕಾರ್ಮಿಕರ ಭವಿಷ್ಯ ನಿಧಿ ಖಾತೆಗಳನ್ನು ತೆರಿಗೆ ಮತ್ತು ತೆರಿಗೆ ರಹಿತ ಖಾತೆಗಳಾಗಿ ವಿಂಗಡಿಸಲಾಗಿದೆ.



EEE ಯೋಜನೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಮತ್ತು ಲಾಭ ಗಳಿಸುವ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ತೆರಿಗೆ ಪ್ರಯೋಜನಗಳನ್ನು ಕಡಿಮೆಗೊಳಿಸಲಾಗಿದೆ.







ಈ ಕುರಿತು ಪ್ರಮುಖ 10 ಮಾಹಿತಿಗಳು ಇಲ್ಲಿದೆ...


# 2021-22 ಆರ್ಥಿಕ ವರ್ಷದಲ್ಲಿ EPF ಬಡ್ಡಿದರವನ್ನು ಶೇಕಡಾ 8.1 ಕ್ಕೆ ಇಳಿಸಿದೆ. ಇದು ನಾಲ್ಕು ದಶಕಗಳ ಕನಿಷ್ಠ ಬಡ್ಡಿದರವಾಗಿದೆ.


# ಕಾರ್ಮಿಕರ EPFಗೆ ವರ್ಷಕ್ಕೆ ರೂಪಾಯಿ 2.5 ಲಕ್ಷದವರೆಗಿನ ಕೊಡುಗೆ ಮೇಲಿನ ಬಡ್ಡಿ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ.


# ಕಾರ್ಮಿಕರ EPFಗೆ ವರ್ಷಕ್ಕೆ ರೂಪಾಯಿ 2.5 ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಯ ಮೇಲೆ ತೆರಿಗೆ ನೀಡಬೇಕಾಗುತ್ತದೆ.


# ಮಾಲಕನು ಉದ್ಯೋಗಿಯ EPFಗೆ ಯಾವುದೇ ಕೊಡುಗೆ ನೀಡದಿದ್ದರೆ ಕೊಡುಗೆ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತದೆ.


# ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಕೊಡುಗೆಗೆ ಮಾತ್ರ ತೆರಿಗೆ ಲೆಕ್ಕ ಹಾಕುವುದು. ಹಾಗಂತ, ಒಟ್ಟು ಕೊಡುಗೆಗೆ ತೆರಿಗೆ ವಿಧಿಸುವುದು ಅಲ್ಲ.


# ಹೆಚ್ಚುವರಿ ಕೊಡುಗೆಗಳು ಮತ್ತು ಅದರ ಮೇಲೆ ಸಂಗ್ರಹವಾದ ಬಡ್ಡಿಯನ್ನು ಇಪಿಎಫ್‌ಒ ಜೊತೆ ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗುತ್ತದೆ


# ಭವಿಷ್ಯ ನಿಧಿ, NPSಗೆ ಮಾಲಕರು ನೀಡುವ ಕೊಡುಗೆ ಮತ್ತು ವರ್ಷಕ್ಕೆ ಒಟ್ಟು ರೂಪಾಯಿ 7.5 ಲಕ್ಷ ಮೊತ್ತದ ಹೆಚ್ಚುವರಿ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.


# ಮಾಲಕರು ಈ ವಿವರಗಳನ್ನು ಫಾರ್ಮ್ 16 ಮತ್ತು 12(B)(A)ನಲ್ಲಿ ಭರ್ತಿ ಮಾಡಬೇಕು.


# ರೂ. 15,000ವರೆಗಿನ ಮಾಸಿಕ ಆದಾಯಕ್ಕೆ ಕಡ್ಡಾಯವಾಗಿ EPF ಕೊಡುಗೆ ನೀಡಬೇಕು.


# "ತಡೆ ಹಿಡಿದ ತೆರಿಗೆ"ಯನ್ನು ಕಾರ್ಮಿಕರು "ಇತರ ಮೂಲಗಳ ಆದಾಯ" ಎಂದು ನಮೂದಿಸಬಹುದು. 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200