-->
ಕಿರಿಯ ವಕೀಲರು ಜೀತದಾಳುಗಳಲ್ಲ ಅವರಿಗೂ ಉತ್ತಮ ವೇತನ ಕೊಡಿ: ಸಿಜೆಐ ಚಂದ್ರಚೂಡ್

ಕಿರಿಯ ವಕೀಲರು ಜೀತದಾಳುಗಳಲ್ಲ ಅವರಿಗೂ ಉತ್ತಮ ವೇತನ ಕೊಡಿ: ಸಿಜೆಐ ಚಂದ್ರಚೂಡ್

ಕಿರಿಯ ವಕೀಲರು ಜೀತದಾಳುಗಳಲ್ಲ ಅವರಿಗೂ ಉತ್ತಮ ವೇತನ ಕೊಡಿ: ಸಿಜೆಐ ಚಂದ್ರಚೂಡ್





ಹಿರಿಯ ವಕೀಲರು ತಮ್ಮ ಕೈಕೆಳಗೆ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಕಿರಿಯರಿಗೆ ಘನತೆಯುಕ್ತ ಜೀವನ ನಡೆಸಲು ಸಹಕಾರಿಯಾಗುವಂತೆ ಉತ್ತಮ ವೇತನವನ್ನು ನೀಡಬೇಕು. ಮಹಾನಗರಗಳಲ್ಲಿ ಈಗಷ್ಟೇ ವೃತ್ತಿ ಜೀವನ ಆರಂಭ ಮಾಡುತ್ತಿರುವವರಿಗೆ ಇದು ಅತಿ ಅಗತ್ಯವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಡಿವೈ ಚಂದ್ರಚೂಡ್ ಹೇಳಿದ್ದಾರೆ.



ಹಲವು ಹಿರಿಯ ವಕೀಲರು ತಮ್ಮ ಕಿರಿಯ ಸಹೋದ್ಯೋಗಿ ವಕೀಲರನ್ನು ಜೀತದಾಳುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಜ್ಯೂನಿಯರ್ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಏಕೈಕ ಕಾರಣಕ್ಕೆ ಹಿರಿಯ ವಕೀಲರು ಹೀಗೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಇದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು.



ಇದು ಒಂದು ರೀತಿಯಲ್ಲಿ ಕಾಲೇಜಿನಲ್ಲಿ ನಡೆಯುತ್ತಿದ್ದ Raging ಥರ ನಡೆಯುತ್ತಿದೆ. ಹಲವು ವರ್ಷಗಳ ವರೆಗೆ ಜ್ಯೂನಿಯರ್ ಲಾಯರ್‌ಗಳನ್ನು ಜೀತ ಕಾರ್ಮಿಕರ ರೀತಿಯಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅಂತ ಜಮಾನದಿಂದ ನಾವು ಬೆಳೆದುಕೊಂಡು ಬಂದಿದ್ದೇವೆ. ಇದನ್ನೇ ನಾವು ಕಿರಿಯರಿಗೆ ಕಲಿಸಿಕೊಡಬಾರದು ಎಂದು ಅವರು ಹಿರಿಯ ವಕೀಲರಿಗೆ ಕಿವಿಮಾತು ಹೇಳಿದರು.



ನಾನೂ ಒಂದು ಸಂದರ್ಭದಲ್ಲಿ ಇಂತಹದ್ದೇ ಕೆಟ್ಟ ಸಮಯವನ್ನು ಕಳೆದಿದ್ದೇನೆ. ಆದರೆ, ಈಗ ಹಿರಿಯ ವಕೀಲರು ತಾವು ತಮ್ಮ ಸಹೋದ್ಯೋಗಿಗಳಿಗೆ ಸಂಬಳವನ್ನೇ ನೀಡಲ್ಲ ಎನ್ನುವ ಹಾಗಿಲ್ಲ. ಹಿಂದಿನ ಕಾಲದಲ್ಲಿ ಕುಟುಂಬಗಳು ಆರ್ಥಿಕ ಸಂರಚನೆಯೇ ಬೇರೆಯದ್ದಾಗಿತ್ತು. ಆರ್ಥಿಕ ಸಂಪನ್ಮೂಲ ಇಲ್ಲ ಎನ್ನುವ ಕಾರಣಕ್ಕೆ ಅದೆಷ್ಟೋ ವಕೀಲರು ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥರಕ್ಕೆ ಹೋಗಲಾಗಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ ಎಂದು ಚಂದ್ರಚೂಡ್ ಕಿರಿಯರ ವೃತ್ತಿ ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವಂತೆ ಹಿರಿಯ ವಕೀಲರಿಗೆ ಬುದ್ದಿಮಾತು ಹೇಳಿದರು.


Related Video





...

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200