-->
MC Case: ದಂಪತಿ ನಡುವಿನ ಸಣ್ಣಪುಟ್ಟ ವೈಮನಸ್ಯ ಕ್ರೌರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

MC Case: ದಂಪತಿ ನಡುವಿನ ಸಣ್ಣಪುಟ್ಟ ವೈಮನಸ್ಯ ಕ್ರೌರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

ದಂಪತಿ ನಡುವಿನ ಸಣ್ಣಪುಟ್ಟ ವೈಮನಸ್ಯ ಕ್ರೌರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್





ದಂಪತಿ ನಡುವಿನ ಸಣ್ಣಪುಟ್ಟ ವೈಮನಸ್ಯ ಕ್ರೌರ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದ್ದು, ಮಹಿಳೆಗೆ ವಿಚ್ಚೇದನ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.


ಪ್ರಕರಣ: ಸರಿತಾ ಶರ್ಮಾ Vs ಗೌರವ್ ಶರ್ಮಾ, (ಮಧ್ಯಪ್ರದೇಶ ಹೈಕೋರ್ಟ್)



ರಾತ್ರಿ ಹಗಲಾಗುವುದರೊಳಗೆ ತಮ್ಮ ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಗಂಡನು ತನ್ನ ಹೆಂಡತಿಗೆ ಸುಧಾರಣೆಯಾಗಲು ಮತ್ತೊಂದು ಅವಕಾಶ ನೀಡಬಹುದಿತ್ತು ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.



ಎರಡೂ ಕುಟುಂಬಗಳು, ಸಮುದಾಯದ ಮುಖಂಡರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಹಲವು ಸಭೆಗಳ ಬಳಿಕ ಈ ಮದುವೆಯಾಗಿದೆ. ಗಂಡ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ವಿನಾ ಕಾರಣ ಪತಿಯ ತಪ್ಪಿಗೆ ಹೆಂಡತಿಯ ಜೀವನ ಹಾಳುಮಾಡಲು ಅವಕಾಶ ನೀಡಲಾಗದು ಎಂಬುದನ್ನು ನ್ಯಾಯಪೀಠ ಗಮನಿಸಿತು.



ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಇದನ್ನೇ ಗಂಡ ಮತ್ತು ಹೆಂಡತಿಯ ನಡುವಿನ ಕ್ರೌರ್ಯ ಎನ್ನಲು ಸಾಧ್ಯವಿಲ್ಲ. ದಾಂಪತ್ಯ ಜೀವನದಲ್ಲಿ ಪತ್ನಿಯಾಗಿ ಮತ್ತು ಪತಿಯಾಗಿ ಬಾಳಲು ಮತ್ತು ಪರಸ್ಪರ ಅರಿತುಕೊಳ್ಳು ಇಬ್ಬರಿಗೂ ಸಮಯ ನೀಡಬೇಕು. ದಂಪತಿಯ ವರ್ತನೆಯಲ್ಲಿ ರಾತ್ರಿ ಹಗಲಾಗುವುದರಲ್ಲಿ ಬದಲಾವಣೆ ಆಗಬೇಕು ಎಂಬ ನಿರೀಕ್ಷೆ ಸಲ್ಲದು ಎಂದು ಪೀಠ ಅಭಿಪ್ರಾಯಪಟ್ಟಿದೆ.



ಪತ್ನಿಯು ಪತಿಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ವಿಚ್ಚೇದನ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.



'ಮೆಟ್ರಿಮನಿ' ಜಾಲತಾಣದಲ್ಲಿ ಪತ್ನಿ ತನ್ನ ಪ್ರಾಯ, ಶೈಕ್ಷಣಿಕ ಅರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಹೆಂಡತಿಗೆ ಅಹಂಕಾರಿ ಮನೋಭಾವ ಇದ್ದು, ಆಕೆಯ ದೇಹ ಬೆವರು ವಾಸನೆ ಬರುತ್ತಿದೆ. ಇದು ಗಂಭೀರ ಖಾಯಿಲೆಯಾದರೂ ಚಿಕಿತ್ಸೆಗೆ ಸಿದ್ಧಳಿರಲಿಲ್ಲ ಎಂದು ಪತಿ ದೂರಿದ್ದರು. ಆದರೆ, ಪತ್ನಿ ಪತಿಯೊಂದಿಗೆ ಸಂಸಾರ ನಡೆಸುವ ಇಚ್ಚೆ ವ್ಯಕ್ತಪಡಿಸಿದ್ದರು.



ಪತ್ನಿಯ ಕ್ರೌರ್ಯ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದ ಪೀಠ ಪತ್ನಿಯ ಮೇಲ್ನನವಿಯನ್ನು ಪುರಸ್ಕರಿಸಿತು ಹಾಗೂ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನವನ್ನು ರದ್ದುಗೊಳಿಸಿತು.



ವೈವಾಹಿಕ ಹಕ್ಕನ್ನು ಮರುಸ್ಥಾಪನೆಯಾಗುವ ತೀರ್ಪು ಪಾಲಿಸುವವರೆಗೆ ಮಧ್ಯಂತರ ಜೀವನಾಂಶಕ್ಕಾಗಿ ಹೆಂಡತಿಗೆ ತಿಂಗಳಿಗೆ ₹ 8,000 ಪಾವತಿಸುವಂತೆ ಪತಿಗೆ ನಿರ್ದೇಶನ ನೀಡಿತು.

Ads on article

Advertise in articles 1

advertising articles 2

Advertise under the article