-->
NI Act Sec 138: Legally enforceable debt ಅಂದರೇನು..? ಮಹತ್ವದ ತೀರ್ಪಿನಲ್ಲಿ ಸಮಗ್ರ ವಿಮರ್ಶೆ ಮಾಡಿದ ಸುಪ್ರೀಂ ಕೋರ್ಟ್‌

NI Act Sec 138: Legally enforceable debt ಅಂದರೇನು..? ಮಹತ್ವದ ತೀರ್ಪಿನಲ್ಲಿ ಸಮಗ್ರ ವಿಮರ್ಶೆ ಮಾಡಿದ ಸುಪ್ರೀಂ ಕೋರ್ಟ್‌

NI Act Sec 138: Legally enforceable debt ಅಂದರೇನು..? ಮಹತ್ವದ ತೀರ್ಪಿನಲ್ಲಿ ಸಮಗ್ರ ವಿಮರ್ಶೆ ಮಾಡಿದ ಸುಪ್ರೀಂ ಕೋರ್ಟ್‌





ಚೆಕ್ ನೀಡಿದ ಬಳಿಕ, ಆರೋಪಿ ಮಾಡಿರುವ ಭಾಗಶಃ ಪಾವತಿಯನ್ನು ಕಡೆಗಣಿಸಿ ಬಾಧ್ಯತೆ ಇರುವ ಪೂರ್ಣ ಮೊತ್ತದ ಚೆಕ್ ಅಮಾನ್ಯ ಪ್ರಕರಣ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್‌ ಸೆಕ್ಷನ್ 138 ಅಡಿಯಲ್ಲಿ ಅಪರಾಧವಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ನ್ಯಾ. ಡಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೊಹ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ದಶರಥ್ ಭಾಯ್ ತ್ರಿಕಂಭಾಯ್‌ ಪಟೇಲ್ Vs ಹಿತೇಶ್ ಮಹೇಂದ್ರಭಾಯ್ ಪಟೇಲ್

ಸುಪ್ರೀಂ ಕೋರ್ಟ್, CrA 1497/2022 Dated 11-10--2022



ಚೆಕ್‌ನಲ್ಲಿ ತೋರಿಸಿರುವ ಮೊತ್ತವು ನೆಗೋಷಿಯೆಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ಸೆಕ್ಷನ್ 138 ರ ಅರ್ಥದಲ್ಲಿ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲವಾಗುವುದಿಲ್ಲ (Legally enforceable debt) ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.



ಒಂದು ವೇಳೆ, ಆರೋಪಿತರು ಮಾಡಿರುವ ಭಾಗಶಃ ಪಾವತಿಯನ್ನು ಮತ್ತು ಹೇಳಲಾದ ಭಾಗವನ್ನು ಅನುಮೋದಿಸದೆ ಸಲ್ಲಿಸಿದರೆ. ಕಾಯಿದೆಯ ಸೆಕ್ಷನ್ 56 ರ ಅಡಿಯಲ್ಲಿ ಚೆಕ್‌ನಲ್ಲಿ ಪಾವತಿಯನ್ನು ಅನುಮೋದಿಸಬೇಕು ಎಂಬುದನ್ನು ನ್ಯಾಯಪೀಠ ಸ್ಪಷ್ಟವಾಗಿ ಹೇಳಿತು.



ಸದ್ರಿ ಪ್ರಕರಣದಲ್ಲಿ 30-08-2016ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ಗುಜರಾತ್ ಹೈಕೋರ್ಟ್ 12-01-2022ರಂದು ಎತ್ತಿ ಹಿಡಿದಿತ್ತು. ಮತ್ತು ಮೇಲ್ಮನವಿದಾರರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯ ಮೊದಲನೇ ಪ್ರತಿವಾದಿಯನ್ನು ಆರೋಪ ಮುಕ್ತಗೊಳಿಸಿದ್ದರೆ, ಗುಜರಾತ್ ಹೈಕೋರ್ಟ್ ಕೂಡ ಅದನ್ನೇ ಪ್ರತಿಪಾದಿಸಿತ್ತು.



ಚೆಕ್ ನೀಡಿದ ಬಳಿಕ, ಚೆಕ್ ಮೊತ್ತದ ಭಾಗಶಃ ಹಣವನ್ನು ಚೆಕ್ ಬರೆದವರು ನೀಡಿದವರಿಗೆ ಪಾವತಿ ಮಾಡಿದರೆ, ಆಗ ಚೆಕ್ ಎನ್‌ಕ್ಯಾಶ್ ಮಾಡುವ ಸಂದರ್ಭದಲ್ಲಿ ಚೆಕ್ ಮೊತ್ತದ ಪೂರ್ತಿ ಹಣ ನೀಡಬೇಕಾದ ಬಾಧ್ಯತೆ ಹೊಂದಿರುವುದಿಲ್ಲ.



ಚೆಕ್‌ನಲ್ಲಿ ನಮೂದಿಸಿದ ಹಣಕ್ಕಿಂತ ಕಡಿಮೆ ಮೊತ್ತದ ಹಣಕ್ಕೆ ಬಾಧ್ಯತೆ ಇರುವಾಗ ಪೂರ್ತಿ ಮೊತ್ತವನ್ನು ಲೀಗಲ್ ನೋಟೀಸ್‌ನಲ್ಲಿ ಕೇಳುವುದು ಸರಿಯಲ್ಲ. ಇದು ಎನ್‌ಐ ಆಕ್ಟ್‌ನ ಸೆಕ್ಷನ್ 56ರ ಉಲ್ಲಂಘನೆಯಾಗುತ್ತದೆ. ಚೆಕ್ ಅಮಾನ್ಯದ ಸಂದರ್ಭದಲ್ಲಿ ಚೆಕ್‌ನಲ್ಲಿ ಬರೆಯಲಾದ ದಿನಾಂಕದ ವೇಳೆ ಎಷ್ಟು ಮೊತ್ತದ ಬಾಧ್ಯತೆ ಇದೆಯೋ ಅಷ್ಟೇ ಮೊತ್ತದ ಬೇಡಿಕೆಯನ್ನು "ಲೀಗಲ್ ನೋಟೀಸ್‌"ನಲ್ಲಿ ಮಾಡಬೇಕು ಮತ್ತು ಭಾಗಶಃ ಪಾವತಿಯನ್ನು ನೋಟೀಸ್‌ನಲ್ಲಿ ದೃಢಪಡಿಸಬೇಕು ಎಂದು ಮಾನ್ಯ ನ್ಯಾ. ಡಾ. ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ಸ್ಪಷ್ಟವಾಗಿ ಹೇಳಿತು.



ಪೋಸ್ಟ್ ಡೇಟೆಡ್ ಚೆಕ್‌ನಲ್ಲಿ ಬಾಧ್ಯತೆ ಇರುವ ಹಣ(Legally enforceable debt)ದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ Indus Airway (Supra)ದಿಂದ ಹಿಡಿದು Sunil Todi(Supra) ವರೆಗಿನ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಚೆಕ್ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಣದ ಬಾಧ್ಯತೆ ಇರಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. Sampelly Satyanarayana Rao (Supra) ಪ್ರಕರಣದ ಬಳಿಕ, ಚೆಕ್‌ನಲ್ಲಿ ಬರೆದ ದಿನಾಂಕದಂದು ಕಡ್ಡಾಯವಾಗಿ ಹಣದ ಬಾಧ್ಯತೆ ಇರಬೇಕು ಎಂಬುದಾಗಿ ಬದಲಾಯಿತು. ಈ ದಿನವನ್ನು Date of Maturity ಎಂದು ಕರೆಯಬಹುದು.




Post Dated ಚೆಕ್‌ನಲ್ಲಿ Date of Maturityಯ ದಿನದಂದು ಹಣದ ಬಾಧ್ಯತೆ ಎಷ್ಟಿದೆಯೋ ಅದು Legally enforceable debt ಆಗಿರುತ್ತದೆ. ಮತ್ತು ಅಷ್ಟು ಮೊತ್ತಕ್ಕೆ ಮಾತ್ರ ಸೆಕ್ಷನ್ 138 ಅನ್ವಯವಾಗುತ್ತದೆ.



ಸದ್ರಿ ಪ್ರಕರಣದಲ್ಲಿ ರೂ. 20 ಲಕ್ಷಕ್ಕೆ ಡಿಮ್ಯಾಂಡ್ ನೋಟಿಸ್ ನೀಡಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ವಜಾಗೊಳಿಸಿದೆ ಮತ್ತು ಎನ್‌ಐ ಆಕ್ಟ್ ಸೆಕ್ಷನ್ 138ರ ಅಡಿಯಲ್ಲಿ ಆರೋಪಿಗಳ ಅಪರಾಧ ಸಾಬೀತಾಗಿಲ್ಲ ಎಂದು ತೀರ್ಪು ನೀಡಿತು.



ತೀರ್ಪಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಕರಣ: ದಶರಥ್ ಭಾಯ್ ತ್ರಿಕಂಭಾಯ್‌ ಪಟೇಲ್ Vs ಹಿತೇಶ್ ಮಹೇಂದ್ರಭಾಯ್ ಪಟೇಲ್


Ads on article

Advertise in articles 1

advertising articles 2

Advertise under the article