-->
ನ್ಯಾಯಾಲಯಗಳಲ್ಲಿ ಸ್ವಾತಂತ್ಯ ಆಚರಣೆ: ಹೈಕೋರ್ಟ್‌ ಹೊರಡಿಸಿದ ಮಾರ್ಗಸೂಚಿ

ನ್ಯಾಯಾಲಯಗಳಲ್ಲಿ ಸ್ವಾತಂತ್ಯ ಆಚರಣೆ: ಹೈಕೋರ್ಟ್‌ ಹೊರಡಿಸಿದ ಮಾರ್ಗಸೂಚಿ

ನ್ಯಾಯಾಲಯಗಳಲ್ಲಿ ಸ್ವಾತಂತ್ಯ ಆಚರಣೆ: ಹೈಕೋರ್ಟ್‌ ಹೊರಡಿಸಿದ ಮಾರ್ಗಸೂಚಿ





ಸ್ವಾತಂತ್ರ್ಯೋತ್ಸವ ಆಚರಣೆ ಕುರಿತು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾಯ೯ನಿವ೯ಹಿಸುವ ಎಲ್ಲಾ ನ್ಯಾಯಾಲಯಗಳಿಗೆ ಮಾನ್ಯ ಕನಾ೯ಟಕ ಹೈಕೋರ್ಟ್ ಹೊರಡಿಸಿದ ಮಾಗ೯ದಶಿ೯ ಸೂತ್ರಗಳು


ದಿನಾಂಕ 15.8.2022 ರ೦ದು ಆಚರಿಸಲಾಗುವ 75 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಕುರಿತು ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳು ಈ ಕೆಳಗಿನಂತಿವೆ.


1. ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ರಾಷ್ಟ್ರ ಧ್ವಜಾರೋಹಣಗೈಯಲಿದ್ದಾರೆ.


2. ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲಿನ ಹಿರಿಯ ನ್ಯಾಯಾಧೀಶರು ರಾಷ್ಟ್ರ ಧ್ವಜಾರೋಹಣಗೈಯಲಿದ್ದಾರೆ.


3. ಈ ಕೆಳಗೆ ಕಾಣಿಸಲಾದ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸತಕ್ಕದ್ದು.


i) ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರದ ವಕೀಲರ ಸಂಘದ ಅಧ್ಯಕ್ಷರು ಮತ್ತು ವಕೀಲರ ಸಂಘದ ಪದಾಧಿಕಾರಿಗಳು.


ii) ಸರಕಾರಿ ವಕೀಲರು ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರು.


iii) ನ್ಯಾಯಾಲಯದ ದವಾಖಾನೆಯ ವೈದ್ಯರು; ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯವರನ್ನು ಆಹ್ವಾನಿಸತಕ್ಕದ್ದು.


iv) ನ್ಯಾಯಾಲಯದ ಸಿಬ್ಬಂದಿಗಳು; ನೌಕರ ಸಂಘದ ಪದಾಧಿಕಾರಿಗಳು ಮತ್ತು ನ್ಯಾಯಾಲಯದ ಅವಶ್ಯಕ ಭದ್ರತಾ ಸಿಬ್ಬಂದಿಗಳು.


4. ಸಮಾರಂಭದಲ್ಲಿ ಭಾಗವಹಿಸುವವರ ಒಟ್ಟು ಸಂಖ್ಯೆ ನೂರು (100) ಮೀರದಂತೆ ನೋಡಿಕೊಳ್ಳತಕ್ಕದ್ದು. ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ಸ್ಥಳದಲ್ಲಿ ಆಹ್ವಾನಿತರ ಸಂಖ್ಯೆಯನ್ನು ಕಡಿತಗೊಳಿಸತಕ್ಕದ್ದು.


5.ಸಮಾರಂಭದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರ 6 ‌ಅಡಿ ಇರುವಂತೆ ವ್ಯವಸ್ಥೆ ಮಾಡತಕ್ಕದ್ದು.


6. ಉಪಾಹಾರದ ಪೊಟ್ಟಣಗಳನ್ನು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ.


7. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಅಥವಾ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇರುವುದಿಲ್ಲ.


ಸಾಮಾನ್ಯ ಸೂಚನೆಗಳು


1. ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳು ಮುಖಗವಸು (mask) ಧರಿಸಿರುವುದನ್ನು ಪರಿಶೀಲಿಸಿ ಅವರನ್ನು ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೊಳಪಡಿಸಿ ಪ್ರವೇಶಕ್ಕೆ ಅವಕಾಶ ನೀಡತಕ್ಕದ್ದು.


2. ಇಬ್ಬರು ವ್ಯಕ್ತಿಗಳ ನಡುವೆ 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿರ್ದಿಷ್ಟ ಗುರುತುಗಳನ್ನು ಸಮಾರಂಭ ನಡೆಯುವ ಸ್ಥಳದಲ್ಲಿ ಹಾಕತಕ್ಕದ್ದು.


3. ಆಗಮಿಸುವ ಅತಿಥಿಗಳನ್ನು ಸ್ವಾಗತಿಸಿ ನಿಗದಿಪಡಿಸಿದ ಆಸನದಲ್ಲಿ ಅವರ ಉಪಸ್ಥಿತಿ ಇರುವಂತೆ ನೋಡಿಕೊಳ್ಳುವ ಕಾರ್ಯಕ್ಕೆ ಹಿರಿಯ ಸಿಬಂದಿಗಳನ್ನು ನಿಯೋಜಿಸತಕ್ಕದ್ದು.


4. ಧ್ವಜಾರೋಹಣ ನಡೆಯುವ ಸ್ಥಳದಲ್ಲಿ ಭಾರತ ರತ್ನ ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸುವ ಕುರಿತು ಮಾನ್ಯ ಹೈಕೋರ್ಟ್ ಸುತ್ತೋಲೆ ಸಂಖ್ಯೆ HCE 117/2022 ದಿನಾಂಕ 4.2.2022 ರಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸತಕ್ಕದ್ದು.


ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೆದಾರರು; ನ್ಯಾಯಾಂಗ ಇಲಾಖೆ ; ಮಂಗಳೂರು

Ads on article

Advertise in articles 1

advertising articles 2

Advertise under the article