-->
ಒಂದೇ ಅಪರಾಧ ಪ್ರಕರಣದಲ್ಲಿ ಮೂರು ಪ್ರತ್ಯೇಕ ಚಾರ್ಜ್‌ಶೀಟ್‌ಗೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್‌

ಒಂದೇ ಅಪರಾಧ ಪ್ರಕರಣದಲ್ಲಿ ಮೂರು ಪ್ರತ್ಯೇಕ ಚಾರ್ಜ್‌ಶೀಟ್‌ಗೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್‌

ಒಂದೇ ಅಪರಾಧ ಪ್ರಕರಣದಲ್ಲಿ ಮೂರು ಪ್ರತ್ಯೇಕ ಚಾರ್ಜ್‌ಶೀಟ್‌ಗೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್‌

ಒಂದು ಅಪರಾಧ ಪ್ರಕರಣಲ್ಲೆ CrPC ಕಲಂ 173ರ ಅಡಿಯಲ್ಲಿ ಮೂರು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ.ಒಂದು ಘಟನೆಗೆ ಸಂಬಂಧಿಸಿದ ಕೆಲವು ಅಪರಾಧಗಳಿಗೆ ಕೆಲವು ವ್ಯಕ್ತಿಗಳು ಕಾರಣರಲ್ಲ ಎಂದು ಹೇಳಿ, ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು CrPC ಕಲಂ 173ರಲ್ಲಿ ಅವಕಾಶವಿಲ್ಲ. ಯಾವ ಅಪರಾಧಕ್ಕೆ ಯಾರು ಕಾರಣ ಹಾಗೂ ಅಂತಿಮ ವರದಿಯ 17ನೇ ಕಲಮಿನಲ್ಲಿ ಯಾವೆಲ್ಲಾ ಅಪರಾಧಗಳನ್ನು ಉಲ್ಲೇಖಿಸಬೇಕು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರ. ಆದರೆ, ನಿರ್ದಿಷ್ಟ ಆರೋಪಿಗಳು ಯಾವೆಲ್ಲ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ತನಿಖಾಧಿಕಾರಿ ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ನ್ಯಾ. ಶ್ರೀಶಾನಂದ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.ಗದಗದ ಘಂಟಿ ಚೋರ್ ಸಮುದಾಯದವರ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿ ಸಲ್ಲಿಸಿರುವ ಅಂತಿಮ ವರದಿಯು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಹೇಳಿದೆ.ಈ ಪ್ರಕರಣದಲ್ಲಿ ಗದಗ ಜಿಲ್ಲೆ ಬಾಲೆ ಹೊಸೂರಿನ 'ದಿಂಗಾಲೇಶ್ವರ ಸ್ವಾಮೀಜಿ' ಭಾಗಿಯಾಗಿದ್ದಾರೆ ಎಂಬ ಆರೋಪ ಇತ್ತು. ಸದ್ರಿ ಪ್ರಕರಣದ ಆರೋಪಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿಯವರು ಒಂದು ಅಪರಾಧ ಪ್ರಕರಣಕ್ಕೆ ಮೂರು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿತು."IPC ಸೆಕ್ಷನ್ 149ರ ಅಡಿ ಪ್ರಕರಣ ದಾಖಲಿಸಿರುವ ಅಭಿಯೋಜನೆಯಲ್ಲಿ ಎಲ್ಲ ಆರೋಪಿಗಳನ್ನು ಒಟ್ಟುಗೂಡಿಸಿ, ಸಮಗ್ರ ಅಂತಿಮ ವರದಿ ಸಲ್ಲಿಸಬಹುದಿತ್ತು. ಅದರ ಬದಲು, ತನಿಖಾಧಿಕಾರಿ 3 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ದೂರು ಇಲ್ಲದಿದ್ದರೂ, ಆ ಪ್ರಕರಣವನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಬಹುದು. ಏಕೆಂದರೆ, ಇಡೀ ಪ್ರಕರಣ ಒಂದೇ ಘಟನೆಯ ಪರಿಣಾಮವಾಗಿರುತ್ದೆ. ಹೀಗಾಗಿ, ಪ್ರತ್ಯೇಕ ಫೈನಲ್ ರಿಪೋರ್ಟ್ ಅಗತ್ಯವಿರಲಿಲ್ಲ" ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿತು.

Ads on article

Advertise in articles 1

advertising articles 2

Advertise under the article