-->
'ದೂರ ಶಿಕ್ಷಣ'ದ ಪದವಿ ಕಾರಣಕ್ಕೆ ನೌಕರನ ವಜಾ: ಮತ್ತೆ ಉದ್ಯೋಗ ನೀಡಲು ಹೈಕೋರ್ಟ್ ಆದೇಶ

'ದೂರ ಶಿಕ್ಷಣ'ದ ಪದವಿ ಕಾರಣಕ್ಕೆ ನೌಕರನ ವಜಾ: ಮತ್ತೆ ಉದ್ಯೋಗ ನೀಡಲು ಹೈಕೋರ್ಟ್ ಆದೇಶ

'ದೂರ ಶಿಕ್ಷಣ'ದ ಪದವಿ ಕಾರಣಕ್ಕೆ ನೌಕರನ ವಜಾ: ಮತ್ತೆ ಉದ್ಯೋಗ ನೀಡಲು ಹೈಕೋರ್ಟ್ ಆದೇಶ





ದೂರ ಶಿಕ್ಷಣದಿಂದ ಪದವಿ ಪಡೆದಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿದ ನೌಕರನನ್ನು ಮತ್ತೆ ನೇಮಕ ಮಾಡಿಕೊಳ್ಳುವಂತೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.


ಸಂತ್ರಸ್ತ ದೇವರಾಜು ಅವರು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್‌ ನೌಕರರಾಗಿದ್ದರು. ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU)ದ ದೂರ ಶಿಕ್ಷಣದ ಬಿ.ಟೆಕ್‌ ಪದವಿ ಪಡೆದುಕೊಂಡಿದ್ದರು.


ಈ ಪದವಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮಾನ್ಯತೆ ನೀಡಿಲ್ಲ. ಈ ಕಾರಣಕ್ಕೆ ದೇವರಾಜು ಅವನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಇದನ್ನು ಪ್ರಶ್ನಿಸಿ ದೇವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು. 



ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ನೇತೃತ್ವದ ನ್ಯಾಯಪೀಠ, ಅರ್ಜಿದಾರರಾದ ದೇವರಾಜು ಅವರ ಸಿವಿಲ್‌ ಎಂಜಿನಿಯರಿಂಗ್ ಡಿಪ್ಲೊಮ ಪದವಿಯನ್ನು ಮಾನ್ಯ ಮಾಡಬೇಕು ಮತ್ತು ಅವರನ್ನು 2 ತಿಂಗಳೊಳಗೆ ಸಹಾಯಕ ಎಂಜಿನಿಯರ್‌ ಹುದ್ದೆಗೆ ಮರು ನೇಮಕ ಮಾಡಬೇಕು ಎಂದು ಆದೇಶಿಸಿದೆ. 



ಅಷ್ಟೇ ಅಲ್ಲದೆ, ಈ ಮರು ನೇಮಕಾತಿಯು ಮೂಲ ನೇಮಕಾತಿಯಿಂದ ಪೂರ್ವಾನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆದೇಶಿಸಿದೆ.



ಪ್ರಕರಣದ ವಿವರ

ಹಾಸನ ಜಿಲ್ಲೆಯ ಹೇಮಾವತಿ ನಗರದ ನಿವಾಸಿ ದೇವರಾಜ ಕೆ.ಆರ್. 2016ರ ಜುಲೈ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಕರ್ನಾಟಕ ನಗರ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ನೇಮಕವಾಗಿದ್ದರು. ಮುಕ್ತ ವಿವಿಯಿಂದ ಪಡೆದ ಬಿ.ಟೆಕ್‌ ಪದವಿ ಆಧಾರದಲ್ಲಿ ಐದು ವರ್ಷ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್‌ ಸೇವೆ ಸಲ್ಲಿಸಿದ್ದರು.



2019ರಲ್ಲಿ KSOU ನೀಡಿದ ಬಿ.ಟೆಕ್‌ ಪದವಿಗೆ ತಾಂತ್ರಿಕ ಶಿಕ್ಷಣ ಮಂಡಳಿ ಮಾನ್ಯತೆ ನೀಡಲು ನಿರಾಕರಿಸಿತ್ತು. ಈ ಕಾರಣದಿಂದ 2019ರ ಸೆಪ್ಟೆಂಬರ್ 6ರಂದು ದೇವರಾಜ್‌ಗೆ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿತ್ತು.



ತನಗೆ ನೀಡಲಾದ KSOU ಪದವಿಗೆ ಮಾನ್ಯತೆ ಇದೆ. ನೇಮಕಾತಿಯಲ್ಲಿ ತಮ್ಮ ಯಾವುದೇ ಲೋಪವಿಲ್ಲ ಎಂದು ದೇವರಾಜ್ ನೋಟಿಸಿಗೆ ಉತ್ತರ ನೀಡಿದ್ದರು. ಈ ವಿವರಣೆ ಒಪ್ಪದ ಮಂಡಳಿ, 2021ರ ಜುಲೈ 13ರಂದು ನೇಮಕಾತಿ ಆದೇಶ ರದ್ದುಪಡಿಸಿ, ಸೇವೆಯಿಂದ ವಜಾಗೊಳಿಸಿತ್ತು. 


ಈ ಆದೇಶವನ್ನು ಪ್ರಶ್ನಿಸಿ ದೇವರಾಜ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.


ಪ್ರಕರಣ: ದೇವರಾಜ ಕೆ.ಆರ್. Vs ಕರ್ನಾಟಕ ರಾಜ್ಯ ಮತ್ತಿತರರು

ಕರ್ನಾಟಕ ಹೈಕೋರ್ಟ್, WP 13008/2021 Dated 01-04-2022



ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೇವರಾಜ ಕೆ.ಆರ್. Vs ಕರ್ನಾಟಕ ರಾಜ್ಯ ಮತ್ತಿತರರು


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200