-->
ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ

ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ

ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ

ಯಾವುದೇ ವ್ಯಕ್ತಿಯನ್ನು ಬಂಧಿಸುವುದಕ್ಕೆ ಮುನ್ನ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಮತ್ತು ಯಾವ ಕಾರಣಕ್ಕೆ ಈ ಬಂಧನ ಎಂಬ ಬಗ್ಗೆ ಸೂಕ್ತ ದಾಖಲೆಯನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.ಒಂದು ವೇಳೆ, ಯಾವುದೇ ಕಾರಣ ನೀಡದೆ ವ್ಯಕ್ತಿಯನ್ನು ಬಂಧಿಸಿದರೆ, ಆ ವ್ಯಕ್ತಿಯ ಪರಿಣಾಮಕಾರಿ ಪ್ರಾತಿನಿಧ್ಯ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ನ್ಯಾ. ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.ಮಣಿಪುರ ಪೊಲೀಸರು ಅಬ್ದುಲ್ ಹನಾನ್ ಎಂಬಾತನನ್ನು ಎನ್‌ಡಿಪಿಎಸ್(ಮಾದಕ ದ್ರವ್ಯ ಕಳ್ಳಸಾಗಣೆ) ಕಾಯ್ದೆಯಡಿ ಬಂಧಿಸಿದ್ದರು.ಈ ಬಂಧನವನ್ನು ಪ್ರಶ್ನಿಸಿ ಅಬ್ದುಲ್ ಹನ್ನಾನ್ ಹೈಕೋರ್ಟ್ ಮೆಟ್ಟಿಲೇರಿದ್ದ. ಬಂಧನದ ಸಮಯದಲ್ಲಿ, ತನಗೆ ಅಧಿಕಾರಿಗಳು ಯಾವ ಕಾರಣಕ್ಕಾಗಿ ನನ್ನನ್ನು ಬಂಧಿಸಲಾಗುತ್ತಿದೆ ಎಂಬ ಕುರಿತು ದಾಖಲೆಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದರು. ಹನ್ನಾನ್ ಅವರ ಈ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು.ಹೈಕೋರ್ಟ್ ತೀರ್ಪು ವಿರುದ್ಧ ಮಣಿಪುರ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕಾನೂನಿನಡಿ ನಿಗದಿಪಡಿಸಲಾಗಿರುವ ಕ್ರಮಗಳನ್ನು ಅನಸರಿಸುವುದು ಪೊಲೀಸರ ಕರ್ತವ್ಯ. ಈ ಕಾನೂನಿನ ಕ್ರಮವನ್ನು ಅನುಸರಿಸದೆ ವ್ಯಕ್ತಿಯನ್ನು ಬಂಧಿಸುವ ಮೂಲಕ ತಾತ್ಕಾಲಿಕವಾಗಿಯೂ ಆತನ ಹಕ್ಕನ್ನು ಉಲ್ಲಂಘಿಸಬಾರದು ಎಂದು ನ್ಯಾಯಪೀಠ ಪೊಲೀಸರಿಗೆ ಹೇಳಿದೆ.Ads on article

Advertise in articles 1

advertising articles 2

Advertise under the article