-->
ರಸ್ತೆ ಅಪಘಾತ ಪ್ರಕರಣ: ಮೃತ ಪೋಷಕರ ಪರಿಹಾರದಲ್ಲಿ ವಿವಾಹಿತ ಪುತ್ರಿಗೂ ಹಕ್ಕಿದೆ- ಹೈಕೋರ್ಟ್ ಮಹತ್ವದ ತೀರ್ಪು

ರಸ್ತೆ ಅಪಘಾತ ಪ್ರಕರಣ: ಮೃತ ಪೋಷಕರ ಪರಿಹಾರದಲ್ಲಿ ವಿವಾಹಿತ ಪುತ್ರಿಗೂ ಹಕ್ಕಿದೆ- ಹೈಕೋರ್ಟ್ ಮಹತ್ವದ ತೀರ್ಪು

ರಸ್ತೆ ಅಪಘಾತ ಪ್ರಕರಣ: ಮೃತ ಪೋಷಕರ ಪರಿಹಾರದಲ್ಲಿ ವಿವಾಹಿತ ಪುತ್ರಿಗೂ ಹಕ್ಕಿದೆ- ಹೈಕೋರ್ಟ್ ಮಹತ್ವದ ತೀರ್ಪು





ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತ ಪೋಷಕರು ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ನೀಡುವ ವಿಮಾ ಪರಿಹಾರವನ್ನು ಪಡೆಯಲು ಮೃತ ಸಂತ್ರಸ್ತರ ವಿವಾಹಿತ ಪುತ್ರಿಯರಿಗೂ ಹಕ್ಕಿದೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ.

ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಮಹಿಳೆಯ ವಿವಾಹಿತ ಪುತ್ರಿಗೆ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ (ಎಂಎಸಿಟಿ) ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಚ್ ಪಿ ಸಂದೇಶ್ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ.


ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ಮಕ್ಕಳಲ್ಲಿ ಲಿಂಗ ತಾರತಮ್ಯ ಮಾಡಲು ಸಾಧ್ಯವಿಲ್ಲ. ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟ ವೇಳೆ, ಸಂತ್ರಸ್ತರ ವಿವಾಹಿತ ಹೆಣ್ಣು ಮಕ್ಕಳಿಗೂ ವಿಮಾ ಪರಿಹಾರದಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ಹೇಳಿದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.


ಸುಪ್ರೀಂ ಕೋರ್ಟ್ ನೀಡಿರುವ "ನ್ಯಾಶನಲ್ ಇನ್ಸೂರೆನ್ಸ್ ಲಿ Vs ಬೀರೇಂದರ್ ಪ್ರಕರಣ"ದ ತೀರ್ಪನ್ನು ಉಲ್ಲೇಖಿಸಿರುವ ಪೀಠವು ಮೃತ ಸಂತ್ರಸ್ತರ ವಾರಿಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.


ಸಂತ್ರಸ್ತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ, ಮೃತರ ವಯಸ್ಕ, ವಿವಾಹಿತ ಹಾಗೂ ಸಂಪಾದನೆ ಮಾಡುತ್ತಿರುವ ಮಕ್ಕಳು ಸಹ ಮೃತರಿಗೆ ಸಿಗುವ ವಿಮಾ ಪರಿಹಾರದಲ್ಲಿ ಹಕ್ಕುಳ್ಳವರಾಗಿದ್ದಾರೆ ಮತ್ತು ಈ ಕುರಿತು ಪರಿಹಾರದ ಕೋರಿಕೆ ಸಲ್ಲಿಸಿ ಟ್ರಿಬ್ಯೂನಲ್‌ನಲ್ಲಿ ಅರ್ಜಿ ಹಾಕಬಹುದು. ಮ್ತು ಅದನ್ನು ಪರಿಗಣಿಸುವುದು ಟ್ರಿಬ್ಯೂನಲ್‌ನ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.


