-->
ಇಲಾಖಾ ವಿಚಾರಣೆ: ನೋಟೀಸ್ ನೀಡುವ ಹಕ್ಕು ವಿಚಾರಣಾಧಿಕಾರಿಗೆ ಮಾತ್ರ

ಇಲಾಖಾ ವಿಚಾರಣೆ: ನೋಟೀಸ್ ನೀಡುವ ಹಕ್ಕು ವಿಚಾರಣಾಧಿಕಾರಿಗೆ ಮಾತ್ರ

ಇಲಾಖಾ ವಿಚಾರಣೆ: ನೋಟೀಸ್ ನೀಡುವ ಹಕ್ಕು ವಿಚಾರಣಾಧಿಕಾರಿಗೆ ಮಾತ್ರ

ನೌಕರನು ಯಾ ನೌಕರಳು ಆಪಾದಿತನಾಗಿರುವ ಸಂದರ್ಭದಲ್ಲಿ ಆಂತರಿಕ ಸಮಿತಿ ಯಾ ಇಲಾಖಾಧಿಕಾರಿ ನಡೆಸುವ ಇಲಾಖಾ ವಿಚಾರಣೆಗೆ ಅಪಾರ ಮಹತ್ವ ಇದೆ. ನ್ಯಾಯಾಲಯಗಳೂ ಇಲಾಖಾ ವಿಚಾರಣೆಯೇ ನಿರ್ಣಾಯಕ ಎಂಬ ಮಹತ್ವದ ತೀರ್ಪು ನೀಡಿ ಇಲಾಖಾ ವಿಚಾರಣೆಯ ಘನತೆಯನ್ನು ಎತ್ತಿ ತೋರಿಸಿದೆ.ಶಿಸ್ತು ಪ್ರಾಧಿಕಾರದಲ್ಲಿ ಒಂದು ಪ್ರಕರಣ ವಿಚಾರಣೆಗೆ ಮಂಡನೆಯಾಗಿದ್ದರೆ ಇನ್ನೊಂದು ಪಕ್ಷಕಾರರಿಗೆ ಯಾ ಆರೋಪಿತರಿಗೆ ಇಲಾಖಾ ವಿಚಾರಣೆಯ ನೋಟೀಸ್ ಕಡ್ಡಾಯವಾಗಿ ಕಳುಹಿಸುವುದು ಕಾನೂನು ರೀತ್ಯ ನಡೆಯಬೇಕಾದ ಕ್ರಮ.ಈ ನೋಟೀಸ್ ಜಾರಿಗೊಳಿಸುವ ಪ್ರಕ್ರಿಯೆ ಸಕ್ಷಮ ಅಧಿಕಾರಿ ಯಾ ವಿಚಾರಣಾಧಿಕಾಯಿಂದಲೇ ನಡೆಯಬೇಕು.ಇಲ್ಲಿ ಆಪಾದಿತ ಒಂದು ಪಕ್ಷಕಾರನಾಗಿದ್ದರೆ, ದೂರು ನೀಡಿದವರು ಇನ್ನೊಂದು ಪಕ್ಷಕಾರರಾಗಿರುತ್ತಾರೆ. ವಿಚಾರಣಾಧಿಕಾರಿ ನ್ಯಾಯಾಧೀಶರಾಗಿರುತ್ತಾರೆ. ಇಲ್ಲಿ ವಿಚಾರಣಾಧಿಕಾರಿಯೇ ನೋಟೀಸ್ ಜಾರಿಗೊಳಿಸಬೇಕು ಎಂಬುದನ್ನು ನೀಲಕಂಠ ಸಿದ್ರಾಮಪ್ಪ Vs ಕಾಶೀನಾಥ್ ಸೋಮಣ್ಣ ನಿಂಗಸೆಟ್ಟಿ ಪ್ರಕರಣ(AIR 1962 SC 666)ದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇದರಲ್ಲಿ ಮಾನ್ಯ ಸುಪ್ರೀಂ ಕೋರ್ಟ್, ನೋಟೀಸ್ ಮತ್ತು ಅದರ ಜಾರಿಯ ಮಹತ್ವವನ್ನು ವಿವರಿಸಿದೆ.

Nilkantha Shidramappa ... vs Kashinath Somanna Ningashetti ... on 28 April, 1961

Equivalent citations: 1962 AIR 666, 1962 SCR Supl. (2) 551Ads on article

Advertise in articles 1

advertising articles 2

Advertise under the article