ರಾಜ್ಯದ ನ್ಯಾಯಾಲಯಗಳಿಗೆ ದಸರಾ ರಜೆ: ಹೈಕೋರ್ಟ್ ಪ್ರಕಟಣೆ
Wednesday, September 28, 2022
ರಾಜ್ಯದ ನ್ಯಾಯಾಲಯಗಳಿಗೆ ದಸರಾ ರಜೆ: ಹೈಕೋರ್ಟ್ ಪ್ರಕಟಣೆ
ರಾಜ್ಯದ ಹೈಕೋರ್ಟ್ ಪೀಠ ಮತ್ತು ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ಒಂದು ವಾರದ ದಸರಾ ರಜೆ (Dasara Vecation) ಘೋಷಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಅಕ್ಟೋಬರ್ 3-10-2022ರಿಂದ 07-10-2022ರ ವರೆಗೆ ದಸರಾ ಪ್ರಯುಕ್ತ ರಜೆ ಘೋಷಿಸಲಾಗಿದ್ದು, ಅಕ್ಟೋಬರ್ 10ರಿಂದ ನ್ಯಾಯಾಲಯಗಳು ಎಂದಿನಂತೆ ಕಾರ್ಯಾರಂಭಿಸಲಿವೆ.
ಈ ರಜೆಯ ಸಂದರ್ಭದಲ್ಲಿ ನಿಗದಿಪಡಿಸಲಾದ ಎಲ್ಲ ಪ್ರಕರಣಗಳನ್ನು ಹೈಬ್ರೀಡ್ ಮಾದರಿಯಲ್ಲಿ ವಿಚಾರಣೆ ನಡೆಸಲು ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ ಮುಂದಾಗಿದೆ.
ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಕೇವಲ ವೀಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಲಿವೆ.