-->
ಇನ್ಮುಂದೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಸುಲಲಿತ !

ಇನ್ಮುಂದೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಸುಲಲಿತ !

ಇನ್ಮುಂದೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಸುಲಲಿತ !





ಯಾರಿಗಾದರೂ ಪಾಸ್‌ಪೋರ್ಟ್ ಬೇಕಿದ್ದರೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಅನಿವಾರ್ಯ. 


ಹೆಚ್ಚಿನ ಸಂದರ್ಭದಲ್ಲಿ ಸಂಭಾವಿತ ಕುಟುಂಬದವರು ಪೊಲೀಸ್ ಮೆಟ್ಟಿಲೇರುವುದೇ ಈ ಕಾರಣಕ್ಕೆ... ಇಂತಹವರನ್ನು ಸತಾಯಿಸುವುದು, ವಿಳಂಬ ಮಾಡುವುದು, ಹಣಕ್ಕಾಗಿ ಹಲ್ಲು ಗಿಂಜುವುದು ಪೊಲೀಸರಿಗೆ ಮಾಮೂಲು ಎಂಬುದು ಎಲ್ಲ ಕಡೆ ಕೇಳಿ ಬರುವ ದೂರು.



ಆದರೆ, ಇದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ. ಪಾಸ್‌ಪೋರ್ಟ್‌ಗೆ ಅಗತ್ಯವಾಗಿ ಬೇಕಾಗಿರುವ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಇನ್ಮುಂದೆ ಸುಲಭವಾಗಲಿದೆ.



ಅಂಚೆ ಕಚೇರಿಗಳ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದರೆ ಸಾಕು, ನಿರ್ದಿಷ್ಟ ದಿನದೊಳಗೆ ನಿಮಗೆ ಪಾಸ್‌ಪೋರ್ಟ್ ಸಿಗೋದು ಗ್ಯಾರಂಟಿ.



ಕೆಲವೊಂದು ಮಹತ್ವದ ಅಂಶಗಳು:

ಪ್ರಸ್ತುತ ಪಾಸ್‌ಪೋರ್ಟ್ ಅರ್ಜಿದಾರರ ವಾಸಸ್ಥಳದ ಆಧಾರದಲ್ಲಿ ಆ ವ್ಯಾಪ್ತಿಯ ಪೊಲೀಸರು ಕ್ಲಿಯರೆನ್ಸ್‌ ಸರ್ಟಿಫಿಕೇಟ್ ನೀಡುತ್ತಾರೆ.


ಪಾಸ್‌ಪೋರ್ಟ್‌ಗೆ ಪಿಸಿಸಿ ಕಡ್ಡಾಯ. ಅರ್ಜಿದಾರರ ಕ್ರಿಮಿನಲ್ ದಾಖಲೆಗಳ ಪರಿಶೀಲನೆ ಇದರ ಹಿಂದಿನ ಉದ್ದೇಶ.


ಉದ್ಯೋಗಕ್ಕೆ ಅರ್ಜಿ, ದೀರ್ಘಕಾಲದ ವೀಸಾ, ವಾಸಸ್ಥಳದ ಸ್ಥಿತಿಗತಿ ಅಥವಾ ವಿದೇಶಕ್ಕೆ ವಲಸೆ ಸಂದರ್ಭದಲ್ಲೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC) ಅತ್ಯಗತ್ಯ.


ಇದಕ್ಕೂ ಮೊದಲು, ಸರ್ಕಾರದ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಅಥವಾ ವಿದೇಶದಲ್ಲಿ ಇರುವವರಾದರೆ ಆಯಾ ದೇಶದ ರಾಯಭಾರ ಕಚೇರಿ ಅಥವಾ ಹೈಕಮಿಷನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು.


ಈಗ ಈ ವ್ಯವಸ್ಥೆಯನ್ನು ಬದಲಾಯಿಸಲಾಗಿದ್ದು, ಅಂಚೆ ಕಚೇರಿಗಳ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಪಿಸಿಸಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.


ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(PCC)ಗೆ ಭಾರೀ ಬೇಡಿಕೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ರೀತಿಯ ವ್ಯವಸ್ಥೆ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

Ads on article

Advertise in articles 1

advertising articles 2

Advertise under the article