ಸರ್ಕಾರಿ ಪ್ರಾಯೋಜಿತ ಕೇಸ್‌ಗೆ ಬ್ರೇಕ್ ಹಾಕಿದರೆ ನ್ಯಾಯಾಂಗದ ಅರ್ಧ ತಲೆನೋವು ಕಮ್ಮಿ: ಎನ್.ವಿ. ರಮಣ
ಸರ್ಕಾರಿ ಪ್ರಾಯೋಜಿತ ಕೇಸ್‌ಗೆ ಬ್ರೇಕ್ ಹಾಕಿದರೆ ನ್ಯಾಯಾಂಗದ ಅರ್ಧ ತಲೆನೋವು ಕಮ್ಮಿ: ಎನ್.ವಿ. ರಮಣ
File Photo: Jts N.V. Ramana
'ಸರ್ಕಾರಿ ಪ್ರಾಯೋಜಿತ ಮೊಕದ್ದಮೆಗಳಿಗೆ ಸರ್ಕಾರವು ಕಡಿವಾಣ ಹಾಕಿದರೆ ನ್ಯಾಯಾಂಗದ ಅರ್ಧ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ‘ISB ಲೀಡರ್‌ಷಿಪ್ ಸಮ್ಮೇಳನ–2022’ರಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಸುಮಾರು 75 ವರ್ಷ ಕಳೆದರೂ ಜುಡೀಷಿಯಲ್ ವ್ಯವಸ್ಥೆಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ರಾಷ್ಟ್ರಮಟ್ಟದ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ’ ಎಂದು ರಮಣ ವಿಷಾದ ವ್ಯಕ್ತಪಡಿಸಿದರು.
'ನ್ಯಾಯಾಂಗದ ಪಾಲಿಗೆ ಸರ್ಕಾರವೇ ದೊಡ್ಡ ದಾವೆಗಾರ. ಅಂತರ ವಿಭಾಗೀಯ ವ್ಯಾಜ್ಯಗಳು, ಸೇವಾ ವಿಚಾರಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದ್ದಾರೆ.
ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತಾಗಬೇಕು: ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
‘ಅಂಗವಿಕಲರಿಗೆ ನ್ಯಾಯಾಂಗ ಸೇವೆಯು ಸುಲಭವಾಗಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ನ ಇ–ಸಮಿತಿಯು ಡಿಜಿಟಲ್ ಮೂಲಸೌಕರ್ಯ ರೂಪಿಸಲು ಮುಂದಾಗಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದ್ದಾರೆ.
‘ಅಗತ್ಯ ಕಾನೂನು ಇದ್ದರೂ ಕೂಡ ಕೆಲ ಸರ್ಕಾರಿ–ಖಾಸಗಿ ಕಚೇರಿಗಳು, ಸಾರಿಗೆ ಸೇವೆ, ಉದ್ಯಾನಗಳು ಹಾಗೂ ಇತರೆ ಸ್ಥಳಗಳು ಅಂಗವಿಕಲರಿಗೆ ಮುಕ್ತವಾಗಿಲ್ಲ’ ಎಂದು ಚಂದ್ರಚೂಡ್ ವಿಷಾದ ವ್ಯಕ್ತಪಡಿಸಿದರು.