-->
NI Act Sec 138- ನಿಮ್ಮ ಚೆಕ್‌ಗೆ ನೀವೇ ಹೊಣೆ: ಸಹಿದಾರರ ಹೊಣೆಗಾರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

NI Act Sec 138- ನಿಮ್ಮ ಚೆಕ್‌ಗೆ ನೀವೇ ಹೊಣೆ: ಸಹಿದಾರರ ಹೊಣೆಗಾರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನಿಮ್ಮ ಚೆಕ್‌ಗೆ ನೀವೇ ಹೊಣೆ: ಸಹಿದಾರರ ಹೊಣೆಗಾರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಬ್ಯಾಂಕ್​ ಚೆಕ್​​ನಲ್ಲಿ ಇತರ ವಿವರಗಳನ್ನು ಯಾರೇ ಭರ್ತಿ ಮಾಡಿದರೂ ಚೆಕ್‌ನಲ್ಲಿ ನಮೂದಿಸುವ ಹಣಕ್ಕೆ ಚೆಕ್‌ನ ಡ್ರಾಯರ್ ಬಾಧ್ಯಸ್ಥರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಚೆಕ್ ಬೌನ್ಸ್ ಪ್ರಕರಣದಲ್ಲಿ ಮೇಲ್ಮನವಿಯನ್ನು ಅನುಮತಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.



ಪ್ರಕರಣ: ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ Vs ಪ್ರಬೋಧ್ ಕುಮಾರ್ ತೇವರ್

ಸುಪ್ರೀಂ ಕೋರ್ಟ್. CrA 1260/2022 Dated 16-08-2022



ಸದ್ರಿ ಚೆಕ್ ​ಬೌನ್ಸ್ ಪ್ರಕರಣದಲ್ಲಿ ಚೆಕ್‌ ನೀಡಿದವರು ತಮ್ಮ ಬ್ಯಾಂಕ್ ಖಾತೆಯ ಚೆಕ್​ ಹಾಳೆಯನಲ್ಲಿ ಯಾವುದೇ ಇತರ ವಿವರಗಳನ್ನು ಭರ್ತಿ ಮಾಡಿರಲಿಲ್ಲ. ಹಾಗಾಗಿ ಚೆಕ್ ಅಮಾನ್ಯಗೊಂಡಿರುವುದರಲ್ಲಿ ತಮ್ಮ ತಪ್ಪೇನಿಲ್ಲ ಎಂದು ವಾದ ಮಂಡಿಸಿದ್ದರು.



Negotiable Instruments Act 1881 ಅಡಿ ತಕರಾರಿಗೆ ಒಳಪಟ್ಟ ಚೆಕ್ ಯಾರ ಹೆಸರಿನಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಖಾಲಿ ಸಹಿ ಹಾಕಿರುವ ಚೆಕ್ ಹಾಳೆಯನ್ನು ಕೊಟ್ಟಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಅದಕ್ಕೆ ಹೊರತಾಗಿ, ಚೆಕ್ ಹಾಳೆಯ ವಿವರಗಳನ್ನು ಯಾರು ತುಂಬಿದ್ದಾರೆ ​ಎಂಬುದು ಮುಖ್ಯವಲ್ಲ. ನಿಮ್ಮ ಚೆಕ್ಕಿಗೆ ನೀವೇ ಜವಾಬ್ದಾರರು ಎಂದು ನಿಮ್ಮ ಚೆಕ್​ಗೆ ನೀವೇ ಹೊಣೆ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ತೀರ್ಪಿನ ಪ್ರತಿಗಾಗಿ

ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ Vs ಪ್ರಬೋಧ್ ಕುಮಾರ್ ತೇವರ್


Ads on article

Advertise in articles 1

advertising articles 2

Advertise under the article