-->
Rights of Accused on Arrest, Pre Arrest : ಬಂಧನ ಪೂರ್ವ ಮತ್ತು ಬಂಧನದ ವೇಳೆ ಆರೋಪಿತನ ಅಧಿಕಾರವೇನು..?: ವಿಸ್ತೃತ ಮಾಹಿತಿ ಇಲ್ಲಿದೆ....

Rights of Accused on Arrest, Pre Arrest : ಬಂಧನ ಪೂರ್ವ ಮತ್ತು ಬಂಧನದ ವೇಳೆ ಆರೋಪಿತನ ಅಧಿಕಾರವೇನು..?: ವಿಸ್ತೃತ ಮಾಹಿತಿ ಇಲ್ಲಿದೆ....

ಬಂಧನ ಪೂರ್ವ ಮತ್ತು ಬಂಧನದ ವೇಳೆ ಆರೋಪಿತನ ಅಧಿಕಾರವೇನು..?: ವಿಸ್ತೃತ ಮಾಹಿತಿ ಇಲ್ಲಿದೆ....


ಕೃಪೆ: ವಿಪಿಕೆ ಲಾ ಎನ್‌ಜಿಓ, ಇಂಡಿಯಾ (ರಿ)


ಬಂಧನದ ಸಮಯದಲ್ಲಿ ಮತ್ತು ಬಂಧನ ಆಗುವ ಮೊದಲು ಆರೋಪಿತನ ಹಕ್ಕುಗಳು ಏನು...? ಯಾವ ಕಾರಣಕ್ಕೆ ಆತನನ್ನು ಬಂಧಿಸಬಹುದು...? ಬಂಧನದ ಸಂದರ್ಭದಲ್ಲಿ ಆತನಿಗೆ ವಿಚಾರಣಾಧಿಕಾರಿ ಒದಗಿಸಬೇಕಾದ ಸೌಲಭ್ಯಗಳು ಮತ್ತು ನಡೆಸಬೇಕಾದ ಪ್ರಕ್ರಿಯೆಗಳ ಬಗ್ಗೆ ವಿಪಿಕೆ ಲಾ ಎನ್‌ಜಿಒ, ಇಂಡಿಯಾ ಸಂಸ್ಥೆಯ ಪುರುಷೋತ್ತಮ್ ಜಿ. ಅವರು ಉಪನ್ಯಾಸ ನೀಡಿರುತ್ತಾರೆ.

ಅದರ ವೀಡಿಯೋ ಲಿಂಕ್ ಇಲ್ಲಿದೆ..




ಬಂಧನಕ್ಕೆ ಸಂಬಂಧಿಸಿದಂತೆ ಚರ್ಚಿಸಲಾದ ಪ್ರಮುಖ ನ್ಯಾಯ ತೀರ್ಪುಗಳು:


1) ಅರ್ನೇಶ್ ಕುಮಾರ್ Vs ಬಿಹಾರ ರಾಜ್ಯ


2) ಲಲಿತಾ ಕುಮಾರಿ Vs ಉತ್ತರ ಪ್ರದೇಶ ರಾಜ್ಯ


3) ಡಿ.ಕೆ. ಬಸು Vs ಪಶ್ಚಿಮ ಬಂಗಾಳ








ಅರ್ನೇಶ್ ಕುಮಾರ್ Vs ಬಿಹಾರ ರಾಜ್ಯ (Supreme Court, Dated 01-07-2014) : ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲುವಾಸದ ಶಿಕ್ಷೆ ಇರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಅಪರಾಧಿಕ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧನದಲ್ಲಿ ಇಡುವ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದು. ಪೊಲೀಸ್ ಠಾಣೆಗಳಲ್ಲಿ ಆರೋಪಿಯ ಬಂಧನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಇದೊಂದು ಮೈಲುಗಲ್ಲಾದ ತೀರ್ಪು.

2014 8 SCC 273


ಲಲಿತಾ ಕುಮಾರಿ Vs ಉತ್ತರ ಪ್ರದೇಶ ರಾಜ್ಯ (Supreme Court, Dated 12-11-2013) : ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಸಂದರ್ಭದಲ್ಲಿ FIR ದಾಖಲಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಮಹತ್ವದ ತೀರ್ಪು ಇದು. ಐದು ಸದಸ್ಯರ ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ನೀಡಿದ ಈ ತೀರ್ಪು CrPC ಸೆಕ್ಷನ್ 154 ಜಾರಿ ಕುರಿತು, ದೂರು ನೀಡಿದ ತಕ್ಷಣ ಎಫ್‌ಐಆರ್ ದಾಖಲಿಸುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.


ಡಿ.ಕೆ. ಬಸು Vs ಪಶ್ಚಿಮ ಬಂಗಾಳ (Supreme Court, Dated 1-08-1997) : ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಗ್ರಹಿಸಲು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು. ಈ ತೀರ್ಪಿನಲ್ಲಿ ಬಂಧನದ ವೇಳೆ ವಿಚಾರಣಾಧಿಕಾರಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿತು. {1997 (1) SCC 416}





ಕೃಪೆ: ವಿಪಿಕೆ ಲಾ ಎನ್‌ಜಿಓ, ಇಂಡಿಯಾ (ರಿ)


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200