-->
ಸಮಸ್ಯೆ ಮರೆಮಾಚಬೇಡಿ... ಜನರ ಆಶೋತ್ತರಗಳಿಗೆ ಸ್ಪಂದಿಸಿ: ಜಿಲ್ಲಾ ನ್ಯಾಯಾಧೀಶರಿಗೆ ಸಿಜೆಐ ರಮಣ ಕರೆ

ಸಮಸ್ಯೆ ಮರೆಮಾಚಬೇಡಿ... ಜನರ ಆಶೋತ್ತರಗಳಿಗೆ ಸ್ಪಂದಿಸಿ: ಜಿಲ್ಲಾ ನ್ಯಾಯಾಧೀಶರಿಗೆ ಸಿಜೆಐ ರಮಣ ಕರೆ

ಸಮಸ್ಯೆ ಮರೆಮಾಚಬೇಡಿ... ಜನರ ಆಶೋತ್ತರಗಳಿಗೆ ಸ್ಪಂದಿಸಿ: ಜಿಲ್ಲಾ ನ್ಯಾಯಾಧೀಶರಿಗೆ ಸಿಜೆಐ ರಮಣ ಕರೆ


ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳ ಸಮಾವೇಶ





ನವದೆಹಲಿಯ ವಿಜ್ಞಾನ ಭವನದಲ್ಲಿ ದಿನಾಂಕ 30.7.2022 ರಂದು ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.


ನ್ಯಾಯಾಂಗ ತನ್ನ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಮರೆಮಾಚದೆ, ಮುಚ್ಚಿಡದೇ ಚರ್ಚಿಸಬೇಕು. ಇದರಿಂದ ಜನರಿಗೆ ಉತ್ತಮ ಸೇವೆ ಒದಗಿಸಬಹುದು ಎಂದು ಸಿಜೆಐ ಜ. ಎನ್. ವಿ. ರಮಣ ಸಲಹೆ ನೀಡಿದ್ದಾರೆ.


ದೇಶದ ಪ್ರಜೆಗಳಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ನಮಗೆ ಇದ್ದರೆ, ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗುವ, ಕಾರ್ಯಚಟುವಟಿಕೆ ಉತ್ತಮಪಡಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನೂ ನಾವು ಎತ್ತಿ ತೋರಿಸಬೇಕು. ಇದನ್ನು ಮರೆಮಾಚುವುದರಲ್ಲಿ ಅಥವಾ ಮುಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಸಮಸ್ಯೆಗಳ ಬಗ್ಗೆರ್ಚೆ ಮಾಡದಿದ್ದರೆ, ತೊಂದರೆ ನಿವಾರಿಸದಿದ್ದರೆ , ಆಗ ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಜ. ರಮಣ ಹೇಳಿದ್ದಾರೆ.


ಸಾಮಾಜಿಕ ನ್ಯಾಯ ನಮ್ಮ ಸಾಂವಿಧಾನಿಕ ಆಶಯ. ನಮ್ಮ ಸಮಸ್ಯೆಗಳನ್ನು ನೋಡಿದರೆ, ನಮ್ಮ ಸಂವಿಧಾನದ ಆಶಯವನ್ನು ಪೂರೈಸಲು ಸಾಧ್ಯವಾಗಬಹುದು ಎಂ ಭಯ ನನಗಾಗುತ್ತಿದೆ. ಅದ್ದರಿಂದ ಚರ್ಚಿಸಿ(ಡಿಸ್ಕಸ್), ಸಂವಾದಿಸಿ (ಡಿಬೇಟ್) ನಂತರ ನಿರ್ಧರಿಸಿ (ಡಿಸೈಡ್) ಎಂದು ನಾನು ಹೇಳುತ್ತೇನೆ. ಹೇಳುವುದು ಮಾತ್ರವಲ್ಲ, ಅದನ್ನು ನಾನೂ ಪಾಲಿಸುತ್ತಿದ್ದೇನೆ... ಎಂದು ಅವರು ವಿವರಿಸಿದ್ದಾರೆ.



ನಾಡಿನ ಎಲ್ಲ ರಾಜ್ಯಗಳ ಜಿಲ್ಲಾ ನ್ಯಾಯಾಧೀಶರು ಬಹುಮುಖಿ ಪಾತ್ರ ನಿರ್ವಹಿಸಬೇಕು. ಜಿಲ್ಲಾ ನ್ಯಾಯಾಧೀಶರಾಗಿ ನೀವು, ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಮತ್ತು ಸಾಮಾಜಿಕ ಸಮಸ್ಯೆ ಅರ್ಥ ಮಾಡಿಕೊಳ್ಳುವ ಉತ್ತಮ ಸ್ಥಾನದಲ್ಲಿ ನೀವು ಇದ್ದೀರಿ. ದೇಶದ ಕಾನೂನು ನೆರವು ಆಂದೋಲನಕ್ಕೆ ಜಿಲ್ಲಾ ನ್ಯಾಯಾಂಗವೇ ಪ್ರಮುಖ ಪ್ರೇರಕ ಶಕ್ತಿ. ಜಿಲ್ಲಾ ನ್ಯಾಯಾಂಗವನ್ನು ಬಲಪಡಿಸುವುದು ನಮ್ಮ ತುರ್ತು ಅಗತ್ಯ ಎಂದು ರಮಣ ಹೇಳಿದ್ದಾರೆ.


Watch Video:



Ads on article

Advertise in articles 1

advertising articles 2

Advertise under the article