"ಸಂತ್ರಸ್ತರ ಮೇಲೆ ಅರ್ಜಿದಾರರು ಅವಲಂಬಿತರಾಗಿದ್ದಾರೋ ಇಲ್ಲವೋ ಎಂಬ ವಿಷಯ ಪರಿಗಣನೆಗೆ ಮುಖ್ಯವಲ್ಲ. ಸಂತ್ರಸ್ತರ ವಾರಸುದಾರರ ಕ್ಲೇಮು ಅರ್ಜಿಯನ್ನು ಪರಿಗಣಿಸುವುದು ಟ್ರಿಬ್ಯೂನಲ್‌ನ ಕರ್ತವ್ಯ. ಅದೇ ರೀತಿ, ಪರಿಹಾರ ಕೋರಿದ ಅರ್ಜಿದಾರರು ವಿವಾಹಿತ ಗಂಡು ಅಥವಾ ಹೆಣ್ಣು ಮಕ್ಕಳೇ ಎಂಬುದನ್ನು ಗಣನೆಗೆ ತೆಗೆದುಕೊಂಡು ತಾರತಮ್ಯ ಮಾಡಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.


ಈ ಹಿನ್ನೆಲೆಯಲ್ಲಿ, ಸಂತ್ರಸ್ತರ ವಿವಾಹಿತ ಹೆಣ್ಮಕ್ಕಳು ವಿಮಾ ಪರಿಹಾರದ ಕ್ಲೇಮಿಗೆ ಅರ್ಹರಲ್ಲ ಎಂಬ ವಿಮಾ ಕಂಪೆನಿಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿತು.


ಘಟನೆ ವಿವರ

ಕಳೆದ 12-04-2012ರಂದು ಮಹಿಳೆಯೊಬ್ಬರು ಹುಬ್ಬಳ್ಳಿಯಲ್ಲಿ ಟೆಂಪೋ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಆ ವಾಹನ ಯಮನೂರು ಎಂಬಲ್ಲಿ ಲಾರಿಗೆ ಡಿಕ್ಕಿಯಾಯಿತು. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಆ ಸಂಬಂದ ಪರಿಹಾರ ಕೋರಿ ಮೃತರ ಪತಿ ಹಾಗೂ ವಿವಾಹಿತ ಹೆಣ್ಮಕ್ಕಳು ನ್ಯಾಯಮಂಡಳಿ ಮೊರೆ ಹೋಗಿದ್ದರು. ಅರ್ಜಿದಾರರಿಗೆ ನ್ಯಾಯ ಮಂಡಳಿಯು ರೂ. 5.91 ಲಕ್ಷ ಪರಿಹಾರ ಘೋಷಿಸಿತ್ತು. ಈ ತೀರ್ಪನ್ನು ವಿಮಾ ಕಂಪೆನಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.


ಅಘಪಾತದಲ್ಲಿ ಚಾಲಕನ ನಿರ್ಲಕ್ಷ್ಯ ಇದ್ದು, ಅದನ್ನು ಟ್ರಿಬ್ಯೂನಲ್ ಪರಿಗಣಿಸಿಲ್ಲ. ಮೃತ ಮಹಿಳೆಯ ಪತಿ ನಿವೃತ್ತ ಶಿಕ್ಷಕರಿದ್ದು, ಪಿಂಚಣಿ ಪಡೆಯುತ್ತಿದ್ದರು. ಸಾವನ್ನಪ್ಪಿದ ಮಹಿಳೆಯ ಮದುವೆಯಾದ ಹೆಣ್ಮಕ್ಕಳು ವಿಮಾ ಪರಿಹಾರ ಪಡೆಯಲು ವಿಚಾರಣಾ ನ್ಯಾಯಾಲಯ ಆದೇಶ ನೀಡಿದ್ದು, ಅರ್ಜಿದಾರರು ಸಂತ್ರಸ್ತರನ್ನು ಅವಲಂಬಿಸಿಲ್ಲ. ಹಾಗೂ ಸದ್ರಿ ಆದೇಶ ಕಾನೂನುಬಾಹಿರ ಎಂದು ವಿಮಾ ಕಂಪನಿ ವಾದಿಸಿತ್ತು.


ವಾಹನದ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂಬ ಬಗ್ಗೆ ವಿಮಾ ಕಂಪೆನಿ ಯಾವುದೇ ದಾಖಲೆ ಹಾಜರುಪಡಿಸಿಲ್ಲ. ಹೀಗಾಗಿ, ಘಟನೆಯಲ್ಲಿ ಚಾಲಕನ ತಪ್ಪು ಇದೆಯೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200