-->
ಸರ್ಕಾರಿ ಕಚೇರಿ, ಶಾಲೆ-ಕಾಲೇಜಿನಲ್ಲಿ ಈ ರಾಷ್ಟ್ರ ನಾಯಕರ ಫೋಟೋ ಕಡ್ಡಾಯವಾಗಿ ಇಡಬೇಕು

ಸರ್ಕಾರಿ ಕಚೇರಿ, ಶಾಲೆ-ಕಾಲೇಜಿನಲ್ಲಿ ಈ ರಾಷ್ಟ್ರ ನಾಯಕರ ಫೋಟೋ ಕಡ್ಡಾಯವಾಗಿ ಇಡಬೇಕು

ಸರ್ಕಾರಿ ಕಚೇರಿ, ಶಾಲೆ-ಕಾಲೇಜಿನಲ್ಲಿ ಈ ರಾಷ್ಟ್ರ ನಾಯಕರ ಫೋಟೋ ಕಡ್ಡಾಯವಾಗಿ ಇಡಬೇಕು




ಸರ್ಕಾರದ ನಿಯಮಾವಳಿಗಳ ಪ್ರಕಾರ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ನಿರ್ದಿಷ್ಟ ನಾಯಕರ ಭಾವಚಿತ್ರಗಳನ್ನು ಕಡ್ಡಾಯವಾಗಿ ಹಾಕಬೇಕು.



ಅವು ಯಾವುದೆಂದರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹಾಲಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಫೋಟೋಗಳನ್ನು ಹಾಕಲು ಮಾತ್ರ ಅವಕಾಶ ಇರುತ್ತದೆ.



ಅದನ್ನು ಹೊರತುಪಡಿಸಿ ಬೇರಾವ ನಾಯಕರ ಭಾವಚಿತ್ರವನ್ನೂ ಸರ್ಕಾರದ ನಿಯಮಾವಳಿ ಪ್ರಕಾರ ಹಾಕುವ ಹಾಗಿಲ್ಲ.



ಅದೇ ರೀತಿ, 04-02-2022ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ ಸುತ್ತೋಲೆ ಪ್ರಕಾರ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ದಿನ, ಆಗಸ್ಟ್ 15ರಂದು ನಡೆಯುವ ಸ್ವಾಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ಮತ್ತು ನವೆಂಬರ್ 26ರಂದು ನಡೆಯುವ ಸಂವಿಧಾನ ದಿನದಂದು ನಡೆಯುವ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲ ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ಆದೇಶಿಸಲಾಗಿದೆ.



ಅದೇ ರೀತಿ, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಎಲ್ಲ ಸಂಸ್ಥೆಗಳು, ಕಚೇರಿಗಳು, ನಿಗಮ ಮಂಡಳಿಗಳು ಮತ್ತು ಕಚೇರಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಳವಡಿಸುವುದು ಕಡ್ಡಾಯವಾಗಿರುತ್ತದೆ.




Ads on article

Advertise in articles 1

advertising articles 2

Advertise under the article