-->
Consumer Court: ಪ್ರತಿವಾದ ಸಲ್ಲಿಸಲು ಗ್ರಾಹಕರ ಆಯೋಗ ಕೇವಲ 15 ದಿನಗಳ ವಿಳಂಬ ಮನ್ನಿಸಬಹುದು: ಸುಪ್ರೀಂ ಕೋರ್ಟ್‌

Consumer Court: ಪ್ರತಿವಾದ ಸಲ್ಲಿಸಲು ಗ್ರಾಹಕರ ಆಯೋಗ ಕೇವಲ 15 ದಿನಗಳ ವಿಳಂಬ ಮನ್ನಿಸಬಹುದು: ಸುಪ್ರೀಂ ಕೋರ್ಟ್‌

ಪ್ರತಿವಾದ ಸಲ್ಲಿಸಲು ಗ್ರಾಹಕರ ಆಯೋಗ ಕೇವಲ 15 ದಿನಗಳ ವಿಳಂಬ ಮನ್ನಿಸಬಹುದು: ಸುಪ್ರೀಂ ಕೋರ್ಟ್‌





ಗ್ರಾಹಕ ನ್ಯಾಯಾಲಯದಲ್ಲಿ ಎದುರುದಾರರು ತನ್ನ ಪ್ರತಿವಾದವನ್ನು ಸಲ್ಲಿಸಲು 15 ದಿನಗಳ ವರೆಗಿನ ವಿಳಂಬವನ್ನು ಮಾತ್ರ ಗ್ರಾಹಕ ಆಯೋಗವು ಮನ್ನಿಸಬಹುದು. ಅದಕ್ಕಿಂತ ಹೆಚ್ಚಿನ ಅವಧಿ ನೀಡಲು ಅದಕ್ಕೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



ಗ್ರಾಹಕ ಸಂರಕ್ಷಣಾ ಕಾಯಿದೆ-2019 ಪ್ರಕಾರ, ಎದುರುದಾರರು ತಮಗೆ ನೋಟೀಸ್ ಮತ್ತು ದೂರು ಪ್ರತಿ ದೊರೆತ 30 ದಿನದೊಳಗೆ ತಮ್ಮ ಪ್ರತಿವಾದ ಯಾ ಲಿಖಿತ ಹೇಳಿಕೆಯನ್ನು ಸಲ್ಲಿಸಬಹುದು. ಈ ನಿಗದಿತ ಅವಧಿಯನ್ನು ಮೀರಿ 15 ದಿನಗಳ ಒಳಗೆ ಪ್ರತಿವಾದ ಸಲ್ಲಿಸಿದರೆ, ಈ ವಿಳಂಬವನ್ನು ಗ್ರಾಹಕ ಆಯೋಗ ಮನ್ನಿಸಬಹುದು. ಆ ನಂತರ ಅವಧಿ ಮೀರಿದರೆ ವಿಳಂಬ ಮನ್ನಿಸುವ ಅಧಿಕಾರ ಗ್ರಾಹಕರ ನ್ಯಾಯಾಲಯಕ್ಕೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



ಸದ್ರಿ ಪ್ರಕರಣದಲ್ಲಿ ಎದುರುದಾರರು 45 ದಿನಗಳ ಅವಧಿಯನ್ನು ಮೀರಿ ಲಿಖಿತ ಹೇಳಿಕೆಯನ್ನು ಸಲ್ಲಿಸಿತು. ಗ್ರಾಹಕರ ಆಯೋಗ ಲಿಖಿತ ಹೇಳಿಕೆಯನ್ನು ಪಡೆಯಲು ವಿಳಂಬವನ್ನು ಕ್ಷಮಿಸಲು ನಿರಾಕರಿಸಿತು



ಗ್ರಾಹಕ ಸಂರಕ್ಷಣಾ ಕಾಯಿದೆ 1986 ರ ಸೆಕ್ಷನ್ 13 (1) (ಎ) ಅಡಿಯಲ್ಲಿ ಒದಗಿಸಲಾದ ಲಿಖಿತ ಹೇಳಿಕೆ ಯಾ ಪ್ರತಿವಾದವನ್ನು ಸಲ್ಲಿಸುವ ಅವಧಿಯನ್ನು 24.07.2020 ರಿಂದ ಜಾರಿಯಲ್ಲಿರುವ ಸಂರಕ್ಷಣಾ ಕಾಯಿದೆ, 2019 ಸೆಕ್ಷನ್ 38 (2) (ಎ) ಆಗಿ ಬದಲಾಯಿಸಲಾಗಿದೆ. ಕಾಯ್ದೆಯ ಪ್ರಕಾರ, 30 + 15 ದಿನಗಳನ್ನು ಮೀರಿದ ವಿಳಂಬವನ್ನು ಕ್ಷಮಿಸಲು ಈ ಆಯೋಗಕ್ಕೆ ಅಧಿಕಾರವಿಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.



Hilli Multipurpose Cold Storage Private Limited ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ನೀಡಿದ ತೀರ್ಪಿನ ಅನ್ವಯ, 1986ರ ಗ್ರಾಹಕ ಸಂರಕ್ಷಣಾ ಕಾಯ್ದೆಯು 45 ದಿನಗಳ ಅವಧಿಗಿಂತ ಹೆಚ್ಚಿನ ಸಮಯವನ್ನು ವಿಸ್ತರಿಸಲು ಗ್ರಾಹಕರ ವೇದಿಕೆಗೆ ಅಧಿಕಾರ ಇಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 13 ರ ಅಡಿಯಲ್ಲಿ ಸೂಚಿಸಲಾದ ಅವಧಿಯು ಕಡ್ಡಾಯವಾಗಿದೆ ಮತ್ತು ನಿರ್ದೇಶನಸೂಚಿಯಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಗ್ರಾಹಕ ದೂರಿನ ಜೊತೆಗೆ ಸಮ್ಮನ್ಸ್‌ ಸ್ವೀಕರಿಸಿದ ಸಮಯದಿಂದ ಈ ಅವಧಿ ಆರಂಭವಾಗುತ್ತದೆ ಎಂದು ತೀರ್ಪು ಹೇಳಿದೆ.



ಪ್ರಕರಣ: Antriksh Developers And Promoters Private Limited vs Kutumb Welfare Society

ಸುಪ್ರೀಂ ಕೋರ್ಟ್, SLP(C) 31629/2022 Dated 13-06-2022



Referred Case: New India Assurance Co. Ltd. vs. Hilli Multipurpose Cold Storage (P) Ltd. (2020) 5 SCC 757




Ads on article

Advertise in articles 1

advertising articles 2

Advertise under the article