-->
ಶಾಲಾ ಸೇರ್ಪಡೆ ವಯಸ್ಸು: 6 ವರ್ಷ ಕಡ್ಡಾಯ-ಸರ್ಕಾರಿ ಆದೇಶಕ್ಕೆ ತಿದ್ದುಪಡಿ

ಶಾಲಾ ಸೇರ್ಪಡೆ ವಯಸ್ಸು: 6 ವರ್ಷ ಕಡ್ಡಾಯ-ಸರ್ಕಾರಿ ಆದೇಶಕ್ಕೆ ತಿದ್ದುಪಡಿ

ಶಾಲಾ ಸೇರ್ಪಡೆ ವಯಸ್ಸು: 6 ವರ್ಷ ಕಡ್ಡಾಯ-ಸರ್ಕಾರಿ ಆದೇಶಕ್ಕೆ ತಿದ್ದುಪಡಿ





ಮಕ್ಕಳ ಶಾಲಾ ಸೇರ್ಪಡೆಗೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವು 2025-26 ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.


ಈ ಕುರಿತಂತೆ ಶಿಕ್ಷಣ ಇಲಾಖೆ 2022ರ ಜುಲೈನಲ್ಲಿ ಮಾಡಿರುವ ಆದೇಶಕ್ಕೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿಯವರು ರಾಜ್ಯಪಾಲರ ಆದೇಶಾನುಸಾರ ಈ ಆದೇಶ ಹೊರಡಿಸಿದ್ದಾರೆ.


1ನೇ ತರಗತಿಗೆ ದಾಖಲಾಗುವ ಮಗುವಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಕಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕು ಎಂಬ ಆದೇಶವನ್ನು 2025-26ನೇ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.


2022ರ ಜುಲೈ 26ರಂದು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ಶಾಲೆ ಸೇರಲು ಮಗುವಿನ 6 ವರ್ಷ ಪೂರ್ಣಗೊಂಡಿರಬೇಕು ಎಂದು ತಿಳಿಸಲಾಗಿತ್ತು.


ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 20ರಲ್ಲಿ 1ನೇ ತರಗತಿಗೆ ಸೇರುವ ಮಗುವಿಗೆ ದಾಖಲಾತಿ ಪಡೆದುಕೊಳ್ಳಲು 60 ದಿನಗಳ ವಿನಾಯಿತಿ ನೀಡಲಾಗಿದೆ. ಈ ರಿಯಾಯಿತಿಯನ್ನು 2017ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಎಲ್.ಕೆ.ಜಿ ಸೇರುವ ಮಗುವಿಗೆ 3 ವರ್ಷ 10 ತಿಂಗಳು ಹಾಗೂ 1ನೇ ತರಗತಿಗೆ ಸೇರುವ ಮಗುವಿಗೆ ಕನಿಷ್ಟ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು.


ಇದೀಗ, ಹೊಸ ತಿದ್ದುಪಡಿಯಂತೆ, 2025-26ನೇ ಸಾಲಿಗೆ ಅನ್ವಯವಾಗುವಂತೆ, 1ನೇ ತರಗತಿ ಸೇರಲು ಮಗುವಿಗೆ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂದು ಆದೇಶ ಜಾರಿಗೆ ಬಂದಿದೆ.


ಮಕ್ಕಳ ಹಕ್ಕು ಕಾಯ್ದೆ-2009”ರ ಅಡಿ 6 ವರ್ಷ ತುಂಬಿದ ಪ್ರತಿ ಮಗುವಿಗೂ 'ಉಚಿತ ಮತ್ತು ಕಡ್ಡಾಯ ಶಿಕ್ಷಣ' ಘೋಷಣೆಯಡಿ ಉಚಿತವಾಗಿ ಶಿಕ್ಷಣ ಪಡೆಯುವ ಹಕ್ಕು ಇರುತ್ತದೆ.


Ads on article

Advertise in articles 1

advertising articles 2

Advertise under the article