-->
ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್

ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್

ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್

ಅದ್ವೈತ ತತ್ವ ಅನುಸರಿಸುವ ಸ್ಮಾರ್ತ ಬ್ರಾಹ್ಮಣರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಿ ಅವರು ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಎಂಬ ಸ್ಮಾರ್ತ ಬ್ರಾಹ್ಮಣರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ತಮ್ಮನ್ನು ಪ್ರತ್ಯೇಕ ಧಾರ್ಮಿಕ ಪಂಗಡವಾಗಿ ಪರಿಗಣಿಸಿ ತಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಮನವಿಯನ್ನು ಈ ಹಿಂದೆ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸ್ಮಾರ್ತೃ ಬ್ರಾಹ್ಮಣರ ಸಮುದಾಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.ಸದ್ರಿ ಈ ಮನವಿಯನ್ನು ಪುರಸ್ಕರಿಸಿದರೆ, "ನಾವು ಅಲ್ಪಸಂಖ್ಯಾತರ ದೇಶವಾಗಲಿದ್ದೇವೆ," ಏಕೆಂದರೆ ಅದ್ವೈತ ತತ್ವದ ಅನುಯಾಯಿಗಳು ಅನೇಕರಿದ್ದಾರೆ ಎಂದು ಇದೇ ವೇಳೆ ಪೀಠ ಹೇಳಿತು.ಒಂದು ಜಾತಿ/ ಸಮುದಾಯವಾಗಿ ಸ್ಮಾರ್ತ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಅವರನ್ನು ಇತರ ಬ್ರಾಹ್ಮಣರಿಂದ ಪ್ರತ್ಯೇಕಿಸಲಾಗದು ಮತ್ತು ಅಂತಹ ಪ್ರತ್ಯೇಕತೆಯ ಅಸ್ತಿತ್ವ ಈ ಸಮುದಾಯಕ್ಕಿಲ್ಲ ಎಂದು ನ್ಯಾಯಪೀಠ ಹೇಳಿತ್ತು.

Ads on article

Advertise in articles 1

advertising articles 2

Advertise under the article