-->
ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರೂಪದ ಪ್ರಕರಣಕ್ಕೆ ಟ್ವಿಸ್ಟ್! ಪೋಕ್ಸೊ ಕೇಸ್‌ ರದ್ದು

ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರೂಪದ ಪ್ರಕರಣಕ್ಕೆ ಟ್ವಿಸ್ಟ್! ಪೋಕ್ಸೊ ಕೇಸ್‌ ರದ್ದು

ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರೂಪದ ಪ್ರಕರಣಕ್ಕೆ ಟ್ವಿಸ್ಟ್! ಪೋಕ್ಸೊ ಕೇಸ್‌ ರದ್ದು






ವ್ಯಕ್ತಿಯೊಬ್ಬರ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ. ಅಪ್ರಾಪ್ತ ಪತ್ನಿಯನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ ಆರೋಪ ಹೊತ್ತಿದ್ದ ವ್ಯಕ್ತಿಯ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.



ಅಚ್ಚರಿ ಎಂಬಂತೆ ನ್ಯಾಯಪೀಠ ಈ ತೀರ್ಪು ನೀಡಿದ್ದು, ಪರಸ್ಪರ ಮಾತುಕತೆಯಿಂದ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ. ವಿಚಾರಣೆಯಿಂದ ಕೋರ್ಟ್‌ನ ಅಮೂಲ್ಯ ಸಮಯ ವ್ಯರ್ಥವಾಗುವ ಸಾಧ್ಯತೆ ಇದ್ದು, ಕಾಲಹರಣ ಮತ್ತು ಕಾನೂನಿನ ದುರ್ಬಳಕೆ ತಪ್ಪಿಸಲು ಈ ಆದೇಶ ಹೊರಡಿಸುವುದಾಗಿ ಎಂದು ನ್ಯಾ. ಕೆ. ನಟರಾಜನ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಹೇಳಿದೆ.



ಪ್ರಕರಣದ ದೂರುದಾರರು ಮತ್ತು ಆರೋಪಿ ಇಬ್ಬರೂ ಕೋರ್ಟ್ ಹೊರಗೆ ಪ್ರಕರಣವನ್ನು ರಾಜಿ ಸಂಧಾನ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಹಾಗಾಗಿ ವಿಚಾರಣೆ ಮುಂದುವರಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.



ಇನ್ನೊಂದು ಪ್ರಕರಣ: ವ್ಯತಿರಿಕ್ತ ತೀರ್ಪು

ಕಳೆದ ಅಕ್ಟೋಬರ್‌ 12ರಂದು ಕರ್ನಾಟಕ ಹೈಕೋರ್ಟ್‌ನ ಇನ್ನೊಂದು ಪೀಠ ಇದೇ ರೀತಿಯ ಇನ್ನೊಂದು ಪೋಕ್ಸೊ ಪ್ರಕರಣದಲ್ಲಿ ಇದಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿದ್ದು ಗಮನಾರ್ಹವಾಗಿದೆ.



ಪೋಕ್ಸೊ ಪ್ರಕರಣದಲ್ಲಿ ಮುಸ್ಲಿಂ ಸಂಪ್ರದಾಯ ಮತ್ತು ವೈಯಕ್ತಿಕ ಧರ್ಮದ ಕಾನೂನನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮದುವೆಯಾಗಿದ್ದರೂ ಅಪ್ರಾಪ್ತ ಬಾಲಕಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವ ವಿವೇಚನೆ ಆಕೆಗೆ ಇರುವುದಿಲ್ಲ. ಒಂದು ವೇಳೆ ಆಕೆ ಒಪ್ಪಿದ್ದರೂ, ಒಪ್ಪದಿದ್ದರೂ ಅಪ್ರಾಪ್ತೆಯೊಡಗಿನ ಲೈಂಗಿಕ ಕ್ರಿಯೆಯನ್ನು ಕೋರ್ಟ್‌ ಪೋಕ್ಸೊ ಕಾಯ್ದೆಯಡಿ ಅಪರಾಧ ಪ್ರಕರಣವಾಗಿರುತ್ತದೆ ಎಂದು ತೀರ್ಪು ನೀಡಿತ್ತು.



ಈ ಪ್ರಕರಣದ ತೀರ್ಪಿಗೆ ವ್ಯತಿರಿಕ್ತವಾದ ತೀರ್ಪು ನ್ಯಾ. ನಟರಾಜನ್ ನ್ಯಾಯಪೀಠದಿಂದ ಬಂದಿದೆ.

ಸದ್ರಿ ಆ ಪ್ರಕರಣದಲ್ಲಿ ಅಪ್ರಾಪ್ತ ಪತ್ನಿಯ ಮೇಲೆ ಲೈಂಗಿಕ ಹಿಂಸಾಚಾರ ನೀಡಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ದೂರು ದಾಖಲಾದ ನಂತರ ಪ್ರಕರಣವನ್ನು ರದ್ದುಗೊಳಿಸುವಂತೆ ಸಂತ್ರಸ್ತೆ ಪತ್ನಿ ಮನವಿ ಮಾಡಿದ್ದರೂ ಇದನ್ನು ಕೋರ್ಟ್‌ ಪರಿಗಣಿಸದೆ ಪ್ರಕರಣವನ್ನು ರದ್ದುಗೊಳಿರಲಿಲ್ಲ.



ಹಿಂದಿನ ಪ್ರಕರಣದಲ್ಲಿ ಆಗಿದ್ದೇನು?:

ಮುಸ್ಲಿಂ ವೈಯಕ್ತಿಕ ಕಾನೂನು (ಮೊಹಮದನ್ ಲಾ) ಪ್ರಕಾರ ಹೆಣ್ಮಕ್ಕಳಿಗೆ 15 ವರ್ಷ ಆದರೆ ಅವರು ಪ್ರೌಢಾವಸ್ಥೆಗೆ ಬಂದರು ಎಂದು ಪರಿಗಣಿಸಿ ಮದುವೆ ಮಾಡಬಹುದು. ಆದರೆ, ಈ ವಾದವನ್ನು ಹೈಕೋರ್ಟ್‌, ವಿಶೇಷ ಕಾಯ್ದೆಯಾದ 'ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ' ಯನ್ನು (ಪೋಕ್ಸೋ) ಯಾವುದೇ 'ವೈಯಕ್ತಿಕ ಕಾನೂನು' ಅತಿಕ್ರಮಿಸಲು (ಓವರ್‌ ರೈಡ್‌) ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.



ಪ್ರಾಪ್ತ ವಯಸ್ಸು ಮೀರದ ಯುವತಿಯನ್ನು ಮದುವೆಯಾದ್ದ ಆರೋಪಿ, ಮದುವೆಯ ಬಳಿಕ ಆಕೆಯನ್ನು ಗರ್ಭಿಣಿಯಾಗಿಸಿದ್ದ ಮತ್ತು ಈ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ

Ads on article

Advertise in articles 1

advertising articles 2

Advertise under the article